Asianet Suvarna News Asianet Suvarna News

Bengaluru Covid 19 Guidelines: ನಗರದಲ್ಲಿ ಮಾಸಾಂತ್ಯವರೆಗೂ ನಿಷೇಧಾಜ್ಞೆ ಜಾರಿ!

*ಕೊರೋನಾ ಸೋಂಕಿನ ಪ್ರಮಾಣ ಅಧಿಕ ಹಿನ್ನೆಲೆ
*ಸಭೆ, ಸಮಾರಂಭ, ಪ್ರತಿಭಟನೆ, ರ‍್ಯಾಲಿ, ಜನ ಗುಂಪು ಸೇರುವುದಕ್ಕೆ ನಿಷೇಧ
*ಸೋಂಕಿತರಾಗಿದ್ದ ಪೊಲೀಸ್‌ ಆಯುಕ್ತ ಪಂತ್‌ ಗುಣಮುಖ

prohibitory orders In Bengaluru city to remain until the end of January  mnj
Author
Bengaluru, First Published Jan 18, 2022, 6:28 AM IST

ಬೆಂಗಳೂರು (ಜ. 18): ಕೊರೋನಾ ನಿಯಂತ್ರಣ ಸಂಬಂಧ ನಗರದಲ್ಲಿ (Bengaluru) ಜಾರಿಗೊಳಿಸಿರುವ 144 ಸೆಕ್ಷನ್‌ ನಿಷೇಧಾಜ್ಞೆಯನ್ನು ಜನವರಿ 31ರವರೆಗೂ ವಿಸ್ತರಿಸಿ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ (Kamal Pant) ಆದೇಶಿಸಿದ್ದಾರೆ. ನಗರದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಳ ಆಗುತ್ತಿದೆ. ಇದರಿಂದ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ನಿಷೇಧಾಜ್ಞೆಯನ್ನು ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ನಗರದಲ್ಲಿ ಯಾವುದೇ ಸಭೆ, ಸಮಾರಂಭ, ಪ್ರತಿಭಟನೆ, ರ‍್ಯಾಲಿ, ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಕಾನೂನು ನಿಯಮ ಉಲ್ಲಂಘಿಸಿದ್ದಲ್ಲಿ ಅಂತವರ ವಿರುದ್ಧ ಸಾಂಕ್ರಾಮಿಕ ರೋಗಿಗಳ ಕಾಯ್ದೆ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರ ಕೆಲ ವಲಯಗಳಿಗೆ ವಿನಾಯಿತಿ ನೀಡಿದ್ದು, ಮದುವೆಗಳಿಗೆ ಹೊರ ಆವರಣದಲ್ಲಿ ಗರಿಷ್ಠ 200 ಮಂದಿ ಹಾಗೂ ಒಳಾಂಗಣದಲ್ಲಿ ನಡೆಯುವ ಮದುವೆಗಳಿಗೆ ಗರಿಷ್ಠ 100 ನೂರು ಜನಕ್ಕೆ ಮಿತಿ ಹೇರಲಾಗಿದೆ. ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆ ವರೆಗೆ ನೈಟ್‌ ಕಫäರ್‍ ಮತ್ತು ವಾರಾಂತ್ಯ ಕಫä್ರ್ಯ ಮುಂದುವರಿಯಲಿದೆ.

ಇದನ್ನೂ ಓದಿCovid 19: 15 ಜಿಲ್ಲೆಗಳಲ್ಲಿ ಕೋವಿಡ್‌ ಸೋಂಕು 10 ಪಟ್ಟು ಹೆಚ್ಚಳ

ಸೋಂಕಿತರಾಗಿದ್ದ ಪೊಲೀಸ್‌ ಆಯುಕ್ತ ಪಂತ್‌ ಗುಣಮುಖ: ಕೊರೋನಾ ಸೋಂಕಿಗೆ ತುತ್ತಾಗಿದ್ದ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರು ಇದೀಗ ಗುಣಮುಖರಾಗಿದ್ದು, ಮಂಗಳವಾರದಿಂದ ಕರ್ತವ್ಯ ನಿರ್ವಹಿಸಲಿದ್ದಾರೆ. ಕೆಲ ದಿನಗಳ ಹಿಂದೆ ಕಮಲ್‌ ಪಂತ್‌ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಹೋಂ ಕ್ವಾರಂಟೈನ್‌ನಲ್ಲಿದ್ದರು. ಈಗ ಕೊರೋನಾ ಸೋಂಕು ಪರೀಕ್ಷೆ ಮಾಡಿಸಿದ್ದು, ವರದಿ ನೆಗೆಟಿವ್‌ ಬಂದಿದೆ. ಹೀಗಾಗಿ ಮಂಗಳವಾರದಿಂದ ಕಚೇರಿಯಿಂದ ಕರ್ತವ್ಯ ನಿರ್ವಹಿಸಲಿದ್ದಾರೆ.

ಸೋಂಕು ಹೆಚ್ಚಿರುವ ಕಡೆ ಮಾತ್ರ ಶಾಲೆ ಬಂದ್‌ ಮಾಡಿ: ರುಪ್ಸಾ: ಕೊರೋನಾ ಸೋಂಕು ಪ್ರಕರಣ ಹೆಚ್ಚಾಗಿರುವ ಶಾಲೆಗಳನ್ನು ಮಾತ್ರ ಬಂದ್‌ ಮಾಡಿ ಉಳಿದಂತೆ 5ರಿಂದ 9ನೇ ತರಗತಿಗಳಿಗೆ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಬೇಕೆಂದು ಖಾಸಗಿ ಶಾಲೆಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸಿವೆ. ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣ ಹೆಚ್ಚಾಗುತ್ತಿವೆ ಎಂದು ರಾಜ್ಯದ 6 ಜಿಲ್ಲೆಗಳಲ್ಲಿ 1ರಿಂದ 9ನೇ ತರಗತಿ ಬಂದ್‌ ಮಾಡಲಾಗಿದೆ. ಕೇವಲ 10ನೇ ತರಗತಿ ಮೇಲ್ಪಟ್ಟಮಕ್ಕಳಿಗೆ ಮಾತ್ರ ಶಾಲೆ ನಡೆಸಲು ಅನುಮತಿ ಕಲ್ಪಿಸಲಾಗಿದೆ. ಆದರೆ, ಕಳೆದ ಒಂದೂವರೆ ವರ್ಷದಿಂದ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ನಡೆದಿಲ್ಲ.

ಇದನ್ನೂ ಓದಿCovid-19 Crisis: ಭಾರತದಲ್ಲೀಗ ಕೋವಿಡ್‌ ಕೇಸ್‌ ಇಳಿಕೆ, ಪಾಸಿಟಿವಿಟಿ ದರ ಏರಿಕೆ 

ಇದರಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲ ತಾಲೂಕು ಪ್ರದೇಶಗಳಲ್ಲಿ ಸೋಂಕಿನ ಪ್ರಕರಣ ಹೆಚ್ಚಾಗಿದೆ ಎಂಬ ಕಾರಣಕ್ಕೆ ಇಡಿ ಜಿಲ್ಲೆಗಳನ್ನೇ ಬಂದ್‌ ಮಾಡುವುದು ಸೂಕ್ತವಲ್ಲ. ಬಂದ್‌ ತೆರವು ಮಾಡಿ ಇಲ್ಲಿ ಕನಿಷ್ಠ 5ರಿಂದ 9ನೇ ತರಗತಿ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಬೇಕು ಎಂದು ರುಪ್ಸಾ ಕರ್ನಾಟಕ ಸಂಘಟನೆಯ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆಅವರು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಕೋವಿಡ್‌ ಸೋಂಕು, ಪಾಸಿಟಿವಿಟಿ ಎರಡೂ ಕುಸಿತ: ರಾಜ್ಯದಲ್ಲಿ ದಿನದಿನಕ್ಕೆ ಏರುತ್ತಿದ್ದ ಕೋವಿಡ್‌ ಪ್ರಕರಣಗಳ (Covid Cases) ಸಂಖ್ಯೆಗೆ ಸೋಮವಾರ ಲಗಾಮು ಬಿದ್ದಿದೆ. ರಾಜ್ಯದಲ್ಲಿ ಸೋಮವಾರ 27,156 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕಳೆದೆರಡು ದಿನಗಳಿಂದ 30 ಸಾವಿರ ಮೀರಿ ವರದಿಯಾಗಿದ್ದ ಹೊಸ ಪ್ರಕರಣಗಳು ಮತ್ತೆ 30 ಸಾವಿರದೊಳಕ್ಕೆ ಬಂದಿದೆ. ಭಾನುವಾರ ಶೇ. 19.29 ಇದ್ದ ಪಾಸಿಟಿವಿಟಿ ದರ ಶೇ. 12.45ಕ್ಕೆ ಇಳಿದಿದೆ. 

ಈ ಮಧ್ಯೆ ಸಕ್ರಿಯ ಪ್ರಕರಣಗಳ ಸಂಖ್ಯೆ 2 ಲಕ್ಷದ ಗಡಿ ದಾಟಿದೆ. ಬೆಂಗಳೂರು (Bengaluru) ನಗರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಇಳಿಕೆ ದಾಖಲಾಗಿದೆ. ಭಾನುವಾರ 21,071 ಪ್ರಕರಣ ದಾಖಲಾಗಿದ್ದರೆ ಸೋಮವಾರ ಹೊಸ ಪ್ರಕರಣಗಳ ಸಂಖ್ಯೆ 15,947ಕ್ಕೆ ಕುಸಿದಿದೆ. ಆದರೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.

Follow Us:
Download App:
  • android
  • ios