ಹೊಸಪೇಟೆ(ಅ.14): ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರ ಬಹು ನಿರೀಕ್ಷಿತ ಚಿತ್ರ ‘ಜೇಮ್ಸ್‌’ ಚಿತ್ರದ ಚಿತ್ರೀಕರಣ ತಾಲೂಕಿನ ಕಮಲಾಪುರದ ಆರೇಂಜ್‌ ಕೌಂಟಿ ರೆಸಾರ್ಟ್‌ನಲ್ಲಿ ನಡೆಯಲಿದೆ. ಪುನೀತ್‌ ರಾಜ್‌ ಕುಮಾರ್‌ ಅವರು ಇಂದು(ಬುಧವಾರ) ನಗರಕ್ಕೆ ಆಗಮಿಸಲಿದ್ದಾರೆ.

ನಗರದ ನಿವಾಸಿ ಹಾಗೂ ಚಿತ್ರದ ನಿರ್ಮಾಪಕ ಕಿಶೋರ್‌ ಪತ್ತಿಕೊಂಡ ಅವರ ಕಿಶೋರ್‌ ಪ್ರೊಡಕ್ಷನ್‌ನ ಮೊದಲ ಚಿತ್ರದ ಶೂಟಿಂಗ್‌ಗಾಗಿ ಗಂಗಾವತಿ ಬಳಿ ಭವ್ಯ ಸೆಟ್‌ ಹಾಕಲಾಗಿದೆ. ಕಮಲಾಪುರದ ಆರೇಂಜ್‌ ಕೌಂಟಿ ರೆಸಾರ್ಟ್‌ನಲ್ಲಿ ನಾಲ್ಕು ದಿನ ಶೂಟಿಂಗ್‌ ನಡೆಯಲಿದ್ದು, ನಾಲ್ಕು ದಿನಗಳ ಬಳಿಕ ಒಂದು ವಾರ ಗಂಗಾವತಿ ಬಳಿ ಶೂಟಿಂಗ್‌ ನಡೆಯಲಿದೆ.

ಹೊಸಪೇಟೆ: ಹಂಪಿ ಸ್ಮಾರಕ ವೀಕ್ಷಿಸಿದ ಟಾಲಿವುಡ್‌ ಖ್ಯಾತ ನಟ ಶ್ರೀಕಾಂತ್‌

ಈ ಚಿತ್ರದ ಚಿತ್ರೀಕರಣದಲ್ಲಿ ಪುನೀತ್‌ ರಾಜಕುಮಾರ್‌ ಹಾಗೂ ತೆಲುಗು ನಟ ಶ್ರೀಕಾಂತ್‌ ಅವರು ಭಾಗಿಯಾಗಲಿದ್ದಾರೆ. ಚಿತ್ರದ ನಾಯಕಿಯ ಆಯ್ಕೆ ಪ್ರಕ್ರಿಯೆ ನಡೆದಿದೆ. ನಿರ್ದೇಶಕ ಚೇತನ್‌ಕುಮಾರ್‌ ನಿರ್ದೇಶನದ ಬಿಗ್‌ ಬಜೆಟ್‌ನ ಚಿತ್ರ ಇದಾಗಿದ್ದು, ಚರಣ್‌ರಾಜ್‌ ಸಂಗೀತ ಸಂಯೋಜಿಸಿದ್ದಾರೆ.

ಜೇಮ್ಸ್‌ ಚಿತ್ರದ ಶೂಟಿಂಗ್‌ಗೆ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ ಅವರು ಇಂದು ನಗರಕ್ಕೆ ಆಗಮಿಸಲಿದ್ದಾರೆ. ಚಿತ್ರಕ್ಕೆ ಇನ್ನೂ ನಾಯಕಿ ಆಯ್ಕೆ ಮಾಡಿಲ್ಲ. ಕೋವಿಡ್‌ ಹಿನ್ನೆಲೆ ಶೂಟಿಂಗ್‌ ತಡವಾಗಿದೆ. ಇದೊಂದು ಬಿಗ್‌ ಬಜೆಟ್‌ ಚಿತ್ರವಾಗಿದೆ ಎಂದು ಚಿತ್ರದ ನಿರ್ಮಾಪಕ ಕಿಶೋರ್‌ ಪತ್ತಿಕೊಂಡ ಅವರು ತಿಳಿಸಿದ್ದಾರೆ.