Asianet Suvarna News Asianet Suvarna News

ವಿಜಯಪುರದಲ್ಲಿ ಮೂಢನಂಬಿಕೆ ಆಚರಣೆ ಇನ್ನೂ ಜೀವಂತ: ದೇಗುಲದ ಮೇಲಿಂದ ಮಗು ಎಸೆದ ಅರ್ಚಕ..!

ದೇವಸ್ಥಾನದ ಅರ್ಚಕ ಕಲ್ಮೇಶ ಕಟಗೇರಿ ದೇವಸ್ಥಾನದ ಮೇಲಿನಿಂದ ಮಗುವನ್ನ ಎಸೆದ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ. ಅರ್ಚಕ ಕಲ್ಮೇಶ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾನೆ. ಅರ್ಚಕ ಮಾಡಿದ ಮೂಢನಂಬಿಕೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. 

prohibited superstitious practice in Vijayapura grg
Author
First Published Jul 16, 2024, 4:34 PM IST | Last Updated Jul 16, 2024, 5:00 PM IST

ವಿಜಯಪುರ(ಜು.16):  ವಿಜಯಪುರದಲ್ಲಿ ನಿಷೇಧಿತ ಮೂಢನಂಬಿಕೆಯ ಆಚರಣೆ ಇಂದಿಗೂ ಜೀವಂತವಿದೆ. ಹೌದು, ಅರ್ಚಕನೊಬ್ಬ ದೇಗುಲದ ಮೇಲಿಂದ ಮಗುವನ್ನ ಎಸೆದು ಹರಕೆ ತೀರಿಸಿದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಹೊಳೆ ಹಂಗರಕಿ ಗ್ರಾಮದಲ್ಲಿ ನಡೆದಿದೆ. 

ದೇವಸ್ಥಾನದ ಅರ್ಚಕ ಕೂಸನ್ನು ದೇವಸ್ಥಾನದ ಮೇಲಿಂದ ಎಸೆದಿದ್ದಾನೆ. ಮೇಲಿಂದ ಎಸೆದ ಕೂಸನ್ನು ಪೋಷಕರು ಕೆಳಗಡೆ ಕಂಬಳಿಯಲ್ಲಿ ಹಿಡಿದಿದ್ದಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಮಗುವಿನ ಜೀವಕ್ಕೆ ಅಪಾಯ ಕಟ್ಟಿಟ್ಟಬುತ್ತಿ. ಇದೆಲ್ಲಾ ಗೊತ್ತಿದ್ದರೂ ಕೂಡ ಮೂಢನಂಬಿಕೆ ಆಚರಣೆಯನ್ನ ಜನರು ಮಾಡುತ್ತಿದ್ದಾರೆ. 

ನಾನು ದೇವರನ್ನು ನಂಬುತ್ತೇನೆ, ಮೌಢ್ಯ, ಮೂಢನಂಬಿಕೆ ವಿರೋಧಿಸುತ್ತೇನೆ: ಸಿಎಂ

ದೇವಸ್ಥಾನದ ಅರ್ಚಕ ಕಲ್ಮೇಶ ಕಟಗೇರಿ ದೇವಸ್ಥಾನದ ಮೇಲಿನಿಂದ ಮಗುವನ್ನ ಎಸೆದ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ. ಅರ್ಚಕ ಕಲ್ಮೇಶ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾನೆ. ಅರ್ಚಕ ಮಾಡಿದ ಮೂಢನಂಬಿಕೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. 

Latest Videos
Follow Us:
Download App:
  • android
  • ios