ಬೆಂಗಳೂರಿನಲ್ಲಿ ನ.24ರಂದು ಸಂಚಾರ ಬದಲಿ ಮಾರ್ಗ ಪ್ರಕಟಿಸಿದ ಟ್ರಾಫಿಕ್‌ ಪೊಲೀಸ್‌

ನವೆಂಬರ್ 24 ರಂದು ಪುಲಕೇಶಿನಗರದ ಈದ್ಧಾ ಖುದ್ದೂಸ್ ಸಾಹೇಬ್ ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯ ಹಿನ್ನೆಲೆಯಲ್ಲಿ, ಸಂಚಾರ ಪೊಲೀಸರು ಸಂಚಾರ ಬದಲಿ ಮಾರ್ಗಗಳನ್ನು ಘೋಷಿಸಿದ್ದಾರೆ. ಮಿಲ್ಲರ್ಸ್ ರಸ್ತೆ, ಹೇನ್ಸ್ ರಸ್ತೆ ಮತ್ತು ನಂದಿದುರ್ಗ ರಸ್ತೆಗಳಲ್ಲಿ ಸಂಚಾರ ನಿರ್ಬಂಧವಿರುತ್ತದೆ.

pulakeshinagar police issue traffic advisory in  Bengaluru gow

ಬೆಂಗಳೂರು (ನ.23): ನವೆಂಬರ್‌ 24 ಅಂದರೆ ಭಾನುವಾರದಂದು ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯಾಹ್ನ 2.00 ಗಂಟೆಯಿಂದ ರಾತ್ರಿ 1.30 ಗಂಟೆಯವರೆಗೆ ಮಿಲ್ಲರ್ಸ್ ರಸ್ತೆಯಲ್ಲಿರುವ ಈದ್ಧಾ ಖುದ್ದೂಸ್ ಸಾಹೇಬ್ ಮೈದಾನದಲ್ಲಿ (ಓಲ್ಡ್ ಹಜ್ ಕ್ಯಾಂಪ್) ಸಾರ್ವಜನಿಕ ಸಭೆಯು ಆಯೋಜನೆಗೊಂಡಿದ್ದು ಇದರಲ್ಲಿ ಸುಮಾರು 2 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ಸಂಚಾರ ನಿರ್ಬಂಧ ಈ ಕೆಳಗಿನಂತಿದೆ:
1) ಮಿಲ್ಲರ್ಸ್ ರಸ್ತೆ ಕಂಟೋನ್ಸೆಂಟ್ ರೈಲ್ವೆ ಅಂಡರ್ ಬ್ರಿಡ್ಜ್‌ನಿಂದ ಹೇನ್ಸ್ ರಸ್ತೆ ಜಂಕ್ಷನ್ ವರೆಗೆ ಎರಡೂ ಬದಿಯ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.

2) ಹೇನ್ಸ್ ರಸ್ತೆ ಜಂಕ್ಷನ್‌ನಿಂದ ಮಿಲ್ಲರ್ ರಸ್ತೆ ಕಂಟೋನ್ಸೆಂಟ್ ರೈಲ್ವೆ ಅಂಡರ್ ಬ್ರಿಡ್ಜ್ ವರೆಗೆ ಎರಡೂ ಬದಿಯ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.

3) ನಂದಿದುರ್ಗ ರಸ್ತೆ ಬೆನ್ನನ್ ಕ್ರಾಸ್ ರಸ್ತೆ ಜಂಕ್ಷನ್‌ನಿಂದ ಮಿಲ್ಲರ್ ರಸ್ತೆ ಜಂಕ್ಷನ್‌ ವರೆಗೆ (ಓಲ್ಡ್ ಪಜ್ ಕ್ಯಾಂಪ್) ಎರಡೂ ಬದಿಯ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.

ಕಂಗುವಾ ಹೀನಾಯ ಸೋಲಿನ ಬಳಿಕ ಸೂರ್ಯನ ಕರ್ಣ ಚಿತ್ರ ಡ್ರಾಪ್; ರಾಜಮೌಳಿಯಿಂದ ಮಾತ್ರ ಇದು ಸಾಧ್ಯ!

ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ವಿವರಣೆ ಇಲ್ಲಿದೆ:
1) ಮಿಲ್ಲರ್ ರಸ್ತೆ ಕಡೆಯಿಂದ ಹೇನ್ಸ್ ರಸ್ತೆ ಕಡೆಗೆ ಹೋಗುವ ವಾಹನ ಚಾಲಕರು,ಸವಾರರು ಮಿಲ್ಲರ್ಸ್ ರಸ್ತೆಯಲ್ಲಿ ಬಲ ತಿರುವು ಪಡೆದು ಕಂಟೋನ್ಸೆಂಟ್ ರೈಲ್ವೆ ನಿಲ್ದಾಣದ ಮುಂಭಾಗ ಕಂಟೋನ್ಸೆಂಟ್ ರಸ್ತೆಯಲ್ಲಿ ನೇರವಾಗಿ ಸಾಗಿ ಬಂಬೂಬಜಾರ್ ಜಂಕ್ಷನ್ ತಲುಪಿ ನಂತರ ನೇತಾಜಿ ರಸ್ತೆ ಮುಖಾಂತರ ಪುಲಕೇಶಿನಗರ ಕಡೆಗೆ ಸಂಚರಿಸಬಹುದಾಗಿರುತ್ತದೆ.

2) ಹೇನ್ಸ್ ರಸ್ತೆ ಕಡೆಯಿಂದ ಮಿಲ್ಲರ್ ರಸ್ತೆ ಕಡೆಗೆ ಹೋಗುವ ವಾಹನ ಚಾಲಕರು/ಸವಾರರು ಹೇನ್ಸ್ ರಸ್ತೆ ಜಂಕ್ಷನ್‌ನಿಂದ ಹೇನ್ ರಸ್ತೆಯಲ್ಲಿ ನೇರವಾಗಿ ಸಾಗಿ ಧನಕೋಟಿ ರಸ್ತೆಯಲ್ಲಿ ಬಲ ತಿರುವು ಪಡೆದು ಎ.ಎಂ ರಸ್ತೆ ಮುಖಾಂತರ ಬಂಬೂ ಬಜಾರ್ ತಲುಪಿ ಕಂಟೋನೆಂಟ್ ರಸ್ತೆಯಲ್ಲಿ ನೇರವಾಗಿ ಸಾಗಿ ಕ್ಲೀನ್ಸ್ ರಸ್ತೆ - ತಿಮ್ಮಯ್ಯ ರಸ್ತೆ ಮುಖಾಂತರ ಜಯಮಹಲ್ ರಸ್ತೆ ಕಡೆಗೆ ಸಂಚರಿಸಬಹುದಾಗಿರುತ್ತದೆ.

3) ನಂದಿದುರ್ಗ ರಸ್ತೆ ಕಡೆಯಿಂದ ಹೇವ್ ರಸ್ತೆ ಕಡೆಗೆ ಹೋಗುವ ವಾಹನ ಚಾಲಕರು/ಸವಾರರು ನಂದಿದುರ್ಗ ರಸ್ತೆ ಬೆನ್ನನ್ ಕ್ರಾಸ್ ರಸ್ತೆಯಲ್ಲಿ ಎಡ ತಿರುವು ಪಡೆದು ಬೆನ್ಸನ್ ಕ್ರಾಸ್ ರಸ್ತೆಯಲ್ಲಿ ನೇರವಾಗಿ ಸಾಗಿ ಬೋರ್ ಬಂಕ್ ರಸ್ತೆಯಲ್ಲಿ ಎಡತಿರುವು ಪಡೆದು ನೇರವಾಗಿ ಸಾಗಿ ಪಾಟರಿ ಜಂಕ್ಷನ್ ತಲುಪಿ ಬಲ ತಿರುವು ಪಡೆದು ಪುಲಕೇಶಿನಗರ ಕಡೆಗೆ ಸಂಚರಿಸಬಹುದಾಗಿರುತ್ತದೆ.

ಬಾಬಾ ವಂಗಾ ಪ್ರಕಾರ 2025ರ ಭವಿಷ್ಯದಲ್ಲಿ ಈ 5 ರಾಶಿಗಳಿಗೆ ಭಾರೀ ಲಾಭ!

ಪಾರ್ಕಿಂಗ್ ನಿರ್ಬಂಧಿಸಿರುವ ಸ್ಥಳಗಳು:
ಕಂಟೋನ್ಸೆಂಟ್ ರಸ್ತೆ, ಸೆಂಟ್ ಜಾನ್ಸ್ ಚರ್ಚ್ ರಸ್ತೆ, ಮಿಲ್ಲರ್ ರಸ್ತೆ, ನಂದಿದುರ್ಗ ರಸ್ತೆ, ಹೇನ್ಸ್ ರಸ್ತೆ, ನೇತಾಜಿ ರಸ್ತೆ, ಕಂಟೋನ್ಸೆಂಟ್ ರಸ್ತೆ, ಹೆಚ್ ಎಂ.ರಸ್ತೆ ಮತ್ತು ಎಂ.ಎಂ ರಸ್ತೆಯಲ್ಲಿ ದಿನಾಂಕ: 24/11/2024 ರಂದು ಎಲ್ಲಾ ರೀತಿಯ ವಾಹನಗಳ ಪಾರ್ಕಿಂಗ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.

 

Latest Videos
Follow Us:
Download App:
  • android
  • ios