Asianet Suvarna News Asianet Suvarna News

ನಾನು ದೇವರನ್ನು ನಂಬುತ್ತೇನೆ, ಮೌಢ್ಯ, ಮೂಢನಂಬಿಕೆ ವಿರೋಧಿಸುತ್ತೇನೆ: ಸಿಎಂ

ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಹುದ್ದೆಯ ಬದಲಾವಣೆ ಕುರಿತ ಚರ್ಚೆ ಮುನ್ನೆಲೆಗೆ ಬರುತ್ತಿದ್ದಂತೆ ವಿಜಯನಗರ ಜಿಲ್ಲೆಯ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ರುದ್ರಾಕ್ಷಿ ಮಾಲೆಯನ್ನು ಧರಿಸಿದ್ದಾರೆ. ಜೊತೆಗೆ, ನನಗೆ ಮೂಢನಂಬಿಕೆ, ಮೌಢ್ಯಗಳಲ್ಲಿ ನಂಬಿಕೆ ಇಲ್ಲ, ಆದ್ರೆ ದೇವರನ್ನು ನಂಬುತ್ತೇನೆ ಎಂದು ಸಮಜಾಯಿಷಿ ನೀಡಿದ್ದಾರೆ.

Special Puja at Hampi Virupaksha Temple by CM Siddaramaiah at vijayanagar rav
Author
First Published Nov 2, 2023, 6:55 PM IST

ವಿಜಯನಗರ (ನ.2): ಇಂದು ವಿಜಯನಗರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ತಾಯಿ ಭುವನೇಶ್ವರಿ ದೇವಿಗೂ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ. ಸಿದ್ದರಾಮಯ್ಯ ಹೆಸರಲ್ಲಿ ಅರ್ಚನೆ ಮಾಡಿದರು. ಬಳಿಕ ಸಿಎಂ ಸಿದ್ದರಾಮಯ್ಯರಿಗೆ ರುದ್ರಾಕ್ಷಿ ಮಾಲೆ ಹಾಕಿದ ವಿದ್ಯಾರಣ್ಯ ಭಾರತೀ ಸರಸ್ವತಿ ಸ್ವಾಮೀಜಿ. 

ಹಂಪಿ ವಿರೂಪಾಕ್ಷ ದೇವಸ್ಥಾನ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಕರ್ನಾಟಕ  ನಾಮಕರಣ ವಾಗಿ 50 ವರ್ಷ ಪೂರ್ಣಗೊಂಡ ಹಿನ್ನೆಲೆ ಜೋತಿ ರಥಯಾತ್ರೆಗೆ ವಿರೂಪಾಕ್ಷ ದೇವಸ್ಥಾನದಿಂದಲೇ ಚಾಲನೆ ನೀಡಿದ್ದೇವೆ. 1973, ನವೆಂಬರ್ 2 ರಂದು ಜೋತಿ ರಥಯಾತ್ರೆಗೆ ಗೆ ಹಂಪಿಯಿಂದಲೇ  ದೇವರಾಜ್ ಅರಸು ಚಾಲನೆ ನೀಡಿದ್ರು. ಅರಸು ಅವರು ಮೈಸೂರು ಜಿಲ್ಲೆಯವರು, ನಾನು ಮೈಸೂರು ಜಿಲ್ಲೆಯವನು. ಒಂದು ವರ್ಷ ಸಂಭ್ರಮಾಚರಣೆ ನಡೆಯುತ್ತದೆ. ಅಂದು ದೇವರಾಜ್ ಅರಸು ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿದ್ದರು. ಇದೀಗ ನನಗೆ ಅವಕಾಶ ಸಿಕ್ಕಿರುವುದು ಕಾಕತಾಳೀಯವಾಗಿದೆ. ನನಗೆ ಮೂಡನಂಬಿಕೆ, ಮೌಡ್ಯಗಳಲ್ಲಿ ನಂಬಿಕೆ ಇಲ್ಲ. ಆದ್ರೇ ದೇವರನ್ನು ನಾನು ನಂಬುತ್ತೇನೆ. ಸಮಾಜಕ್ಕೆ ಒಳ್ಳೆಯದಾಗೋದನ್ನು ನಂಬುತ್ತೇನೆ. ಕೆಟ್ಟದ್ದಾಗೋದನ್ನು ನಂಬಲ್ಲ ಎಂದು ಸಮಜಾಯಿಷಿ ನೀಡಿದರು.

'ಐದು ವರ್ಷ ನಾನೇ ಸಿಎಂ' ಸಿದ್ದರಾಮಯ್ಯ ಹೇಳಿಕೆ ಬೆನ್ನಲ್ಲೇ ಡಿಕೆಶಿ ಸಿಎಂ ಆಗಲೇಬೇಕು ಎಂದ ರಾಮನಗರ ಶಾಸಕ ಇಕ್ಬಾಲ್!

ಕನ್ನಡ ಜ್ಯೋತಿ ಬೆಳಗಿದ ಸಿಎಂ

ವಿಜಯನಗರ: ಕರ್ನಾಟಕ ಹೆಸರು ನಾಮಕರಣ ಮಾಡಿ ಐವತ್ತು ವರ್ಷದ ಸಂಭ್ರಮಾಚರಣೆ ಹಿನ್ನೆಲೆ ಕನ್ನಡದ ಜ್ಯೋತಿ ಬೆಳಗಿದ ಸಿಎಂ ಸಿದ್ದರಾಮಯ್ಯ. ಹಂಪಿಯ ಎದುರು ಬಸವಣ್ಣ ಮಂಟಪದ ಮುಂದೆ ಇರೋ ಬೃಹತ್ ಧ್ವಜಸ್ಥಂಭ. ರಾಜ್ಯಾದ್ಯಂತ ತಿರುಗಾಡೋ ರಥಯಾತ್ರೆಯ ಜ್ಯೋತಿಯಾತ್ರೆಗೆ  ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿದರು. ಈ ವೇಳೆ ಸಿಎಂ ಸಿದ್ದರಾಮಯ್ಯಗೆ ಸಚಿವರಾದ ಹೆಚ್.ಕೆ. ಪಾಟೀಲ್, ಬೈರತಿ ಸುರೇಶ್, ಜಮೀರ್ ಆಹ್ಮದ್ ಸೇರಿದಂತೆ ವಿಜಯನಗರ ಜಿಲ್ಲೆಯ ಎಲ್ಲಾ ಶಾಸಕರು ಸಾಥ್ ನೀಡಿದರು.

ಐದು ವರ್ಷವೂ ನಾನೇ ಸಿಎಂ ಆಗಿರ್ತೀನಿ: ಬದಲಾವಣೆ ಬಗ್ಗೆ ಮಾತನಾಡಿದವರಿಗೆ ಎಚ್ಚರಿಕೆ ರವಾನಿಸಿದ ಸಿದ್ದರಾಮಯ್ಯ

Follow Us:
Download App:
  • android
  • ios