ಕೃಷಿ ಸಮ್ಮಾನ್‌ಗೆ ತುಮಕೂರಿನಿಂದ 3 ಲಕ್ಷಕ್ಕೂ ಅಧಿಕ ರೈತರಿಂದ ಅರ್ಜಿ
ತುಮಕೂರು ಜಿಲ್ಲೆಯಾದ್ಯಂತ 3 ಲಕ್ಷಕ್ಕೂ ಅಧಿಕ ರೈತರು ಅರ್ಜಿ ಸಲ್ಲಿಸಿದರು. ಆದರೆ, ಈ ಪೈಕಿ ತಾಲೂಕಿನ ದೊಡ್ಡೇರಿ ಹೋಬಳಿಯ ಗೊದ್ದನಪಾಳ್ಯ ಗ್ರಾಮದ ರೈತರಾದ ರಂಗಪ್ಪ ಈ ಯೋಜನೆಗೆ ಆಯ್ಕೆಯಾಗಿದ್ದಾರೆ.
ತುಮಕೂರು(ಜ.03): ಕೇಂದ್ರ ಸರ್ಕಾರದ ಕೃಷಿ ಸಮ್ಮಾನ್ ಯೋಜನೆಯ ಫಲಾನುಭವಿಯಾಗಿ ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿ ವ್ಯಾಪ್ತಿಯ ಗೊದ್ದನಪಾಳ್ಯ ಗ್ರಾಮದ ಕೃಷಿಕ, ಪ್ರಗತಿ ಪರ ರೈತ ರಂಗಪ್ಪ (69), ಅವರನ್ನು ಕೇಂದ್ರ ಕೃಷಿ ಮಂತ್ರಾಲಯ ಆಯ್ಕೆ ಮಾಡಿದ್ದು ಅವರು ಗುರುವಾರ ಪ್ರಧಾನಿ ನರೇಂದ್ರಮೋದಿ ಅವರು ನೀಡಿದ ಸನ್ಮಾನ, ಪ್ರಶಸ್ತಿಗೆ ಭಾಜನರಾಗಿದ್ದಾರೆ.
ತಾಲೂಕಿನಲ್ಲಿ ಕೇಂದ್ರ ಸರ್ಕಾರದ ಕೃಷಿ ಸಮ್ಮಾನ್ ಯೋಜನೆಯ ಫಲಾನುಭವಿಯಾಗಲು 30,600 ರೈತರು ಆನ್‌ಲೈನ್‌ಲ್ಲಿ ಅರ್ಜಿ ಸಲ್ಲಿಸಿದ್ದರು. ತುಮಕೂರು ಜಿಲ್ಲೆಯಾದ್ಯಂತ 3 ಲಕ್ಷಕ್ಕೂ ಅಧಿಕ ರೈತರು ಅರ್ಜಿ ಸಲ್ಲಿಸಿದರು. ಆದರೆ, ಈ ಪೈಕಿ ತಾಲೂಕಿನ ದೊಡ್ಡೇರಿ ಹೋಬಳಿಯ ಗೊದ್ದನಪಾಳ್ಯ ಗ್ರಾಮದ ರೈತರಾದ ರಂಗಪ್ಪ ಈ ಯೋಜನೆಗೆ ಆಯ್ಕೆಯಾಗಿದ್ದಾರೆ.
ವೇದಿಕೆಯಲ್ಲೇ 50 ಸಾವಿರ ಕೋಟಿ ಕೇಳಿದ ಬಿಎಸ್‌ವೈಗೆ ಮೋದಿಯಿಂದ ಸಿಕ್ಕ ಉತ್ತರ!
