Asianet Suvarna News Asianet Suvarna News

Puneeth Rajkumar| ಚಿಕ್ಕಣ್ಣ ಟಿಫಿನ್‌ ರೂಮ್‌ ದೋಸೆ ತಿನ್ನಲು ಬಂದಿದ್ದ ನಟ ಅಪ್ಪು

*  ಹೃದಯಾಘಾತಕ್ಕೆ 5 ದಿನ ಮೊದಲು ಪುಡಿ ಮಸಾಲೆ ಸವಿದಿದ್ದ ಪುನೀತ್‌ 
*  ಹಲವು ಸಾರಿ ಚಿಕ್ಕಣ್ಣ ಹೋಟೆಲಿಗೆ ಬಂದಿದ್ದ ಅಪ್ಪು
*  ತಮ್ಮ ಕುಟುಂಬ ಸಮೇತ ಪುನೀತ್‌ ಜತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದ ದಯಾನಂದ  
 

Puneeth Rajkumar Came to Chikkanna Tiffin Room Dosa in Bengaluru grg
Author
Bengaluru, First Published Nov 12, 2021, 7:35 AM IST

ಬೆಂಗಳೂರು(ನ.12): ಪುನೀತ್‌ ರಾಜ್‌ಕುಮಾರ್‌(Puneeth Rajkumar) ಅವರ ಬಾಯಿರುಚಿಯ ಕುರಿತು ಅನೇಕ ಕತೆಗಳು ಪ್ರಚಲಿತವಿದೆ. ರುಚಿ ರುಚಿಯಾದ ತಿಂಡಿಗಳನ್ನು ಹುಡುಕಿಕೊಂಡು ಅವರು ಬೆಂಗಳೂರಿನ(Bengaluru) ಮೂಲೆಮೂಲೆಗಳಿಗೂ ಹೋಗುತ್ತಿದ್ದರು. ಅವರನ್ನು ಸದಾಶಿವ ನಗರದ ರಸ್ತೆ ಬದಿಯ ಪಾನಿಪೂರಿ(Panipuri) ಅಂಗಡಿಗಳಲ್ಲಿ, ವಿಲ್ಸನ್‌ ಗಾರ್ಡನ್‌ನ ದೋಸೆ(Dose) ಗಾಡಿಗಳ ಎದುರು, ಗಾಂಧೀ ಬಜಾರಿನ ಇಡ್ಲಿ(Idly) ಗಾಡಿಯಲ್ಲಿ, ಬನಶಂಕರಿಯ ಬಿರಿಯಾನಿ(Biryani) ಕೇಂದ್ರಗಳ ಬಳಿ ಕಾಣಬಹುದಾಗಿತ್ತು. ಚಿತ್ರೀಕರಣ ಇಲ್ಲದ ದಿನಗಳಲ್ಲಿ ತಾವು ಹೊಸದಾಗಿ ಕೇಳಿದ ಹೋಟೆಲುಗಳನ್ನು ಅವರು ಹುಡುಕಿಕೊಂಡು ಹೋಗುತ್ತಿದ್ದರು.

ಪುನೀತ್‌ ಹೃದಯಾಘಾತಕ್ಕೆ(Cardiac Arrest) ತುತ್ತಾಗುವ ಐದು ದಿನಗಳ ಹಿಂದೆ ಶೇಷಾದ್ರಿಪುರಂನ ಚಿಕ್ಕಣ್ಣ ದೋಸೆ ಹೋಟೆಲ್ಲಿಗೆ(Hotel) ಬಂದಿದ್ದರು. ಒಬ್ಬರೇ ಬಂದು ಪುಡಿ ಮಸಾಲೆ ದೋಸೆ ಸವಿದಿದ್ದರು. ಚಿಕ್ಕಣ್ಣ ಟಿಫಿನ್‌ ರೂಮ್‌ನ ಮಾಲೀಕರಾದ ದಯಾನಂದ ಕುದೂರು ಪ್ರಕಾರ, ಪುನೀತ್‌ ಹಲವು ಸಾರಿ ಚಿಕ್ಕಣ್ಣ ಹೋಟೆಲಿಗೆ ಬಂದಿದ್ದರು. ಆದರೆ ಯಾವತ್ತೂ ಕಾರಿನಿಂದ ಹೊರಗೆ ಬಂದಿರಲಿಲ್ಲ. ಆದರೆ ಅಕ್ಟೋಬರ್‌ 24ರಂದು ಪುನೀತ್‌ ಬಂದಿರುವ ಸುದ್ದಿಯನ್ನು ಅವರ ಗನ್‌ಮ್ಯಾನ್‌(Gunman) ಹೋಟೆಲ್‌ ಮಾಲಿಕರಿಗೆ ಹೇಳಿದ್ದರು. ದಯಾನಂದ ಕುಡೂರು ತಮ್ಮ ಕುಟುಂಬ ಸಮೇತ ಪುನೀತ್‌ ಜತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದರು.

