ಜನವರಿ ಅಂತ್ಯಕ್ಕೆ 50 ವಿದ್ಯುತ್ ಚಾಲಿತ ಬಸ್ ಖರೀದಿ: ಶ್ರೀರಾಮುಲು
ರಾಜ್ಯ ಸಾರಿಗೆ ಸಂಸ್ಥೆಯನ್ನು ಪರಿಸರ ಸ್ನೇಹಿಯಾಗಿ ರೂಪಾಂತರಗೊಳಿಸಲು ನಿರ್ಧರಿಸಲಾಗಿದ್ದು, ಈ ನಿಟ್ಟನಲ್ಲಿ ಜನವರಿ ಅಂತ್ಯದ ವೇಳೆಗೆ 50 ವಿದ್ಯುತ್ ಚಾಲಿತ ಬಸ್‌ಗಳ ಖರೀದಿ ಮಾಡಲಾಗುತ್ತಿದೆ. 2030ರ ವೇಳೆಗೆ ಹಳೆಯ 30 ಸಾವಿರ ಬಸ್‌ಗಳಿಗೆ ಬದಲಾಗಿ ವಿದ್ಯುತ್ ಚಾಲಿತ ಬಸ್‌ಗಳ ಖರೀದಿಸುವ ಉದ್ದೇಶವಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಹಿರಿಯೂರು ಡಿ.7) : ರಾಜ್ಯ ಸಾರಿಗೆ ಸಂಸ್ಥೆಯನ್ನು ಪರಿಸರ ಸ್ನೇಹಿಯಾಗಿ ರೂಪಾಂತರಗೊಳಿಸಲು ನಿರ್ಧರಿಸಲಾಗಿದ್ದು, ಈ ನಿಟ್ಟನಲ್ಲಿ ಜನವರಿ ಅಂತ್ಯದ ವೇಳೆಗೆ 50 ವಿದ್ಯುತ್ ಚಾಲಿತ ಬಸ್‌ಗಳ ಖರೀದಿ ಮಾಡಲಾಗುತ್ತಿದೆ. 2030ರ ವೇಳೆಗೆ ಹಳೆಯ 30 ಸಾವಿರ ಬಸ್‌ಗಳಿಗೆ ಬದಲಾಗಿ ವಿದ್ಯುತ್ ಚಾಲಿತ ಬಸ್‌ಗಳ ಖರೀದಿಸುವ ಉದ್ದೇಶವಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರದ ಹುಳಿಯಾರು ರಸ್ತೆಯ ತಾಲೂಕು ಕ್ರೀಡಾಂಗಣದ ಬಳಿ ಮಂಗಳವಾರ ನೂತನ ಬಸ್ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಸಾರಿಗೆ ಸಂಸ್ಥೆಗೆ ತುರ್ತಾಗಿ 600 ಡೀಸೆಲ…, 60 ವೋಲ್ವೋ ಬಸ್ ಖರೀದಿಸಲಾಗುತ್ತಿದೆ. ಕೇಂದ್ರ ಸರ್ಕಾರ ರಸ್ತೆ ಸುರಕ್ಷತೆ ಅಡಿ 250 ಕೋಟಿ ರು. ಅನುದಾನ ನೀಡಿದೆ. ರಾಜ್ಯಾದ್ಯಂತ ರಸ್ತೆ ಅಪಘಾತ ತಡೆಯಲು ಬ್ಲಾಕ್‌ಸ್ಪಾಟ್ ಗುರುತಿಸಲಾಗುವುದು. ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡಲಾಗಿದೆ ಎಂದರು.
ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದ ಗಾಲಿ ಜನಾರ್ದನ ರೆಡ್ಡಿ ದಿಢೀರ್ ಗದಗ ಭೇಟಿ, ಹೊಸ ಪಕ್ಷ ಕಟ್ತಾರಾ?
