ಪೃಥ್ವಿರಾಜ್, ಮದುವೆಯಾಗುವುದಾಗಿ ನಂಬಿಸಿ ಜಾತಿಯ ನೆಪವೊಡ್ಡಿ ಯುವತಿಗೆ ವಂಚಿಸಿದ್ದಾನೆ. ಜಾಮೀನಿನ ಮೇಲೆ ಹೊರಬಂದು ಮತ್ತೆ ಪರಾರಿಯಾದ ಈತನ ವಿರುದ್ಧ ಸಂತ್ರಸ್ತೆ ಅಹೋರಾತ್ರಿ ಧರಣಿ ನಡೆಸುತ್ತಿದ್ದಾಳೆ. ನ್ಯಾಯ ಸಿಗುವವರೆಗೂ ಹೋರಾಡುವುದಾಗಿ ಯುವತಿ ಪಟ್ಟು ಹಿಡಿದಿದ್ದಾಳೆ.
ಕೋಲಾರ: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ ಹನುಮನಾಯಕನಹಳ್ಳಿ ಗ್ರಾಮದ ಯುವಕನ ಮನೆ ಎದುರು ಸಂತ್ರಸ್ತ ಯುವತಿ ಧರಣಿ ನಡೆಸಿದರು.
ಮಾಲೂರು ತಾಲೂಕಿನ ಮಡಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮನಾಯಕನಹಳ್ಳಿ ಗ್ರಾಮದ ಪೃಥ್ವಿ ರಾಜ್ ಯುವತಿಗೆ ಮೋಸ ಮಾಡಿರುವ ಯುವಕನಾಗಿದ್ದು, ತಾಲೂಕಿನ ಚಿಕ್ಕಕಡತೂರು ಗ್ರಾಮದ ಯುವತಿ ಸಂತ್ರಸ್ತೆ. ಪೃಥ್ವಿರಾಜ್ ಹಾಗೂ ಯುವತಿ ಸುಮಾರು ಎರಡು ವರ್ಷಗಳಿಂದ ಇನ್ಸ್ಟಾಗ್ರಾಮ್ ಮೂಲಕ ಪ್ರೀತಿ ಪ್ರೇಮದಿಂದ ಪ್ರಾರಂಭವಾಗಿ ಪೃಥ್ವಿರಾಜ್ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಬಳಸಿಕೊಂಡು ನಂತರ ಜಾತಿಯ ನೆಪವಡ್ಡಿ ಮದುವೆಯಾಗುವುದಿಲ್ಲ ಎಂದು ಪರಾರಿಯಾಗಿದ್ದ.
ಮದುವೆಯಾಗೋದಾಗಿ ಹೇಳಿ ಪರಾರಿಯಾದ ಪೃಥ್ವಿರಾಜ್
ಈ ಸಂಬಂಧ ಸಂತ್ರಸ್ತೆ ಎಸ್ಸಿ, ಎಸ್ಟಿ ಸೆಲ್ನಲ್ಲಿ ಪೃಥ್ವಿರಾಜ್ ಮೇಲೆ ಯುವತಿ ಪ್ರಕರಣ ದಾಖಲಿಸಿದ್ದಳು. ಯುವತಿಯ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪೃಥ್ವಿ ರಾಜರನ್ನು ಬಂಧಿಸಿದ್ದರು. ನಂತರ ಬೇಲ್ ಮೇಲೆ ಹೊರಬಂದ ಯುವಕ ಯುವತಿಯನ್ನು ಮದುವೆಯಾಗುವದಾಗಿ ಹೇಳಿ ಮತ್ತೆ ಪರಾರಿಯಾಗಿದ್ದಾನೆ.
ಯುವತಿಯಿಂದ ಅಹೋರಾತ್ರಿ ಧರಣಿ
ಹನುಮನಾಯಕನಹಳ್ಳಿ ಗ್ರಾಮದ ಯುವಕ ಪೃಥ್ವಿರಾಜ್ ಮನೆ ಎದುರು ಪ್ರತಿಭಟನೆ ಮಾಡುತ್ತಿರುವ ಯುವತಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಈಗಾಗಲೇ ಪ್ರಕರಣ ಮಾಲೂರು ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಯುವಕ ಹಾಗೂ ಆತನ ಪೋಷಕರ ವಿರುದ್ಧ ಪ್ರಕರಣ ದಾಖಲು ಮಾಡಿದ್ದು ಅಟ್ರಾಸಿಟಿ ಹಿನ್ನೆಲೆ ಡಿಸಿಅರ್ಇ ಸೆಲ್ನಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಸುಳ್ಳು ಭರವಸೆ, ಆಣೆ ಪ್ರಮಾಣಮಾಡಿ ಬಳಿಕ ಕೈಕೊಟ್ಟಿರುವ ಯುವಕ ಯುವಕನಿಗಾಗಿ ಯುವತಿ ನ್ಯಾಯ ಸಿಗುವವರೆಗೂ ಧರಣಿ ಮಾಡಲಾಗುವುದು ಎಂದು ಪ್ರತಿಭಟನೆ ನಡೆಸುತ್ತಿದ್ದಾಳೆ. ನಗರದ ಪೊಲೀಸ್ ಠಾಣೆಯಿಂದ ಧರಣಿ ನಡೆಸುತ್ತಿರುವ ಸಂತ್ರಸ್ತ ಯುವತಿಗೆ ರಕ್ಷಣೆ ಒದಗಿಸಿದ್ದಾರೆ.


