Asianet Suvarna News Asianet Suvarna News

ರೈತರ ಕುಟುಂಬಕ್ಕೆ ಕಂಟಕ: ಕೃಷಿ ಹೊಂಡಕ್ಕೆ ಬಿದ್ದು ರೈತನ ಇಬ್ಬರು ಮಕ್ಕಳು ಸಾವು

ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ದುರಂತ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಕಲ್ಲು ಗ್ರಾಮದಲ್ಲಿ ನಡೆದಿದೆ. 

Problem for Farmers Family falling into farm pit Two Farmer children died sat
Author
First Published Feb 6, 2023, 1:27 PM IST

ವಿಜಯನಗರ (ಫೆ.06):  ಕೃಷಿ ಕಾರ್ಯಕ್ಕಾಗಿ ಹಾಗೂ ನೀರಾವರಿ ಅನುಕೂಲಕ್ಕಾಗಿ ಜಮೀನಿನಲ್ಲಿ‌ ನಿರ್ಮಾಣ ಮಾಡಲಾಗಿದ್ದ ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ದುರಂತ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಬನ್ನಿಕಲ್ಲು ಗ್ರಾಮದಲ್ಲಿ ನಡೆದಿದೆ. 

ಬನ್ನುಕಲ್ಲು ಗ್ರಾಮದ ಹಂಪಸಾಗರದ ನಾಗರಾಜ ಎಂಬುವರ ಕೃಷಿ ಹೊಂಡದಲ್ಲಿ ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇನ್ನು ಮೃತ ವಿದ್ಯಾರ್ಥಿಗಳನ್ನು ಅಭಿಶೇಕ್ (15), ಜಿತೇಂದ್ರ (10) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಉಪತಹಸೀಲ್ದಾರ ಶಂಕ್ರಪ್ಪ ಹಾಗೂ ಎಎಸ್ ಐ ಕರಿವೀರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಬೆಳಗ್ಗೆ ಜಮೀನೊನ ಕಡೆಗೆ ಹೋಗಿದ್ದ ಮಕ್ಕಳು ಬಹಳ ಹೊತ್ತಾದರೂ ಬಾರದ ಹಿನ್ನೆಲೆಯಲ್ಲಿ ಹೊಲದ ಬಳಿ ಹೋಗಿ ನೋಡಲಾಗಿದೆ. ಈ ವೇಳೆ ಕೃಷಿ ಹೊಂಡ ಬಳಿ ಚಪ್ಪಲಿಗಳು ಇದ್ದು, ಅದರೊಳಗೆ ದೇಹ ಇರುವ ಬಗ್ಗೆ ಪರಿಶೀಲನೆ ಮಾಡಿದಾಗ ಮೃತ ದೇಹಗಳು ಪತ್ತೆಯಾಗಿವೆ.

ಮಗುವಿನಂತೆ ಬೆಳೆಸಿದ್ದ ದ್ರಾಕ್ಷಿ ಬೆಳೆಗೆ ತಪ್ಪು ಔಷಧ ಸಿಂಪಡಣೆ: ಬೆಳೆ ನಾಶಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ರೈತ

