Asianet Suvarna News Asianet Suvarna News

12 ಆಯಸ್ಕಾಂತೀಯ ಬಟನ್‌ ನುಂಗಿದ್ದ ಮಗು ರಕ್ಷಣೆ

ಆಯಸ್ಕಾಂತೀಯ ಬಟನ್‌ ನುಂಗಿದ್ದ 2 ವರ್ಷದ ಗಂಡು ಮಗು ರಕ್ಷಿಸಿದ ವೈದ್ಯರು| ಬೆಳಗಾವಿ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

Protection of the child from the Swallowed of the magnetic button in Belagavi
Author
Bengaluru, First Published May 13, 2020, 9:46 AM IST

ಬೆಳಗಾವಿ(ಮೇ.13): ಹನ್ನೆರಡು ಆಯಸ್ಕಾಂತೀಯ ಬಟನ್‌ ನುಂಗಿದ್ದ 2 ವರ್ಷದ ಗಂಡು ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯುವ ಮೂಲಕ ಬಾಲಕನ ಜೀವ ರಕ್ಷಿಸಿದ ಘಟನೆ ಬೆಳಗಾವಿ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ನಡೆದಿದೆ. 

ತೀವ್ರ ಹೊಟ್ಟೆನೋವು ಹಾಗೂ ಕಪ್ಪಾದ ಬಣ್ಣದ ಮಲದೊಂದಿಗೆ ತೊಂದರೆ ಅನುಭವಿಸುತ್ತಿದ್ದ ನೆರೆಯ ಗೋವಾದ 2 ವರ್ಷದ ಮಗುವೊಂದು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಗೆ ದಾಖಲಾಗಿತ್ತು. ನಂತರ ಬಾಲಕನನ್ನು ಎಕ್ಸರೇ ತೆಗೆದು ನೋಡಿದಾಗ ಹೊಟ್ಟೆಯಲ್ಲಿ ವಸ್ತುಗಳು ಗೋಚರಿಸಿದ್ದವು. 

ಅಜ್ಮೀರ್‌ನಿಂದ ಬೆಳಗಾವಿಗೆ ಬಂದ 30 ಜನರಿಗೆ ಕೊರೊನಾ; ಕೊಗ್ಗನಹಳ್ಳಿ ಬಳಿ ಕಟ್ಟೆಚ್ಚರ

ತಕ್ಷಣವೇ ಚಿಕ್ಕಮಕ್ಕಳ ತಜ್ಞ ಶಸ್ತ್ರಚಿಕಿತ್ಸಕ ಡಾ.ಸಂತೋಷ ಕುರಬೆಟ್‌ ಅವರು ಸುಮಾರು ಎರಡೂವರೆ ಗಂಟೆ ಶಸ್ತ್ರಚಿಕಿತ್ಸೆ ನೆರವೇರಿಸಿ ಬಾಲಕ ನುಂಗಿದ್ದ 12 ಆಯಸ್ಕಾಂತೀಯ ಬಟನ್‌ ಹೊರತೆಗೆದು ಬಾಲಕನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
 

Follow Us:
Download App:
  • android
  • ios