ಕೋಲಾರ: ರ‍್ಯಾಗಿಂಗ್ ಹಾಗೂ ಕಿರುಕುಳಕ್ಕೆ ಮನನೊಂದ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ.

ಜಿಲ್ಲೆಯ ಕೆಜಿಎಫ್‌ ನಗರದ ಇಟಿ‌ ಬ್ಲಾಕ್‌ನಲ್ಲಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ. ಸಂಜೀವಿನಿ ಮೃತ ವಿದ್ಯಾರ್ಥಿನಿ. ಬಂಗಾರಪೇಟೆಯ ಎಸ್‌ಡಿಸಿ ಕಾಲೇಜಿನಲ್ಲಿ ಈಕೆ ದ್ವಿತೀಯ ಪಿಯುಸಿ ಓದುತ್ತಿದ್ದಳು.

ಜೋಸೆಫ್ ಹಾಗೂ ಇತರೆ ವಿದ್ಯಾರ್ಥಿಗಳ ಕಿರುಕುಳ ತಾಳಲಾರದೇ, ಮಗಳು ಸಾವಿಗೆ ಶರಣಾಗಿದ್ದಾಳೆಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಚಾಂಪಿಯನ್ ರೀಫ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.