ಬೆಂಗಳೂರು: ಟ್ರಾಫಿಕ್‌ ತಪ್ಪಿಸಲು ಸಿಗ್ನಲ್ ಫ್ರೀ ಏರ್ಪೋರ್ಟ್‌ ರಸ್ತೆಗೆ ಯೋಜನೆ

ಸಿಗ್ನಲ್‌ಗಳ ನಡುವೆ ಸಿಲುಕಿಯೇ ಯಲಹಂಕ ವಾಯುನೆಲೆವರೆಗೆ ತೆರಳಿ ಅಲ್ಲಿಂದ ಸಿಗ್ನಲ್ ಮುಕ್ತ ರಸ್ತೆಯಲ್ಲಿ ಸಂಚರಿಸಬೇಕಿದೆ. ಹೀಗಾಗಿ ಮೇಲ್ಸೇತುವೆ ಕೆಳಭಾಗದಲ್ಲಿ ಸಂಚರಿಸುವ ವಾಹನಗಳಿಗೂ ಸಿಗ್ನಲ್ ಮುಕ್ತವನ್ನಾಗಿಸುವ ಸಲುವಾಗಿ ಸಿಗ್ನಲ್‌ಗಳ ಬಳಿ ಕೆಳಸೇತುವೆ ನಿರ್ಮಿಸುವ ಕುರಿತು ಚರ್ಚೆ ನಡೆಸಲಾಗಿದೆ.

Project for Signal Free Airport Road in Bengaluru grg

ಗಿರೀಶ್ ಗರಗ 

ಬೆಂಗಳೂರು(ನ.29):  ಹೆಬ್ಬಾಳ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಹನಗಳಿಗೆ ಪೂರ್ಣ ಪ್ರಮಾಣದ ಸಿಗ್ನಲ್ ಫ್ರೀ ವ್ಯವಸ್ಥೆ ಮಾಡಲು ಮುಂದಾಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅತಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತಿರುವ ಸಾದಹಳ್ಳಿ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. 

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿತ್ಯ 750 ವಿಮಾನ ಹಾರಾಟ ನಡೆಸುತ್ತಿದು, 1 ಲಕ್ಷಕ್ಕೂ ಹೆಚ್ಚಿನ ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಸುತ್ತಿದ್ದಾರೆ. ವಿಮಾನ ನಿಲ್ದಾಣಕ್ಕೆ ಬರುವವರಲ್ಲಿ ಶೇ. 80ರಷ್ಟು ಪ್ರಯಾಣಿಕರು ಹೆಬ್ಬಾಳ ಮಾರ್ಗವಾಗಿಯೇ ಬರುತ್ತಾರೆ. ಹೀಗೆ ಹೆಬ್ಬಾಳ ಮೂಲಕವಾಗಿ ವಿಮಾನ ನಿಲ್ದಾಣಕ್ಕೆ ಬರುವ ವಾಹನಗಳಿಗಾಗಿ ಎನ್ ಎಚ್‌ಎಐ ಹೆಬ್ಬಾಳ ಎಸ್ಟೀಂ ಮಾಲ್ ಮುಂಭಾಗದಿಂದ ಯಲಹಂಕ ವಾಯುನೆಲೆವರೆಗೆ ಸುಮಾರು 13 ಕಿ.ಮೀ.ವರೆಗೆ ಮೇಲೇತುವೆ ನಿರ್ಮಿಸಿದೆ. ಆದಾದ ನಂತರವೂ ಸಿಗುವ ಗ್ರಾಮಗಳಲ್ಲಿ ಮೇಲ್ಸೇತುವೆ ಗಳನ್ನು ನಿರ್ಮಿಸಿ ಸಿಗ್ನಲ್ ಫ್ರೀ ಮಾಡಲಾಗಿದೆ. ಆದರೆ, ಟೋಲ್‌ ಪ್ಲಾಜಾ ಬಳಿಯ ಸಾದಹಳ್ಳಿ ಜಂಕ್ಷನ್‌ನಲ್ಲಿ ಯಾವುದೇ ರೀತಿಯ ಕೆಳ ಅಥವಾ ಮೇಲೇತುವೆ ಇಲ್ಲದ ಕಾರಣ ಅಲ್ಲಿ ಹೆಚ್ಚಿನ ಪ್ರಮಾಣ ದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದರಿಂದ ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಅನಾನು ಕೂಲವಾಗುತ್ತಿದೆ. ಅದನ್ನು ನಿವಾರಿಸಲು ಇದೀಗ ಸಾದಹಳ್ಳಿ ಜಂಕ್ಷನ್ ಬಳಿ ಮೇಲ್ವೇತುವೆ ನಿರ್ಮಿಸಲು ಎನ್‌ಎಚ್‌ಎಐ ಯೋಜನೆ ರೂಪಿಸಿದ್ದು, ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.

ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸೂಚಿಸಿದ ನಾಗರಿಕ; ಇಲ್ಲಿ ಯಾರಿಗೆ ನಾಚಿಕೆಯಾಗಬೇಕು?

2 ಲಕ್ಷಕ್ಕೂ ಹೆಚ್ಚಿನ ವಾಹನಗಳಿಗೆ ಅನುಕೂಲ: 

ಹೆಬ್ಬಾಳವರೆಗಿನ ರಸ್ತೆಯನ್ನು ಬಿಡಿಎ ನಿರ್ವಹಣೆ ಮಾಡಿದರೆ ಹೆಬ್ಬಾಳದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗಿನ 28 ಕಿಮೀಗೂ ಹೆಚ್ಚಿನ ಉದ್ದದ ಮಾರ್ಗವನ್ನು ಎನ್‌ಎಚ್‌ ಎಐ ನಿರ್ವಹಣೆ ಮಾಡುತ್ತದೆ. ಹೀಗಾಗಿಯೇ ಸಾದಹಳ್ಳಿ ಜಂಕ್ಷನ್ ಗಿಂತ ಮುಂದೆ ಟೋಲ್ ಶುಲ್ಕ ವಸೂಲಿ ಮಾಡಲಾಗುತ್ತದೆ. ಆದರೆ, ಸಾದಹಳ್ಳಿ ಜಂಕ್ಷನ್‌ನಲ್ಲಿ ಕೆಳ ಮತ್ತು ಮೇಲೇತುವೆ ಇಲ್ಲದ ಕಾರಣ ಅಲ್ಲಿ ಸಂಚಾರ ಸಿಗ್ನಲ್ ಯಿದ್ದು, ಅದರಿಂದ ಸಂಚಾರ ದಟ್ಟಣೆ ವಿಪರೀತ ಹೆಚ್ಚು ತ್ತದೆ. ಅದಾದ ನಂತರ ಟೋಲ್ ಶುಲ್ಕ ಪಾವತಿಸಲು ವಾಹನಗಳು ಮತ್ತೆ ನಿಲ್ಲಲಿವೆ. ಹೀಗಾಗಿ ಎರಡೆರಡು ಕಡೆಗಳಲ್ಲಿ ವಾಹನಗಳು ಸಂಚಾರ ದಟ್ಟಣೆ ಎದುರಿಸ ಬೇಕಾಗುತ್ತದೆ. ಇದನ್ನು ತಪ್ಪಿಸಲು ಸಾದಹಳ್ಳಿ ಜಂಕ್ಷನ್ ನಲ್ಲಿ ಮೇಲ್ಸೇತುವೆ ನಿರ್ಮಿಸುವುದರಿಂದ ಈ ಸಂಚಾರ ದಟ್ಟಣೆಯಲ್ಲಿ ಸಿಲುಕುವುದನ್ನು ತಪ್ಪಿಸಬಹುದಾಗಿದೆ. ಅಲ್ಲದೆ, ಈ ಕ್ರಮದಿಂದಾಗಿ ನಿತ್ಯ ಸಂಚರಿಸಲಿರುವ 2 ಲಕ್ಷಕ್ಕೂ ಹೆಚ್ಚಿನ ವಾಹನಗಳಿಗೆ ಅನುಕೂಲವಾಗಲಿದೆ.

