ಇಸ್ಪೀಟ್ ಜೂಜಾಟದಿಂದ ಸಾಲ: ಸೆಲ್ಫಿ ವೀಡಿಯೋ ಮಾಡಿಟ್ಟು ನೇಣಿಗೆ ಶರಣಾದ ಯುವಕ
ದೇವರ ಕೋಣೆಯಲ್ಲಿ ಕುಳಿತು ಸೆಲ್ಫಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೂರು ದಿನಗಳ ಬಳಿಕ ಬೆಳಕಿಗೆ ಬಂದಿದೆ.
ರಾಮನಗರ (ಫೆ.05): ನನ್ನ ಸ್ನೇಹಿತರು ಇಸ್ಪೀಟ್ ಸೇರಿ ಹಲವು ದುಶ್ಚಟಗಳನ್ನು ಕಲಿಸಿ ಸುಮಾರು ೮ ಲಕ್ಷ ರೂ. ನಷ್ಟಕ್ಕೆ ಕಾರಣವಾಗಿದ್ದಾರೆ. ಆದರೆ, ನನ್ನ ಮನೆಯವರು ನನ್ನ ಸಾವಿಗೆ ಕಾರಣವಲ್ಲ ಎಂದು ಯುವಕನೊಬ್ಬ ತಮ್ಮ ಮನೆಯಲ್ಲಿರುವ ದೇವರ ಕೋಣೆಯಲ್ಲಿ ಕುಳಿತು ಸೆಲ್ಫಿ ವೀಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೂರು ದಿನಗಳ ಬಳಿಕ ಬೆಳಕಿಗೆ ಬಂದಿದೆ.
ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯ ವಾಸುದೇವಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸೆಲ್ಪೀ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಶಿವರಾಜ್(35) ಎಂದು ಗುರುತಿಸಲಾಗಿದೆ. ತನ್ನ ಮನೆಯಲ್ಲಿನ ಫ್ಯಾನ್‌ಗೆ ನೇಣು ಬಿಗಿದುಕೊಂಡು ಮೂರು ದಿನಗಳ ಹಿಂದೆಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೂರು ದಿನಗಳ ಬಳಿಕ ತಾನು ಮಾಡಿದ್ದ ಸೇಲ್ಪಿ ವಿಡಿಯೋಗಳು ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಮಡಿಲಿನಲ್ಲಿ ಕೊನೆಯುಸಿರು ಬಿಟ್ಟ; ಚಿತ್ರರಂಗ ಬಿಡಲು ತಮ್ಮನ ಸಾವು ಕಾರಣ ಎಂದು ಕಣ್ಣೀರಿಟ್ಟ ಕಾರುಣ್ಯ ರಾಮ್
ಮೃತ ದುರ್ದೈವಿ ಶಿವರಾಜ್ ತನ್ನ ಸ್ನೇಹಿತರ ಬಳಿ ಮೀಟರ್ ಬಡ್ಡಿಗೆ ಸಾಲ ಪಡೆದಿದ್ದನು. ಒಟ್ಟು 40 ಸಾವಿರ ಹಣ ಸಾಲ ಪಡೆದಿದ್ದು, ಸಾಲದ ಹಣ ವಾಪಾಸ್ ನೀಡದಿದ್ದಕ್ಕೆ ಶಿವರಾಜ್ ಗೆ ಕಿರುಕುಳ ನೀಡಿದ್ದಾರೆ. ಸ್ನೇಹಿತರ ನಿರಂತರ ಕಿರಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೀಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಈ ಘಟನೆ ಕುರಿತು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಓರ್ವ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಕಾಡಾನೆ ದಾಳಿಗೆ ವ್ಯಕ್ತಿ ಬಲಿ: ಕೊಡಗು (ಫೆ.05): ಕಾಡಾನೆ ದಾಳಿಗೆ ವ್ಯಕ್ತಿ ಸಾವನ್ನಪ್ಪಿಉದ ಘಟನೆ ಸೋಮವಾರಪೇಟೆ ತಾಲ್ಲೂಕಿನ ಶಾಂತಾಪುರದಲ್ಲಿ ಇಂದು ನಡೆದಿದೆ. ಕುಮಾರ(40) ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಕೊಡಗಿನ ಶಾಂತಪುರದಲ್ಲಿ ಆನೆ ದಾಳಿ ಮಾಡಿದೆ. ಸೋಮವಾರಪೇಟೆ ತಾಲ್ಲೂಕಿನ ಶಾಂತಾಪುರ ಹೇಮಾವತಿ ಹಿನ್ನೀರಿನಲ್ಲಿ ಆನೆ ದಾಳಿ ಮಾಡಿದೆ. ಕೆಲಸಕ್ಕೆಂದು ಹೋಗಿದ್ದ ಸಂದರ್ಭ ಆನೆ ದಾಳಿ ಉಂಟಾಗಿದ್ದು, ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಿದ್ದಾನೆ. ಆದರೆ, ಸಾಧ್ಯವಾಗದೇ ಆನೆ ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸ್ಥಳಕ್ಕೆ ಶನಿವಾರಸಂತೆ ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ಮಾಡಿದ್ದಾರೆ. ನಂತರ, ಮೃತದೇಹವನ್ನು ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.