6 ಗಂಟೆ ಕಾರ್ಯಾಚ​ರಣೆ: ಪ್ರವಾಹದಲ್ಲಿದ್ದ 30 ಕೋತಿಗಳ ರಕ್ಷಣೆ| ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿ ಸಮೀಪ ನಡೆದ ಘಟನೆ| ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿ| ಆಹಾರ ಅರಿಸಿ ಬಂದು ಪ್ರವಾಹ ಮಧ್ಯೆ ಸಿಕ್ಕಿ​ಹಾ​ಕಿ​ಕೊಂಡಿ​ದ್ದ​ ಮಂಗಗಳು|

ಹರಿಹರ(ಆ.08):  ತಾಲೂಕಿನ ರಾಜನಹಳ್ಳಿ ಸಮೀಪ ತುಂಗಭದ್ರಾ ನದಿ ಪ್ರವಾ​ಹದ ಮಧ್ಯೆ ಸಿಲುಕಿದ್ದ 30ಕ್ಕೂ ಹೆಚ್ಚು ಮಂಗಗಳನ್ನು ಶುಕ್ರವಾರ ಆರು ​ಗಂಟೆ​ಗಳ ಕಾರ್ಯಾ​ಚ​ರಣೆ ಬಳಿ​ಕ ರಕ್ಷಿಸಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎರಡು ದಿನಗಳಿಂದ ಗಾಜುನೂರು ಅಣೆಕಟ್ಟೆಯಿಂದ ತುಂಗಾ ನದಿಗೆ ನೀರು ಬಿಡಲಾಗುತ್ತಿದ್ದು, ಇದರ ಜತೆಗೆ ಮಲೆನಾಡು ಭಾಗದಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು, ನದಿಯ ಸಮೀಪದಲ್ಲಿ ಆಹಾರ ಅರಿಸಿ ಬಂದ ಮಂಗಗಳು ಪ್ರವಾಹ ಮಧ್ಯೆ ಸಿಕ್ಕಿ​ಹಾ​ಕಿ​ಕೊಂಡಿ​ದ್ದ​ವು.

ಹೊನ್ನಾಳಿ ಕ್ಷೇತ್ರ ಅಭಿವೃದ್ದಿಗೆ ಸಿಎಂ ಉತ್ತಮ ಸ್ಪಂದನೆ 

ಪ್ರವಾಹ ಏರಿದಂತೆ ಪ್ರಾಣರಕ್ಷಣೆಗೆ ನದಿ ಮಧ್ಯದಲ್ಲಿದ್ದ ಮರವೇರಿ 2 ದಿನಗಳಿಂದ ಆಹಾ​ರ​ವಿ​ಲ್ಲ​ದೆ ಕುಳಿತಿದ್ದವು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ, ಅಗ್ನಿಶಾಮಕ ಹಾಗೂ ಪೊಲೀಸ್‌ ಇಲಾಖೆ ಸಿಬ್ಬಂದಿ ಮೊದಲು ಬೋಟ್‌ ಮೂಲಕ ಸ್ಥಳಕ್ಕೆ ತೆರಳಿ, ಬಲೆ ಹಾಕಿ ಅವುಗಳನ್ನು ಹಿಡಿಯಲು ಯತ್ನಿಸಿ ವಿಫಲರಾದರು. ಬಳಿಕ ಮಂಗಗಳಿದ್ದ ಮರಕ್ಕೆ ಹಾಗೂ ದಡಕ್ಕೆ ಹಗ್ಗ ಕಟ್ಟಲಾಯಿತು. ಕೊನೆಗೆ ಈ ಹಗ್ಗ ಹಿಡಿದು ಮಂಗಗಳು ದಡ ತಲುಪಿದವು.