Asianet Suvarna News Asianet Suvarna News

ಮಹಿಳೆಯರಿಗಿಲ್ಲಿದೆ ಭರ್ಜರಿ ಗುಡ್ ನ್ಯೂಸ್ : ಕೈಗೆಟುಕುವ ದರದಲ್ಲಿ ಪರಿಶುದ್ಧ ರೇಷ್ಮೆ ಸೀರೆ

ಮಹಿಳೆಯರಿಗೆ ಇಲ್ಲಿದೆ ಬಂಪರ್ ಆಫರ್. ನಿಮಗೆ ಕೈಗೆಟುಕುವ ದರದಲ್ಲಿ ಸಿಗಲಿವೆ ಪರಿಶುದ್ಧ ರೇಷ್ಮೆ ಸೀರೆಗಳು

Pure Silk Saree Sale And Exhibition in Shivamogga snr
Author
Bengaluru, First Published Oct 13, 2020, 2:55 PM IST
  • Facebook
  • Twitter
  • Whatsapp

ಶಿವಮೊಗ್ಗ (ಅ.13): ಹಸ್ತಶಿಲ್ಪಿ ಸಂಸ್ಥೆಯು ಭಾರತ ಸರ್ಕಾರದ ಜವಳಿ ಮಂತ್ರಾಲಯದಿಂದ ನೊಂದಾಯಿಸಲ್ಪಟ್ಟಿದ್ದು, ಭಾರತದಲ್ಲಿರುವ ಕುಶಲಕರ್ಮಿಗಳು ಮತ್ತು ನೇಕಾರರ ಶ್ರೋಯೋಭಿವೃದ್ಧಿಗಾಗಿ ಮೈಸೂರಿನಲ್ಲಿ ಸ್ಥಾಪಿಸಲಾಗಿದೆ.

ನೇಕಾರರು ಮತ್ತು ಕುಶಲಕರ್ಮಿಗಳು ಉತ್ಪಾದಿಸುವ ಉತ್ಪನ್ನಗಳಿಗೆ ದೇಶದ ಮುಖ್ಯ ನಗರಗಳಲ್ಲಿ ಮಾರಾಟ ಮೇಳವನ್ನು ಆಯೋಜಿಸುವ ಮೂಲಕ ನೇರವಾಗಿ ಅವರ ಉತ್ಪನ್ನಗಳು ಗ್ರಾಹಕರಿಗೆ ತಲುಪಿಸುವಂತೆ ವ್ಯವಸ್ಥೆ ಮಾಡುವುದು ಮತ್ತು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇಕಾರರೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭವನ್ನು ಹೆಚ್ಚು ಗಳಿಸುವಂತೆ ಮಾಡುವ ಉದ್ದೇಶವನ್ನು ಸಂಸ್ಥೆಯು ಹೊಂದಿದೆ. ಅದರಂತೆ ಶಿವಮೊಗ್ಗದಲ್ಲಿ ಮೂರನೇ ಬಾರಿಗೆ ವಿಜಯದಶಮಿ ಹಬ್ಬವನ್ನು ಗಮನದಲ್ಲಿಟ್ಟುಕೊಂಡು ‘ಸಿಲ್‌್ಕ ಇಂಡಿಯ-2020’ ಮೇಳವನ್ನು ದಿನಾಂಕ ಅ. 15 ರಿಂದ 24 ರವರೆಗೆ 10 ದಿವಸಗಳ ಕಾಲ ನಗರದ ರಾಯಲ್‌ ಆರ್ಕಿಡ್‌ ಸೆಂಟ್ರೆಲ್‌ನಲ್ಲಿ ಹಮ್ಮಿಕೊಳ್ಳಲಾಗಿದೆ.

ಪಾನ್‌ ಮಸಾಲಾ ಬ್ಯಾನ್‌ : ಅಡಕೆ ಬೆಳೆಗಾರರಿಗೆ ಕಾದಿದ್ಯಾ ಆಘಾತ

ಈ ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು 50 ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ತಮ್ಮ ರಾಜ್ಯದ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳನ್ನು ಜನತೆಯ ಮುಂದೆ ಪ್ರತಿದಿನ ಬೆಳಗ್ಗೆ 10.30 ರಿಂದ ರಾತ್ರಿ 8.30 ರವರೆಗೆ ಪ್ರದರ್ಶಿಸಿ ಮಾರಾಟ ಮಾಡುವರು.

