ಹೊನ್ನಾಳಿ: ಕರ್ತವ್ಯಲೋಪವೆಸಗಿದ ಪ್ರಾಂಶುಪಾಲರನ್ನ ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು
ಖಾಸಗಿ ಕಾರ್ಯಕ್ರಮಕ್ಕೆ ನೀವು ಹೇಗೆ ಕಾಲೇಜು ವಿದ್ಯಾರ್ಥಿಗಳನ್ನು ಕಳಿಸಿಕೊಟ್ಟಿರಿ?ಹಾಗಾದ್ರೆ, ನಮ್ಮ ಮನೆ ಕಾರ್ಯಕ್ರಮಕ್ಕು ವಿದ್ಯಾರ್ಥಿಗಳನ್ನು ಕಳಿಸಿಕೊಡಿ, ವಿದ್ಯಾಭ್ಯಾಸಕ್ಕೆಂದು ಬರುವ ಬಡ ಮಕ್ಕಳನ್ನು ನೀವು ತಿಥಿ ಕಾರ್ಯಕ್ರಮಕ್ಕೆ ಹೇಗೆ ಕಳಿಸಿಕೊಟ್ಟಿರಿ ಅಂತ ಕಿಡಿಕಾರಿದ ಗುರುಪಾದಯ್ಯ ಮಠದ್
ದಾವಣಗೆರೆ(ಡಿ.18): ಜಿಲ್ಲೆಯ ಹೊನ್ನಾಳಿ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರ ಮೇಲೆ ಕರ್ತವ್ಯಲೋಪದ ಆರೋಪವೊಂದು ಕೇಳಿ ಬಂದಿದೆ. ನಿನ್ನೆ(ಶನಿವಾರ) ಹೊನ್ನಾಳಿಯಲ್ಲಿ ನಡೆದ ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರನ ಪುತ್ರನ ಶ್ರದ್ದಾಂಜಲಿ ಕಾರ್ಯಕ್ರಮಕ್ಕೆ ಪದವಿ ಕಾಲೇಜಿನ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಕಳಿಸಿಕೊಟ್ಟಿದ್ದರು.
ಹೀಗಾಗಿ ಪ್ರಾಂಶುಪಾಲರನ್ನ ಭ್ರಷ್ಟಾಚಾರದ ವಿರೋಧಿ ವೇದಿಕೆ ಮುಖಂಡ ಗುರುಪಾದಯ್ಯ ಮಠದ್ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕೆ ನೀವು ಹೇಗೆ ಕಾಲೇಜು ವಿದ್ಯಾರ್ಥಿಗಳನ್ನು ಕಳಿಸಿಕೊಟ್ಟಿರಿ?ಹಾಗಾದ್ರೆ, ನಮ್ಮ ಮನೆ ಕಾರ್ಯಕ್ರಮಕ್ಕು ವಿದ್ಯಾರ್ಥಿಗಳನ್ನು ಕಳಿಸಿಕೊಡಿ, ವಿದ್ಯಾಭ್ಯಾಸಕ್ಕೆಂದು ಬರುವ ಬಡ ಮಕ್ಕಳನ್ನು ನೀವು ತಿಥಿ ಕಾರ್ಯಕ್ರಮಕ್ಕೆ ಹೇಗೆ ಕಳಿಸಿಕೊಟ್ಟಿರಿ ಅಂತ ಕಿಡಿಕಾರಿದ್ದಾರೆ.
DAVANAGERE: ಅನುಕಂಪದ ರಾಜಕಾರಣ ನನಗೆ ಅಗತ್ಯವಿಲ್ಲ: ಶಾಸಕ ರೇಣುಕಾಚಾರ್ಯ
ಕಾಲೇಜ್ ವಿದ್ಯಾರ್ಥಿಗಳ ಕೈಗೆ ಚಂದ್ರುವಿನ ಫೋಟೋ ಕೊಟ್ಟು ಹಾಡು ಹೇಳಿಸಿದ್ದು ಎಷ್ಟು ಅಸಹ್ಯವಾಗಿದೆ. ನೀವು ಪ್ರಾಂಶುಪಾಲರಾಗಿದ್ದು ನಿಮಗೆ ಜವಾಬ್ದಾರಿ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಸಕ ರೇಣುಕಾಚಾರ್ಯ ಹೇಳಿದಂಗೆ ನೀವು ಕೇಳೋದಾದ್ರೆ ನಮ್ಮ ಮನೆ ಕಾರ್ಯಕ್ರಮಕ್ಕು ವಿದ್ಯಾರ್ಥಿಗಳನ್ನು ಕಳಿಸಿಕೊಡಿ. ಸಾರ್ವಜನಿಕರ ಪ್ರಶ್ನೆಗೆ ಪ್ರಾಂಶುಪಾಲರು ನಿರುತ್ತರರಾಗಿದ್ದಾರೆ. ಇದನ್ನು ದೊಡ್ಡದು ಮಾಡಬೇಡಿ ಎಂದು ಪ್ರಾಂಶುಪಾಲರು ಮನವಿ ಮಾಡಿದ್ದಾರೆ.