'ಪುನೀತ್‌ರಂತೆ ಕಣ್ಣು ದಾನ ಮಾಡ್ತೆನೆ' ಆತ್ಮಹತ್ಯೆಗೆ ಶರಣಾದ ಅಪ್ಪು ಅಭಿಮಾನಿ
* ಕಣ್ಣು ದಾನ ಮಾಡಲು ಆತ್ಮಹತ್ಯೆ ಮಾಡಿಕೊಂಡ ಅಪ್ಪು ಅಭಿಮಾನಿ
* ಬನ್ನೇರುಘಟ್ಟ ಸಮೀಪದ ಶ್ಯಾನುಭೋಗನಹಳ್ಳಿಯಲ್ಲಿ ಘಟನೆ
* ರಾಜೇಂದ್ರ(40) ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿ
* ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ
ಆನೇಕಲ್ (ನ. 01) ಪುನೀತ್ ರಾಜ್ ಕುಮಾರ್ (Puneeth Rajkumar) ಅಗಲಿಕೆಯ ನೋವನ್ನು ಅನಿವಾರ್ಯವಾಗಿ (Sandalwood) ಸಹಿಸಿಕೊಳ್ಳಬೇಕಾಗಿದೆ. ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದು ಕಠಿಣ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಶಿವರಾಜ್ ಕುಮಾರ್(Shiva Rajkumar) ಮನವಿ ಮಾಡಿಕೊಂಡಿದ್ದಾರೆ.
ಕಣ್ಣು ದಾನ ಮಾಡಲು ಅಪ್ಪು ಅಭಿಮಾನಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬನ್ನೇರುಘಟ್ಟ ಸಮೀಪದ ಶ್ಯಾನುಭೋಗನ ಹಳ್ಳಿಯಲ್ಲಿ ರಾಜೇಂದ್ರ(40) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್(Puneeth Rajkumar) ಕಣ್ಣು ನಾಲ್ಕು ಮಂದಿಗೆ ಹೊಸ ಜಗತ್ತನ್ನು ನೋಡುವ ಅವಕಾಶ ಮಾಡಿಕೊಟ್ಟಿದೆ. ನಾರಾಯಣ ನೇತ್ರಾಲಯವು(Narayana Nethralaya) ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪುನೀತ್ ಅವರ ಕಣ್ಣುಗಳಿಂದ ನಾಲ್ಕು ಮಂದಿಗೆ ದೃಷ್ಟಿ ನೀಡಿದೆ.
Puneeth Rajkumar Death: ಅಣ್ಣಾವ್ರಂತೆ ನೇತ್ರದಾನ ಮಾಡಿದ ಅಪ್ಪು
ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ.ಭುಜಂಗಶೆಟ್ಟಿ, ಪುನೀತ್ ಅವರ ದಾನ ಮಾಡಿದ ಕಣ್ಣುಗಳನ್ನು ಅಳವಡಿಸಲು ಮೂರ್ನಾಲ್ಕು ಮಂದಿಗೆ ಬರಲು ಸೂಚಿಸಿದ್ದೇವೆ. ಕಣ್ಣುಗಳನ್ನು ಎರಡು ಭಾಗಗಳಾಗಿ ವಿಂಗಡಿಸಿ ಒಂದೇ ಕಣ್ಣನ್ನು ಇಬ್ಬರಿಗೆ ಅಳವಡಿಕೆ ಮಾಡಬಹುದಾದ ಅತ್ಯಾಧುನಿಕ ತಂತ್ರಜ್ಞಾನ ಬಂದಿದೆ. ಇದರ ಸಹಕಾರದಿಂದ ಕಣ್ಣಿನ ಮುಂಭಾಗ ಹಾನಿಗೊಳಗಾದವರಿಗೆ ಮುಂಭಾಗ ಹಾಗೂ ಹಿಂಭಾಗ ಹಾನಿಗೊಳಗಾದವರಿಗೆ ಹಿಂಭಾಗ ಅಳವಡಿಕೆ ಮಾಡಲು ಚಿಂತನೆ ನಡೆಸಿದ್ದೇವೆ. ಈ ಮೂಲಕ ಮೂರ್ನಾಲ್ಕು ಮಂದಿಗೆ ದೃಷ್ಟಿ ನೀಡಲು ಯೋಚಿಸಿದ್ದೇವೆ ಎಂದು ತಿಳಿಸಿದ್ದರು
ಪುನೀತ್ ತಂದೆ ಹಾಗೂ ತಾಯಿಯ ಹಾದಿಯಲ್ಲಿ ಸಾಗಿ ತಮ್ಮ ಎರಡೂ ಕಣ್ಣುಗಳನ್ನು ದಾನ ಮಾಡಿದ್ದಾರೆ. ಅಭಿಮಾನಿಗಳು ಹಾಗೂ ಕನ್ನಡಿಗರನ್ನು ದೇವರಂತೆ ಪೂಜಿಸುವ ಡಾ. ರಾಜ್ ಕುಟುಂಬದ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಡಾ.ರಾಜ್ ಕುಟುಂಬದ ಕುಡಿ ಇನ್ನಿಲ್ಲ ಎಂದು ಯಾರಿಗೂ ಈಗಲೂ ಉಹಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪು ಪತ್ನಿ ಅಶ್ವಿನಿ ಮತ್ತು ಮಕ್ಕಳಿಗೆ ಧೈರ್ಯ ತುಂಬಲು ರಾಜಕೀಯ ಗಣ್ಯರು ಮತ್ತು ಸಿನಿಮಾ ತಾರೆಯರು ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ. ಅಪ್ಪು ನಿವಾಸದ ಬಳಿ ರಾಘಣ್ಣ ಕುಟುಂಬ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಮನೆ ಬಳಿ ಸೇರಿದಂತೆ ಭದ್ರತೆ ನಿಯೋಜಿಸಲಾಗಿದೆ.