ಮಧುಗಿರಿ ತಾಲೂಕು ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ಮಳೆಯಾಶ್ರಿತ ಬೇಸಾಯದ ಪ್ರದೇಶ, ಬರಪೀಡಿತ ಪ್ರದೇಶ ಎಂಬ ಹಣೆ ಪಟ್ಟಿಹೊಂದಿದೆ. ಯಾವುದೇ ನದಿ ಮೂಲಗಳಿಲ್ಲದೆ ಮಳೆಯಾಶ್ರಿತ ಬೇಸಾಯವೇ ಈ ಭಾಗದ ಜನರ ಜೀವನಾಡಿ. ಇಂತಹ ಬರಪೀಡಿತ ತಾಲೂಕಿನ ದೊಡ್ಡೇರಿ ಹೋಬಳಿ ಗೊದ್ದನಪಾಳ್ಯ ಗ್ರಾಮದಲ್ಲಿ ಜನಿಸಿರುವ ರಂಗಪ್ಪ ಕೃಷಿ ಸಮ್ಮಾನ್ ಯೋಜನೆಯ ನೇರ ಫಲಾನುಭವಿಯಾಗಿ ಆಯ್ಕೆಯಾಗಿದ್ದಾರೆ.
ಮಠದಲ್ಲಿ ರಾಜಕೀಯ ಭಾಷಣ: ಮೋದಿ ಅವರನ್ನು ಪವಿತ್ರ ನೆಲ ಕ್ಷಮಿಸದು ಎಂದ ಸಿದ್ದರಾಮಯ್ಯ!
ಗೊದ್ದನಪಾಳ್ಯ ಗ್ರಾಮದಲ್ಲಿ 1947ರಲ್ಲಿ ಲಕ್ಕಪ್ಪ-ಕರಿಯಮ್ಮ ದಂಪತಿಗೆ ಜನಿಸಿದರು. 1970-71ರಲ್ಲಿ ಬಿಎ ಪದವಿ ಮುಗಿಸಿದರು. ಒಬ್ಬನೇ ಮಗನಾದ್ದರಿಂದ ಅಪ್ಪ, ಅಮ್ಮನನ್ನು ಬಿಟ್ಟು ಹೋಗಲಾರದೆ ಮತ್ತು ಅಂದು ಕಡಿಮೆ ಸಂಬಳವಾದ್ದರಿಂದ ಸರ್ಕಾರಿ ಕೆಲಸಕ್ಕೆ ಅರ್ಜಿ ಸಹ ಹಾಕದೆ ಗುಡ್‌ಬೈ ಹೇಳಿದರು. ನಂತರ ತಂದೆ ಸಂಪಾದಿಸಿದ 10 ಎಕರೆ ಜಮೀನಿದ್ದು, 8 ಎಕರೆ ನೀರಾವರಿ, 2 ಎಕರೆ ಖುಷ್ಕಿ ಭೂಮಿ. 1500 ಅಡಿಕೆ, 100ಕ್ಕೂ ಹೆಚ್ಚು ತೆಂಗು ಮತ್ತು ಕಾಕಡ ತೋಟ ಮಾಡಿದ್ದಾರೆ. ಈ ಮೂಲಕ ಪ್ರಗತಿ ಪರ ರೈತರಾಗಿ ಹೊರ ಹೊಮ್ಮಿದ್ದಾರೆ.
ಅದೃಷ್ಟದ ಭಾಗ್ಯ: ರಂಗಪ್ಪ
ಬಿಎ ಓದಿದರೂ ಸರ್ಕಾರಿ ಕೆಲಸಕ್ಕೆ ಅರ್ಜಿ ಕೂಡ ಹಾಕದೇ ಕೃಷಿ ಚಟುವಟಿಕೆಯತ್ತ ಗಮನ ಹರಿಸಿದೆ. ಇಂದು ಕೇಂದ್ರ ಸರ್ಕಾರದ ಕೃಷಿ ಸಮ್ಮಾನ್‌ಗೆ ಆಯ್ಕೆಯಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯಿಂದ ಪತ್ರ ಸ್ವೀಕರಿಸಿರುವುದು ಸಂತೋಷವನ್ನುಂಟು ಮಾಡಿದೆ ಎನ್ನುತ್ತಾರೆ ರಂಗಪ್ಪ.
-ವೈ.ಸೋಮಶೇಖರ್