6 ಲಕ್ಷ ಬೋರ್‌ವೆಲ್ ರೀಚಾರ್ಜ್:
ಹಿರಿಯೂರು ನಗರದಲ್ಲಿ 6 ಕೋಟಿ ರು. ವೆಚ್ಚದಲ್ಲಿ ಬಸ್ ಡಿಪೋ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಶಾಸಕಿ ಪೂರ್ಣಿಮಾ ಕಾಲ್ಗುಣದಿಂದ ವಿವಿ ಸಾಗರ ಭರ್ತಿಯಾಗಿದೆ. ಭ ದ್ರಾದಿಂದ ನೀರು ಹರಿಯುತ್ತಿದೆ. ವೇದಾವತಿ ನದಿ ತುಂಬಿ ಹರಿಯುತ್ತಿರುವುದರಿಂದ ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ಭಾಗದ 4 ಲಕ್ಷ ಬೋರ್ ವೆಲ… ರೀಚಾರ್ಜ ಆಗಿವೆ. ಶಾಸಕಿಯಾಗಿ ತಾಲೂಕಿಗೆ ರಾಜ್ಯದಲ್ಲಿಯೇ ಅತಿ ಹೆಚ್ಚು 11 ಸಾವಿರ ಮನೆಗಳನ್ನು ಸರ್ಕಾರದಿಂದ ಮಂಜೂರಿ ಮಾಡಿಸಿದ್ದಾರೆ. ಹಿರಿಯೂರು ನಗರ ಸುಂದರೀಕರಣಕ್ಕೆ ಒತ್ತು ನೀಡಿದ್ದಾರೆ. 150 ಕೋಟಿ ರು. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ. 10 ಕೋಟಿ ರು. ವೆಚ್ಚದಲ್ಲಿ ತಾಲೂಕು ಆಡಳಿತ ಭವನ ಅನುದಾನ ತಂದಿದ್ದಾರೆ. ನಗರದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ನಾಂದಿ ಹಾಡಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಬಸ್ ಡಿಪೋ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. 2018 ರಲ್ಲಿ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಗಳನ್ನು ಬಹುತೇಕ ಈಡೇರಿಸಲಾಗಿದೆ. ಎರಡು ತಿಂಗಳ ಹಿಂದೆ ಕಾರ್ಯಕ್ರಮ ಆಯೋಜನೆ ಮಾಡಬೇಕಿತ್ತು. ಕಾರಣಾಂತರಗಳಿಂದ ಕಾರ್ಯಕ್ರಮ ಮುಂದೂಡಲಾಯಿತು ಎಂದರು.
ಹಿರಿಯೂರು ಕ್ಷೇತ್ತ ವ್ಯಾಪ್ತಿಯಲ್ಲಿ 4500 ಅಲೆಮಾರಿಗಳಿಗೆ ಮನೆ, 3200 ಎಸ್‌ಸಿ, ಎಸ್ಟಿಗಳಿಗೆ ಹಾಗೂ 1048 ನಿವೇಶನ ರಹಿತರಿಗೆ, ಕೊಳಚೆ ಮಂಡಳಿಯಿಂದ 725 ಹಾಗೂ 425 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪರಿಶಿಷ್ಟವರ್ಗಗಳ ಇಲಾಖೆಯಿಂದ 5 ಕೋಟಿ ರು ವೆಚ್ಚದಲ್ಲಿ ರಸ್ತೆ, 5 ಕೋಟಿ ರು. ವೆಚ್ಚದಲ್ಲಿ ಬೀದಿ ದೀಪ ಅಳವಡಿಕೆ ಹಾಗೂ 12 ವಾಲ್ಮೀಕಿ ಭ ವನ ನಿರ್ಮಾಣ ಮಾಡಲಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಮುಂಗಾರು ಹಂಗಾಮಿನಿನಲ್ಲಿ ಮಳೆಯಿಂದ ಹಾನಿಗೊಳಾದ ಮನೆಯ ಮಾಲೀಕರಿಗೆ 50 ಸಾವಿರ ರು. ಪರಿಹಾರ ನೀಡುವ ಆದೇಶ ಪತ್ರ ನೀಡಲಾಯಿತು.
ಹಿರಿಯೂರಿನಲ್ಲಿ 6 ಕೋಟಿ ವೆಚ್ಚದಲ್ಲಿ ಬಸ್ ಡಿಪೋ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿದ ಸಚಿವ ಶ್ರೀರಾಮುಲು
ನಗರಸಭೆ ಪ್ರಭಾರ ಅಧ್ಯಕ್ಷ ಎಚ್.ಎಂ.ಗುಂಡೇಶ್ ಕುಮಾರ್, ಸಾರಿಗೆ ಸಂಸ್ಥೆ ನಿರ್ದೇಶಕರುಗಳಾದ ಪಿ. ರುದ್ರೇಶ್, ಆರುಂಡಿ ನಾಗರಾಜ್, ರಾಜು ವಿಠಲಸ ಜರತಾರಘರ, ಡಿವೈಎಸ್‌ಪಿ ರೋಷನ್ ಜಮೀರ್, ತಹಸೀಲ್ದಾರ್ ಪ್ರಶಾಂತ ಕೆ ಪಾಟೀಲ…, ತಾಪಂ ಇಓ ಈಶ್ವರ ಪ್ರಸಾದ್, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್.ಹೆಬ್ಬಾಳ್ ಇದ್ದರು.