ಸ್ಕಾರ್ಪಿಯೋ ಡಿಕ್ಕಿ ಆರ್‌ಟಿಒ ಸಿಬ್ಬಂದಿ ಸಾವು: ರಾಯಚೂರು (ಫೆ.06):  ರಾಯಚೂರು ನಗರದ ಆರ್‌ಟಿಒ ವೃತ್ತದಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಆರ್‌ಟಿಒ ಕಚೇರಿ ಸಿಬ್ಬಂದಿಗೆ ಸ್ಕಾರ್ಪಿಯೋ ವಾಹನ ಬಂದು ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲಿಯೇ ಆರ್‌ಟಿಒ ಸಿಬ್ಬಂದಿ ಚಂದ್ರಕಾಂತ್ (34) ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಆರ್ ಟಿಒ ಸಿಬ್ಬಂದಿ ಸಾವನ್ನಪ್ಪಿದರೆ, ಬೈಕ್‌ನ ಹಿಂಬದಿ ಸವಾರ ನಿಲೇಶ್‌ಗೆ ಗಂಭೀರ ಗಾಯವಾಗಿದೆ. ಮೃತ ಚಂದ್ರಕಾಂತ್ ನಗರದ ಆರ್ ಟಿಒ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದನು. ಬೈಕ್‌ ನಲ್ಲಿ ಆರ್ ಟಿಓ ಸರ್ಕಲ್ ನಿಂದ ಬಿಆರ್ ಬಿ ಸರ್ಕಲ್‌ಗೆ ಹೋಗುತ್ತಿದ್ದ ವೇಳೆ ವೇಗವಾಗಿ ಆಗಮಿಸಿದ ಸ್ಕಾರ್ಪಿಯೋ ಚಾಲಕನ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿಯಾಗಿದೆ. ಸ್ಕಾರ್ಪಿಯೋ ವಾಹನ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಹುಲುಸಾಗಿ ಬೆಳೆದಿದ್ದ ಅಡಿಕೆ ಗಿಡ ಕಡಿದ ಕಿಡಿಗೇಡಿಗಳು: ಚಿಕ್ಕಮಗಳೂರು (ಫೆ.06):  ಕಡೂರು ತಾಲೂಕಿನ ಕಲ್ಲಾಪುರ ಗ್ರಾಮದಲ್ಲಿ ರೇವಣ್ಣ ಎಂಬುವರಿಗೆ ಸೇರಿದ ಸುಮಾರು 600 ಕ್ಕೂ ಹೆಚ್ಚು ಅಡಿಕೆ ಸಸಿಗಳನ್ನು ಕಿಡಿಗೇಡಿಗಳು ರಾತ್ರಿ ವೇಳೆ ಕಡಿದು ಹಾಕಿರುವ ಘಟನೆ ನಡೆದಿದೆ. ಕಳೆದ ಎರಡು ವರ್ಷಗಳಿಂದ ಅಡಿಕೆ ಗಿಡಗಳನ್ನು ಬೆಳೆಸಿ ಪೋಷಣೆ ಮಾಡಲಾಗುತ್ತಿತ್ತು. ಆದರೆ, ಕಿಡಿಗೇಡಿಗಳು ಬೆಳೆಯನ್ನು ಸಹಿಸಲಾಗದೇ ಅಡಿಕೆ ಗಿಡಗಳನ್ನು ಬುಡಕ್ಕೆ ಕತ್ತರಿಸಿ ನಾಶಗೊಳಿಸಿದ್ದಾರೆ. ಇನ್ನು ಕೆಲವು ಗಿಡಗಳು ಮಾತ್ರ ಉತ್ತಮವಾಗಿದ್ದು, ಬಹುತೇಕ ಗಿಡಗಳು ನಾಶವಾಗಿವೆ ಎಂದು ರೈತ ರೇವಣ್ಣ ಅಳಲು ತೋಡಿಕೊಂಡಿದ್ದಾರೆ. 

ಇಸ್ಪೀಟ್‌ ಜೂಜಾಟದಿಂದ ಸಾಲ: ಸೆಲ್ಫಿ ವೀಡಿಯೋ ಮಾಡಿಟ್ಟು ನೇಣಿಗೆ ಶರಣಾದ ಯುವಕ

ಜಾತ್ರೆಗೆ ಹೋಗಿದ್ದ ವೇಳೆ ದುಷ್ಕೃತ್ಯ: ಸಂಬಂಧಿಕರ ಊರಿನಲ್ಲಿ ಜಾತ್ರೆಯ ನಿಮಿತ್ತವಾಗಿ ರೇವಣ್ಣ ಅವರು ಕುಟುಂಬ ಸಮೇತರಾಗಿ ಊರಿಗೆ ಹೋಗಿದ್ದರು. ಇದನ್ನು ಗಮನಿಸಿದ ಕಿಡಿಗೇಡಿಗಳು ಅಡಿಕೆ ತೋಟದ ಮಾಲೀಕ ರೇವಣ್ಣನ ಮೇಲಿನ ದ್ವೇಷದಿಂದ ರಾತ್ರಿ ವೇಳೆ ಹೊಲಕ್ಕೆ ನುಗ್ಗಿ ಅಡಿಕೆ ಗಿಡಗಳನ್ನು ನಾಶ ಮಾಡಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ತೆಂಗಿನ ಗಿಡಗಳನ್ನೂ ಕಡಿದು ಹಾಕಲಾಗಿದೆ. ಈ ಘಟನೆಗೆ ಕುರಿತಂತೆ ರೈತ ರೇವಣ್ಣ ಅವರು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಿಡಿಗೇಡಿಗಳನ್ನು ಬಂಧಿಸಿ ನ್ಯಾಯ ಕೊಡಿಸಬೇಕು. ತಮ್ಮ ಬೆಳೆಗಳು ಹಾಳಾಗಿದ್ದಕ್ಕೆ ಪರಿಹಾರ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ. 

Problem for Farmers Family falling into farm pit Two Farmer children died sat

Follow Us:
Download App:
  • android
  • ios