ಯಾವತ್ತೂ ತಾನು ಬಂದ ಸುದ್ದಿ ಹೇಳಿರಲೇ ಇಲ್ಲ. ಕಳೆದ ಭಾನುವಾರ ನಮಗೆ ಅವರ ಜತೆ ಫೋಟೋ ಸಿಕ್ಕಿತು. ಅದಾಗಿ ಐದು ದಿನಕ್ಕೇ ನಮ್ಮನ್ನೆಲ್ಲ ಬಿಟ್ಟು ಹೋದರು. ಇದಕ್ಕಿಂತ ದೊಡ್ಡ ನೋವು ಮತ್ತೊಂದಿಲ್ಲ’ ಅನ್ನುತ್ತಾರೆ ದಯಾನಂದ ಕುದೂರು.

Puneeth Rajkumar ಜಾತಕದಲ್ಲಿದ್ದ ದೋಷವಾದರೂ ಏನು?

ಬಾರದ ಲೋಕಕ್ಕೆ ತೆರಳಿದ ಅಪ್ಪು: ಕಣ್ಣೀರಲ್ಲೇ ಕೈತೊಳೆಯುತ್ತಿರವ ಅಂಧ ಸಹೋದರಿಯರು

ಪವರ್‌ಸ್ಟಾರ್‌(Powerstar) ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ನಿಧನದಿಂದ ಲೋಕ ನೋಡುವ ಕನಸು ಕಂಡಿದ್ದ ಅಂಧ(Blind) ಸಹೋದರಿಯರು ಕಣ್ಣೀರಲ್ಲೇ ಕೈತೊಳೆಯುತ್ತಿದ್ದಾರೆ. ಕೊಪ್ಪಳ(Koppal) ಜಿಲ್ಲೆಯ ಗಂಗಾವತಿ(Gangavati) ತಾಲೂಕಿನ ಮಲ್ಲಾಪುರದ ಕಣ್ಣಿಲ್ಲದ ಒಂದೇ ಕುಟುಂಬದ 3 ಜನಕ್ಕೆ ಬೆಳಕಾಗುವ ಭರವಸೆಯನ್ನ ನೀಡಿದ್ದರು ಪುನೀತ್‌ ರಾಜ್‌ಕುಮಾರ್‌. ಕೊಟ್ಟ ಭರವಸೆ ಈಡೇರುವ ಮುನ್ನವೇ ಬಾರದ ಲೋಕಕ್ಕೆ ಅಪ್ಪು ತೆರಳಿದ್ದಾರೆ. 

ಮಲ್ಲಾಪುರದ ಹನುಮಂತಪ್ಪ ಹೊಸಹಳ್ಳಿ ಕುಟುಂಬದ ಐವರಲ್ಲಿ ಮೂವರಿಗೆ ಅಂಧತ್ವ ಇದೆ. 2020ರ ಅಕ್ಟೋಬರ್‌ನಲ್ಲಿ ಜೇಮ್ಸ್‌(James) ಚಿತ್ರೀಕರಣಕ್ಕೆ(Shooting) ಬಂದ ಸಂದರ್ಭದಲ್ಲಿ ಅಪ್ಪು ಅವರನ್ನ ಅಂಧ ಸಹೋದರಿಯರು ಭೇಟಿಯಾಗಿದ್ದರು. ಅಂದು ಪ್ರಮಿಳಾ, ಶಾರದಮ್ಮ ಹಾಗೂ ರೇಣುಕಾ ಅವರಿಗೆ ಕಣ್ಣು ಕೊಡಿಸುವ ಭರವಸೆಯನ್ನ ಅಪ್ಪು ನೀಡಿದ್ದರು. 

