ಮಂಗಳೂರು(ಫೆ.02): ಸುಳ್ಯ ಕಾಲೇಜೊಂದರ ದ್ವಿತೀಯ ಪಿಯುಸಿ ಯುವತಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಜನ್ಮಕ್ಕೆ ಕಾರಣನಾದ ಯುವಕನನ್ನು ಬಂಧಿಸಿ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸುಳ್ಯದ ವಿದ್ಯಾರ್ಥಿನಿಯೊಬ್ಬಳು ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಇದಕ್ಕೆ ಕಾರಣನಾದ ಅಮರ ಮೂಡ್ನೂರು ಗ್ರಾಮದ ಪ್ರವೀಣ್‌ (24) ಎಂಬಾತನನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದೆ.

ಲವ್-ಸೆಕ್ಸ್-ದೋಖಾ; ಯುವತಿ ಪ್ರಾಣವನ್ನೇ ಬಲಿಪಡೆದ ಖಾಸಗಿ ಕ್ಷಣಗಳ ವಿಡಿಯೋ!

ಯುವಕನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಯುವಕ ಕಳೆದ ಹಲವು ವರ್ಷಗಳಿಂದ ಮನೆಗೆ ಬಂದು ಹೋಗುತ್ತ ಇರುವ ಕಾರಣ ಕುಟುಂಬಕ್ಕೆ ಪರಿಚಯವಾಗಿದ್ದನು. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.