Bengaluru: ಈ 4 ಭಾಗದಲ್ಲಿನ ಟ್ರಾಫಿಕ್ ನಿಯಂತ್ರಿಸಲು ಸಂಸ್ಥೆ ಸೂಪರ್ ಪ್ಲಾನ್

ಮೇಲ್ಸೇತುವೆ ಕೆಳಭಾಗದ ಸಿಗ್ನಲ್‌ಗಳಲ್ಲೂ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತು ಚರ್ಚೆ

ಹೆಬ್ಬಾಳದಿಂದ ಯಲಹಂಕ ವಾಯುನೆಲೆವರೆಗಿನ ಮೇಲ್ಸೇತುವೆಯ ಕೆಳಭಾಗದಲ್ಲಿ ಕೊಡಿಗೆಹಳ್ಳಿ, ಬ್ಯಾಟರಾಯನಪುರ, ಜಕ್ಕೂರು, ಅಲ್ಲಾಳಸಂದ್ರ ಸೇರಿ ಮತ್ತಿತರ ಕಡೆಗಳಲ್ಲಿ ಸಂಚಾರ ಸಿಗ್ನಲ್‌ಗಳು ಸಿಗುತ್ತವೆ. ಅಲ್ಲದೆ, ವಾಹನಗಳು ಹೆಬ್ಬಾಳದಲ್ಲಿ ಮೇಲ್ಸೇತುವೆಯನ್ನು ಹತ್ತದೇ ಮಧ್ಯಭಾಗದಿಂದ ವಿಮಾನ ನಿಲ್ದಾಣಕ್ಕೆ ತೆರಳಲು ಬಳ್ಳಾರಿ ರಸ್ತೆಗೆ ಬಂದರೆ ಮತ್ತೆ ಮೇಲ್ಸೇತುವೆ ಹತ್ತಲು ಸಾಧ್ಯವಿಲ್ಲ. ಹೀಗಾಗಿ, ಸಿಗ್ನಲ್‌ಗಳ ನಡುವೆ ಸಿಲುಕಿಯೇ ಯಲಹಂಕ ವಾಯುನೆಲೆವರೆಗೆ ತೆರಳಿ ಅಲ್ಲಿಂದ ಸಿಗ್ನಲ್ ಮುಕ್ತ ರಸ್ತೆಯಲ್ಲಿ ಸಂಚರಿಸಬೇಕಿದೆ. ಹೀಗಾಗಿ ಮೇಲ್ಸೇತುವೆ ಕೆಳಭಾಗದಲ್ಲಿ ಸಂಚರಿಸುವ ವಾಹನಗಳಿಗೂ ಸಿಗ್ನಲ್ ಮುಕ್ತವನ್ನಾಗಿಸುವ ಸಲುವಾಗಿ ಸಿಗ್ನಲ್‌ಗಳ ಬಳಿ ಕೆಳಸೇತುವೆ ನಿರ್ಮಿಸುವ ಕುರಿತು ಚರ್ಚೆ ನಡೆಸಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳಿಗಾಗಿ ಸಾದಹಳ್ಳಿ ಜಂಕ್ಷನ್‌ವರೆಗೆ ಸಿಗಲ್ ಮುಕ್ತ ವ್ಯವಸ್ಥೆಯಿದೆ, ಹೆಬ್ಬಾಳದಿಂದ ಆರಂಭವಾಗುವ ಸಿಗ್ನಲ್ ಸಿಗದಂತೆ ಮಾಡಲಿದೆ. ಆದರೆ, ಸಾದಹಳ್ಳಿ ಜಂಕ್ಷನ್ ಬಳಿ ಸಂಚಾರ ಸಿಗ್ನಲ್ ಇರುವ ಕಾರಣ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು. ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳಿಗೆ ಸಮಸ್ಯೆ ಯಾಗುತ್ತಿದೆ. ಹೀಗಾಗಿ ಅಲ್ಲಿ ಮೇಲೇತುವೆ ನಿರ್ಮಿಸಲು ಯೋಜಿಸಲಾಗಿದ್ದು, ಶೀಘ್ರದಲ್ಲಿ ಅದರ ಕಾರ್ಯ ಆರಂಭಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ವಿ.ಪಿ.ಬ್ರಹಂಕರ್ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios