ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ್ದಕ್ಕಾಗಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು  ಹಿಡಿದು ಪೊಲೀಸರು ಸ್ಥಳದಲ್ಲಿ ನಿಯೋಜನೆಯಾಗಿದ್ದ ಬಸ್ಸಿಗೆ ತಳ್ಳಿ ಬಂಧಿಸಿ ಕರೆದೊಯ್ದಿದ್ದಾರೆ. ಕೆಲವರನ್ನು ಹೊತ್ತುಕೊಂಡು ಹೋಗಿ ಬಸ್ಸು ಹತ್ತಿಸಲಾಯಿತು.

ಮಂಗಳೂರು(ಡಿ.17): ಜಾಮಿಯಾ ವಿಶ್ವವಿದ್ಯಾನಿಲಯದಲ್ಲಿ ಪೊಲೀಸರ ಲಾಠಿಚಾರ್ಜ್ ಖಂಡಿಸಿ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ್ದಕ್ಕಾಗಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆಸಿದ ಘಟನೆ ಸೋಮವಾರ ಸಂಜೆ ನಗರದ ಅಂಬೇಡ್ಕರ್‌ ಸರ್ಕಲ್‌ನಲ್ಲಿ ನಡೆದಿದೆ.

ಪ್ರತಿಭಟನಾಕಾರರನ್ನು ಹಿಡಿದು ಪೊಲೀಸರು ಸ್ಥಳದಲ್ಲಿ ನಿಯೋಜನೆಯಾಗಿದ್ದ ಬಸ್ಸಿಗೆ ತಳ್ಳಿ ಬಂಧಿಸಿ ಕರೆದೊಯ್ದಿದ್ದಾರೆ. ಕೆಲವರನ್ನು ಹೊತ್ತುಕೊಂಡು ಹೋಗಿ ಬಸ್ಸು ಹತ್ತಿಸಲಾಯಿತು.

ವಿದ್ಯಾರ್ಥಿನಿಯರ ಗುಪ್ತಾಂಗಕ್ಕೆ ಕೈ ಹಾಕಿ ಲೈಂಗಿಕ ಕಿರುಕುಳ..!

ಕ್ಯಾಂಪಸ್‌ ಫ್ರಂಟ್‌ಗೆ ಪ್ರತಿಭಟನೆ ನಡೆಸಲು ಪೊಲೀಸರ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಅಂಬೇಡ್ಕರ್‌ ಸರ್ಕಲ್‌ನಲ್ಲಿ ಸಂಘಟನೆ ಕಾರ್ಯಕರ್ತರು ನಿರ್ಧರಿಸಿದ್ದರು. ಅದರಂತೆ 50ರಷ್ಟುಮಂದಿ ನಡು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಆರಂಭಿಸಿದ್ದರು. ಸಂಜೆಯಾಗಿದ್ದರಿಂದ ಸಹಜವಾಗಿ ಸರ್ಕಲ್‌ನ ನಾಲ್ಕೂ ಕಡೆಗಳಲ್ಲಿ ವಾಹನ ದಟ್ಟಣೆ ಆರಂಭವಾಯಿತು. ಕೂಡಲೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಅನುಮತಿ ಇಲ್ಲದೆ ಪ್ರತಿಭಟನೆ ನಡೆಸದಂತೆ ಎಚ್ಚರಿಕೆ ನೀಡಿದರೂ ಸಂಘಟನೆ ಸದಸ್ಯರು ಕೇಳಲಿಲ್ಲ.

ಕೂಡಲೆ ಕಾರ್ಯಪ್ರವೃತ್ತರಾದ ಪೊಲೀಸ್‌ ಪಡೆ ಲಾಠಿ ಚಾರ್ಜ್‌ ನಡೆಸಿತು. ಲಾಠಿ ರುಚಿ ಸಿಗುತ್ತಿದ್ದಂತೆ ಪ್ರತಿಭಟನಾಕಾರರು ಚೆಲ್ಲಾಪಿಲ್ಲಿಯಾದರು. ಅವರೆಲ್ಲರನ್ನೂ ಹಿಡಿದು ಪೊಲೀಸರು ಸ್ಥಳದಲ್ಲಿ ನಿಯೋಜನೆಯಾಗಿದ್ದ ಬಸ್ಸಿಗೆ ತಳ್ಳಿ ಬಂಧಿಸಿ ಕರೆದೊಯ್ದಿದ್ದಾರೆ. ಕೆಲವರನ್ನು ಹೊತ್ತುಕೊಂಡು ಹೋಗಿ ಬಸ್ಸು ಹತ್ತಿಸಲಾಯಿತು.

'ಎಂಟಿಬಿಗೆ BJPಯಲ್ಲಿ ಸ್ಥಾನ ಮಾನ ಕೊಡಲು ಸಾಧ್ಯವೇ ಇಲ್ಲ'..!

ನಗರದ ಮಧ್ಯ ಭಾಗದಲ್ಲಿ ನಡೆದ ದಿಢೀರ್‌ ಪ್ರತಿಭಟನೆಯಿಂದಾಗಿ ಕ್ಷಣಾರ್ಧದಲ್ಲಿ ನಗರದ ತುಂಬ ಟ್ರಾಫಿಕ್‌ ಜ್ಯಾಂ ಏರ್ಪಟ್ಟಿತ್ತು. ಸುಮಾರು ಅರ್ಧ ಗಂಟೆ ಕಾಲ ವಾಹನ ಸವಾರರು ಬವಣೆಪಟ್ಟರು.