ರಾಜ್ಯಸಭೆಯಲ್ಲೂ ಪೌರತ್ವ ಮಸೂದೆ ಪಾಸ್, ಯಾವ ಬದಲಾವಣೆ ಆಗಲಿದೆ?
ಪೌರತ್ವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿಯೂ ಅಂಗೀಕಾರ/ ರಾಜ್ಯಸಭೆಯಲ್ಲಿ ಮಸೂದೆ ಪರವಾಗಿ 125 ಮತಗಳು/ ಮಸೂದೆ ಮಂಡನೆ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ/ ಕಾನೂನಾಗಲು ಸಕಲ ಶಕ್ತಿ ಪಡೆದುಕೊಂಡ ಮಸೂದೆ
ನವದೆಹಲಿ(ಡಿ. 11) ಬಹುಚರ್ಚಿತ ಪೌರತ್ವ ತಿದ್ದುಪಡಿ ಮಸೂದೆಗೆ ಲೋಕಸಭೆಯ ನಂತರ ರಾಜ್ಯಸಭೆಯಲ್ಲಿಯೂ ಅಂಗೀಕಾರ ಸಿಕ್ಕಿದೆ. ಈ ಮೂಲಕ ಕಾನೂನಾಗಿ ಮಾರ್ಪಾಡುಗೊಳ್ಳಲು ಸಕಲ ಶಕ್ತಿ ಪಡೆದುಕೊಂಡಿದೆ.
"
ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ ದೊರೆತಿದ್ದು ಡಿಸೆಂಬರ್ 11 ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಮೇಲ್ಮನೆಯಲ್ಲಿ ಗೃಹ ಸಚಿವ ಅಮಿತ್ ಶಾ ಮಸೂದೆ ಮಂಡಿಸಿದ್ದರು. ಸುದೀರ್ಘ ಚರ್ಚೆಯ ನಂತರ ಸದನದ ಸಭಾಧ್ಯಕ್ಷರಾದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಸೂದೆಯನ್ನು ಮತಕ್ಕೆ ಹಾಕಿದರು.
ಪೌರತ್ವ ತಿದ್ದುಪಡಿ ಮಸೂದೆ ಎಂದರೇನು? ಯಾರಿಗೆ ಲಾಭ ಯಾರಿಗೆ ನಷ್ಟ?
ರಾಜ್ಯಸಭೆಯಲ್ಲಿ ವಿಧೇಯಕದ ಪರವಾಗಿ 125 ಮತಗಳು ಬಂದರೆ, ವಿರುದ್ಧವಾಗಿ 105 ಮತಗಳು ಚಲಾವಣೆಯಾದವು. ಸದನದ ಒಳಗೆ ಈ ಎಲ್ಲ ಘಟನಾವಳಿಗಳು ನಡೆಯುತ್ತಿದ್ದರೆ ಹೊರಗೆ ಮಾತ್ರ ಪರ-ವಿರೋಧದ ಚರ್ಚೆ ಜೋರಾಗಿದೆ. ಇದು ಅಲ್ಪಸಂಖ್ಯಾತರ ವಿರೋಧಿ ಕಾನೂನು ಎಂದು ಹಲವರು ಬಣ್ಣಿಸುತ್ತಿದ್ದಾರೆ.