ಮೇಳದಲ್ಲಿ ತಸ್ಸರ್‌ ರೇಷ್ಮೆ ಸೀರೆಗಳು, ಕ್ರೇಪ್‌ ಮತ್ತು ಜಾರ್ಜೆಟ್‌ ಸಿಲ್‌್ಕ ಸೀರೆಗಳು, ಅರಿಣಿ ರೇಷ್ಮೆ ಸೀರೆಗಳು, ಧರ್ಮಾವರಂ ಸೀರೆಗಳು, ಕಾಂಚಿಪುರಂ ಸಿಲ್‌್ಕ ಮತ್ತು ಮದುವೆ ಸೀರೆಗಳು, ರಾ ಸಿಲ್‌್ಕ ಮತ್ತು ಕೋಸಾ ಸೀರೆಗಳು, ಕಲ್ಕೊತ್ತಾ ಗಣಪತಿ ಸೀರೆಗಳು, ಢಾಕ ಸೀರೆಗಳು, ಡಿಸೈನರ್‌ ಎಂಬ್ರಾಯಿಡರಿ ಸೀರೆ ಮತ್ತು ಡ್ರೆಸ್‌, ಬಲ್‌ಚೂರಿ ರೇಷ್ಮೆ, ಮಟ್ಕಾ ಸೀರೆಗಳು, ಪ್ರಿಂಟೆಡ್‌ ಸೀರೆಗಳು, ಪಶ್ಮೀನಾ ಸೀರೆಗಳು, ಡಿಸೈನರ್‌ ಡ್ರೆಸ್‌ ಮೇಟಿರಿಯಲ್ಸ್‌ಗಳು ಮತ್ತು ಸೀರೆಗಳು, ಬಾಗಲ್‌ಪುರ್‌ ರೇಷ್ಮೆ ಸೀರೆ ಮತ್ತು ಡ್ರೆಸ್‌, ಉಪ್ಪಡಾ ಮತ್ತು ಗೊಡ್ವಾಲ್‌ ಸೀರೆಗಳು, ಮಹೇಶ್ವರಿ ಮತ್ತು ಕೋಟಾ ಸಿಲ್‌್ಕ, ಟೆಂಪಲ್‌ ಬಾರ್ಡಾರ್‌ಉಳ್ಳ ಮುಲ್‌ಬಾರಿ ಸಿಲ್‌್ಕ, ಕಲ್ಕೋತ್ತಾ ರೇಷ್ಮೆ ಸೀರೆಗಳು, ಬನಾರಸ್‌ ಮತ್ತು ಜಮ್‌ದಾನಿ ರೇಷ್ಮೆ, ಶಿಫಾನ್‌ ಸೀರೆಗಳು, ಬುಟ್ಟಿಸೀರೆಗಳು, ಚಂದೇರಿ ಸಿಲ್‌್ಕ ಮತ್ತು ಕೈ ಅಚ್ಚಿನ ಸೀರೆಗಳು ಪ್ರದರ್ಶನಗೊಳ್ಳಲಿವೆ.

ಇದಲ್ಲದೆ ಕುರ್ತಾ, ಸ್ಟೋಲ್ಸ್‌, ಶಾಲುಗಳು, ಸಲ್‌ವಾರ್‌ ಕಮೀಜ್‌ ಮತ್ತು ಉಡುಪಿನ ಬಟ್ಟೆಗಳು, ಕುಶನ್‌ ಕವರ್‌ಗಳು ಮತ್ತು ಬೆಡ್‌ಶೀಟ್‌ಗಳನ್ನು ಈ ವಸ್ತುಪ್ರದರ್ಶನದಲ್ಲಿ ಪ್ರದರ್ಶಿಸಿ ಮಾರಾಟ ಮಾಡಲಾಗುವುದು.. ಈ ವಸ್ತುಗಳನ್ನು ಉತ್ವಾದಕರೆ ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಿರುವುದರಿಂದ ವಸ್ತುಗಳು ನ್ಯಾಯಯುತ ಬೆಲೆಯಲ್ಲಿ್ಲ ದೊರಕುತ್ತವೆ.

ಆದುದರಿಂದ ಶಿವಮೊಗ್ಗ ಕ್ಕೆ ಭೇಟಿ ನೀಡುವ ಪ್ರವಾಸಿಗರು ಹಾಗೂ ಶಿವಮೊಗ್ಗ ನಗರ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು 10 ದಿವಸಗಳ ಈ ವಿಶಿಷ್ಟಸಿಲ್‌್ಕ ಇಂಡಿಯಾ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಉತ್ಪಾದಕರನ್ನು ಪ್ರೋತ್ಸಾಹಿಸಬೇಕೆಂದು ಸಂಸ್ಥೆ ಕೋರಿದೆ. ಮೇಳಕ್ಕೆ ಪ್ರವೇಶವನ್ನು ಉಚಿತವಾಗಿ ಕಲ್ಪಿಸಲಾಗಿದೆ. ಮಾಹಿತಿಗಾಗಿ 8660714252, 8073962103 ಸಂಪರ್ಕಿಸಬಹುದಾಗಿದೆ.

Follow Us:
Download App:
  • android
  • ios