ಮಂಗಳೂರು(ಡಿ.18): ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಬಾರದು ಎಂದು ಪೊಲೀಸ್ ಆಯಕ್ತ ಡಾ.ಪಿ.ಎಸ್.ಹರ್ಷಾ ಹೇಳಿದ್ದಾರೆ. ಯಾವುದೇ ಸಂಘಟನೆಗಳು ಪ್ರತಿಭಟನೆಗೆ ಅನುಮತಿ ಪಡೆಯದೆ, ಪ್ರತಿಭಟನೆ ನಡೆಸಲು ತೀರ್ಮಾನ ಮಾಡದೇ ಇದ್ದರೂ ಸಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹರಡುವವರ ವಿರುದ್ಧ ನೊಟೀಸ್ ಕಳುಹಿಸಲಾಗಿದೆ.

ಅನುಮತಿ ಪಡೆಯದೇ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಗೆ ಸಿದ್ದತೆ ‌ವಿಚಾರವಾಗಿ ಮಂಗಳೂರು ನಗರ ಪೊಲೀಸ್ ಆಯಕ್ತ ಡಾ.ಪಿ.ಎಸ್.ಹರ್ಷಾ ಹೇಳಿಕೆ ನೀಡಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲೂ ಪ್ರತಿಭಟನೆಗೆ ಅನುಮತಿ ಕೇಳಿದ್ದಾರೆ. ಈ ಅನುಮತಿ ಅರ್ಜಿ ಪರಿಶೀಲಿಸಿ ಎಲ್ಲಾ ಠಾಣೆಗಳ ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

ರಾಜ್ಯಸಭೆಯಲ್ಲೂ ಪೌರತ್ವ ಮಸೂದೆ ಪಾಸ್, ಯಾವ ಬದಲಾವಣೆ ಆಗಲಿದೆ?.

ಪ್ರತಿಭಟನೆ ನಡೆಸಲು ಅನುಮತಿ ಕೋರಿ ಈಗಾಗಲೇ ಒಟ್ಟು 7 ಅರ್ಜಿಗಳು ನಮಗೆ ಬಂದಿದೆ. ಆದರೆ ಕೆಲ ಸಂಘಟನೆಗಳು ಪೊಲೀಸ್ ಇಲಾಖೆಗೆ‌ ಮಾಹಿತಿ ನೀಡದೇ ನಿಯಮ ಉಲ್ಲಂಘನೆ ಮಾಡ್ತಿವೆ. ಈಗ ಮತ್ತೆ ಡಿ.20ರಂದು ಬೃಹತ್ ರ‍್ಯಾಲಿ ಇದೆ ಎಂದು ಸಾಮಾಜಿಕ ತಾಣಗಳಲ್ಲಿ ಹರಿಬಿಡಲಾಗ್ತಿದೆ. ಇದನ್ನ ಗಮನಿಸಿ ನಾವು ಸಂದೇಶಗಳ ಸಂಘಸಂಸ್ಥೆಗಳ ಮುಖ್ಯಸ್ಥರನ್ನ ಸಂಪರ್ಕಿಸಿದ್ದೇವೆ ಎಂದಿದ್ದಾರೆ.

ವಿಪಕ್ಷಗಳಿಂದ ಅಮಿತ್ ಶಾ ತರಾಟೆ: ಏಕಾಏಕಿ ಬಂದ್ ಆದ ರಾಜ್ಯಸಭಾ ಟಿವಿ!

ನಮ್ಮ ಕಡೆಯಿಂದ ಇಲಾಖೆಯ ವತಿಯಿಂದ ಮನವಿ ಕೂಡ ಮಾಡಿದ್ದೇವೆ. ಆದರೆ ಮಂಗಳೂರು ಖಾಜಿಯವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಡಿ.20ರಂದು ಯಾವುದೇ ಪ್ರತಿಭಟನೆ ಇಲ್ಲ ಎಂದು ಅವರು ಹೇಳಿದ್ದಾರೆ. ಆದರೆ ಅವರು ಹೇಳಿದ ಮೇಲೂ ಸಂದೇಶ ರವಾನಿಸುವುದು ಕಾನೂನು ಉಲ್ಲಂಘನೆಯಾಗುತ್ತದೆ. ಹೀಗಾಗಿ ಅಂಥವರನ್ನು ಗುರುತಿಸಿ ನೋಟೀಸ್ ನೀಡಲಾಗಿದೆ ಎಂದಿದ್ದಾರೆ.

ನೊಟೀಸ್ ನೀಡಿದ ಮೇಲೂ, ನಿಯಮ ಉಲ್ಲಂಘಿಸಿ ಇಂಥ ಸಂದೇಶಗಳನ್ನು ರವಾನಿಸಿದಲ್ಲಿ ಅಂತವರ ವಿರುದ್ದ ಕಾನೂನು ಕ್ರಮ ಜರುಗಿಸಲಿದ್ದೇವೆ. ನಾವು ಯಾವುದೇ ನಿಷೇಧ ಹೇರಿಲ್ಲ, ಕಾನೂನು ಸುವ್ಯವಸ್ಥೆ ಗಮನಿಸಿ ಅನುಮತಿ ‌ಕೊಡ್ತೇವೆ. ಡಿ.20 ಮತ್ತು ಡಿ.23ರ‌ ಯಾವುದೇ ಪ್ರತಿಭಟನೆಗೆ‌ ಅನುಮತಿ ನೀಡಿಲ್ಲ ಎಂದು ಡಾ.ಪಿ.ಎಸ್.ಹರ್ಷಾ ಹೇಳಿದ್ದಾರೆ.

ಪೌರತ್ವ ಕಾಯ್ದೆ ರಾಜ್ಯದಲ್ಲಿ ಜಾರಿ ನಿಶ್ಚಿತ: ಬೊಮ್ಮಾಯಿ