Asianet Suvarna News Asianet Suvarna News

Mangaluru News: ವಿದ್ಯಾರ್ಥಿಗಳು ಬರುವ ಮೊದಲೇ ಕುಡಿದು ಮಲಗಿದ್ದ ಸರ್ಕಾರಿ ಶಾಲಾ ಶಿಕ್ಷಕ ಅಮಾನತ್ತು

ಪೆರ್ಡೂರಿನ ಅಲಂಕಾರು ಶಾಲೆಯಲ್ಲಿ ಶಿಕ್ಷಕರೊಬ್ಬರು ಮದ್ಯಪಾನ ಮಾಡಿ ಶಾಲೆ ಜಗುಲಿಯಲ್ಲಿ ನಿದ್ದೆಗೆ ಜಾರಿದ ಘಟನೆಗೆ ಸಂಬಂಧಿಸಿದಂತೆ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಹೆಬ್ರಿ ತಾಲೂಕಿನ ಶಿವಪುರ ಮುಳ್ಳಗುಡ್ಡೆಯ ಶಿಕ್ಷಕ ಕೃಷ್ಣಮೂರ್ತಿ ಅಮಾನತುಗೊಂಡವರು.

A government teacher was suspended for sleeping drunk before the students came to school at udupi rav
Author
First Published Dec 30, 2022, 7:08 AM IST

ಕಾರ್ಕಳ (ಡಿ.30): ಪೆರ್ಡೂರಿನ ಅಲಂಕಾರು ಶಾಲೆಯಲ್ಲಿ ಶಿಕ್ಷಕರೊಬ್ಬರು ಮದ್ಯಪಾನ ಮಾಡಿ ಶಾಲೆ ಜಗುಲಿಯಲ್ಲಿ ನಿದ್ದೆಗೆ ಜಾರಿದ ಘಟನೆಗೆ ಸಂಬಂಧಿಸಿದಂತೆ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಹೆಬ್ರಿ ತಾಲೂಕಿನ ಶಿವಪುರ ಮುಳ್ಳಗುಡ್ಡೆಯ ಶಿಕ್ಷಕ ಕೃಷ್ಣಮೂರ್ತಿ ಅಮಾನತುಗೊಂಡವರು. ಈ ಬಗ್ಗೆ ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷಾರತ ಇಲಾಖೆಯ ಉಪನಿರ್ದೇಶಕರು ಗುರುವಾರ ಆದೇಶ ಹೊರಡಿಸಿದ್ದಾರೆ.

ಘಟನೆ ಹಿನ್ನೆಲೆ:

ಉಡುಪಿ ತಾಲೂಕಿನ ಪೆರ್ಡೂರು ಗ್ರಾಮದ ಅಲಂಗಾರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.27 ರಂದು ಮುಂಜಾನೆ ವಿದ್ಯಾರ್ಥಿಗಳು ಶಾಲೆಗೆ ಬರುವ ವೇಳೆಯಲ್ಲಿ ಶಿಕ್ಷಕ ಮದ್ಯಪಾನ ಮಾಡಿ ಶಾಲೆಯ ಜಗುಲಿಯಲ್ಲಿ ನಿದ್ದೆಗೆ ಜಾರಿದ್ದರು. ಈ ವೇಳೆಯಲ್ಲಿ ವಿದ್ಯಾರ್ಥಿ ಗಳ ಜೊತೆ ಅಗಮಿಸಿದ್ದ ಪೋಷಕರು, ಪೆರ್ಡೂರು ಪಂಚಾಯಿತಿ ಹಾಗೂ ತಾಲೂಕು ಶಿಕ್ಷಣಾಧಿಕಾರಿಗೆ ಸುದ್ದಿ ಮುಟ್ಟಿಸಿದ್ದರು.

ಕಳೆದ ಎಂಟು ವರ್ಷಗಳಿಂದ ಶಾಲೆಯಲ್ಲಿ ಸರ್ಕಾರಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ನಾಲ್ಕು ಬಾರಿ ಶಾಲೆಯಲ್ಲೇ ಮದ್ಯಪಾನ ಮಾಡಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದರು. ಅನೇಕ ಬಾರಿ ಬ್ರಹ್ಮಾವರ ಶಿಕ್ಷಣಾಧಿಕಾರಿ ಎಚ್ಚರಿಕೆಯನ್ನೂ ನೀಡಿದ್ದರು. ಶಿಕ್ಷಕನ್ನು ಅಮಾನತು ಮಾಡುವಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರ ದೇವು ಪೂಜಾರಿ, ಉಪಾಧ್ಯಕ್ಷರಾದ ಚೇತನಾ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯರು ಕೆ.ತುಕಾರಾಮ ನಾಯಕ್‌, ರಮೇಶ್‌ ಪೂಜಾರಿ ಗ್ರಾಮಸ್ಥರು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದರು.

ಪಾಠ ಮಾಡುತ್ತಿದ್ದ ಶಿಕ್ಷಕನ ಮೇಲೆ ಸೈಕೋ ಹಲ್ಲೆ: ಭಯಭೀತರಾದ ವಿದ್ಯಾರ್ಥಿಗಳು

Follow Us:
Download App:
  • android
  • ios