Lovely Star Prem: ಪುನೀತ್ ಸ್ನೇಹಕ್ಕೆ 'ಪ್ರೇಮಂ ಪೂಜ್ಯಂ' ಅರ್ಪಣೆ

ಪುನೀತ್‌ ಹೆಸರಲ್ಲಿ ಉಚಿತ ವಸತಿ ಶಾಲೆ, ಆಸ್ಪತ್ರೆ ನಿರ್ಮಾಣ: ಜನಾರ್ದನ ರೆಡ್ಡಿ ಘೋಷಣೆ

ದೈಹಿಕವಾಗಿ ನಮ್ಮನ್ನಗಲಿದ್ದರೂ ಕರುನಾಡಿನ ಜನಮಾನಸದಲ್ಲಿ ಶಾಶ್ವತವಾಗಿ ಉಳಿದಿರುವ ನಟ ಪುನೀತ್‌ ರಾಜ್‌ಕುಮಾರ್‌  ಅವರ ಹೆಸರಿನಲ್ಲಿ ಬಳ್ಳಾರಿಯಲ್ಲಿ (ballary) ಬಡ ವಿದ್ಯಾರ್ಥಿಗಳಿಗೆ (Students) ಉಚಿತ ವಸತಿಯುತ ಶಾಲೆ (school) ಹಾಗೂ ಜನಾರೋಗ್ಯಕ್ಕಾಗಿ ಸುಸಜ್ಜಿತ ಆಸ್ಪತ್ರೆ (Hospital) ನಿರ್ಮಿಸಲಾಗುವುದು. ಈ ಮೂಲಕ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ (janardhan reddy) ತಿಳಿಸಿದ್ದರು.

ಈ ಹಿಂದೆ ನಮ್ಮ ಅಧಿಕಾರ ಅವಧಿಯಲ್ಲಿ ಅನಂತಪುರ ರಸ್ತೆಗೆ ಹಾಗೂ ಉದ್ಯಾನವನಕ್ಕೆ ವರನಟ ಡಾ. ರಾಜ್‌ಕುಮಾರ್‌ (Dr rajkumar) ಅವರ ಹೆಸರಿಡಲಾಯಿತು. ಪುನೀತ್‌ ಹೆಸರು ಶಾಶ್ವತವಾಗಿ ಉಳಿಯುವಂತಾಗಬೇಕು ಎಂಬ ಆಶಯದಲ್ಲಿ ಅವರ ಹೆಸರಿನಲ್ಲಿ ವಸತಿಯುತ ಶಾಲೆ (Residensial school) ನಗರದಲ್ಲಿ ನಿರ್ಮಿಸುವೆ. ಹಂತ ಹಂತವಾಗಿ ಪಿಜಿವರೆಗೆ (Post graduation) ಶಾಲೆಯನ್ನು ವಿಸ್ತರಿಸಲಾಗುವುದು ಎಂದು ಹೇಳಿದ್ದರು.

ಆದಷ್ಟು ಬೇಗ ಶಾಲೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು. ನಗರದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು (Super Speciality hospital) ನಮ್ಮ ಅವಧಿಯಲ್ಲಿ ತರಲಾಯಿತು. ಆದರೆ, ಅದು ಪೂರ್ಣಗೊಂಡಿಲ್ಲ. ಇದೀಗ ನಾವೇ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಿ ಜನರ ಆರೋಗ್ಯ ಸೇವೆಯನ್ನು (Health service) ಕೈಗೊಳ್ಳುತ್ತೇವೆ. ನಮ್ಮ ಸೇವಾ ಕಾರ್ಯಕ್ಕೆ ಪುನೀತ್‌ ರಾಜ್‌ ಕುಮಾರ್‌ ಅವರು ತೆರೆ ಮರೆಯಲ್ಲಿ ಮಾಡಿರುವ ಅನೇಕ ಜನೋಪಕಾರಿ ಕೆಲಸಗಳೇ ಪ್ರೇರಣೆಯಾಗಿವೆ ಎಂದು ಹೇಳಿದ್ದರು.
 

Follow Us:
Download App:
  • android
  • ios