ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತು ತಲುಪಬೇಕು: ಟಿ.ಬಿ.ಜಯಚಂದ್ರ

ಶಿರಾ ತಾಲೂಕಿನ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತು ದೊರಕಬೇಕು ಎಂಬುದೇ ನನ್ನ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಿ ಎಲ್ಲರ ಸಮಸ್ಯೆಗಳನ್ನು ಆಲಿಸುತ್ತೇನೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.

Privileges of government should reach even the most extreme person: T.B. Jayachandra snr

  ಶಿರಾ :  ಶಿರಾ ತಾಲೂಕಿನ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತು ದೊರಕಬೇಕು ಎಂಬುದೇ ನನ್ನ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಿ ಎಲ್ಲರ ಸಮಸ್ಯೆಗಳನ್ನು ಆಲಿಸುತ್ತೇನೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.

ತಾಲೂಕಿನ ತಡಕಲೂರು ಗ್ರಾಮದಲ್ಲಿ ಯರಬಳ್ಳಿ ಮಾರಮ್ಮ ದೇವಾಲಯದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಸಮಾಜದ ಒಳಿತಿಗಾಗಿ ಶ್ರಮಿಸುವ ವ್ಯಕ್ತಿತ್ವವನ್ನು ನಾವು ದೈವ ಸ್ಥಾನದಲ್ಲಿ ಇರಿಸಿ ನೋಡುತ್ತೇವೆ. ಒಳಿತು ಕೆಡಕುಗಳನ್ನು ಅರಿತು ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವನ್ನು ಅರಿತು ಸಂತೈಸುವ ಮನೋಭಾವ ಪ್ರತಿಯೊಬ್ಬರಲ್ಲೂ ಬಂದಾಗ ಸಮ ಸಮಾಜದ ಕನಸು ನನಸಾಗುತ್ತದೆ ಎಂದ ಅವರು ಸೆಪ್ಟೆಂಬರ್ 11ರಂದು ಬೃಹತ್ ಮಟ್ಟದಲ್ಲಿ ಉದ್ಯೋಗ ಮೇಳ ಹಮ್ಮಿಕೊಂಡಿದ್ದು, ತಾಲೂಕಿನ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಯುವಕ ಯುವತಿಯರು ಇದರ ಪ್ರಯೋಜನ ಪಡೆದುಕೊಳ್ಳಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಡಕಲೂರು ಗ್ರಾಪಂ ಅಧ್ಯಕ್ಷ ಹರೀಶ್, ಸದಸ್ಯರಾದ ರವಿ, ರಾಮಚಂದ್ರಪ್ಪ, ಮುಖಂಡರಾದ ಲಕ್ಕನಹಳ್ಳಿ ಕುಮಾರ್, ಚಿರತಹಳ್ಳಿ ಮಂಜುನಾಥ್, ರಾಜೇಶ್ ಗೌಡ, ಕಿರಣ್ ಗೌಡ, ಗೋವಿಂದ್, ರಾಮದಾಸ್, ಭಾರತಿ ಸೇರಿದಂತೆ ಹಲವರು ಹಾಜರಿದ್ದರು.

ವಿದ್ಯುತ್ ವೋಲ್ಟೇಜ್ ಸಮಸ್ಯೆ ನಿವಾರಿಸಲು ಕ್ರಮ

  ಶಿರಾ : ತಾಲೂಕಿನ ರೈತರಿಗೆ ಬಾಧಿಸುತ್ತಿದ್ದ ವೋಲ್ಟೇಜ್ ಸಮಸ್ಯೆ ನಿವಾರಿಸಲು ಹೆಚ್ವಿಡಿಎಸ್ ಅಳವಡಿಸಲಾಗುವುದು ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.

ಅವರು ನಗರದ 220 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 100 ಎಂಎಎಚ್ ವಿದ್ಯುತ್ ಪರಿವರ್ತಕವನ್ನು ಚಾಲನೆಗೊಳಿಸಿ ಮಾತನಾಡಿದರು. ಬರಗೂರು, ತಾಳಗುಂದದಲ್ಲಿ ಪವರ್ ಸ್ಟೇಷನ್ ಶೀಘ್ರವಾಗಿ ಆರಂಭಿಸಲಾಗುವುದು ಅಲ್ಲದೆ ಎಂ.ದಾಸರಹಳ್ಳಿ, ಗೌಡಗೆರೆ ಕ್ರಾಸ್, ಹೇರೂರು, ದ್ವಾರನಕುಂಟೆ, ದೊಡ್ಡಗೂಳದಲ್ಲಿ 66 ಕೆ.ವಿ ವಿದ್ಯುತ್ ಉಪ ಸ್ಥಾವರವನ್ನು ಆರಂಭಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷೆ ಪೂಜಾ ಪೆದ್ದರಾಜು, ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಅಭಿಯಂತರರಾದ ಸೈಯದ್ ಮೆಹಮೂದ್, ಜಯದೇವಪ್ಪ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜಯರಾಮ್, ಗೋವಿಂದರಾಯ, ಶಾಂತರಾಜ್, ಗಿರೀಶ್, ಸಹಾಯಕ ಅಭಿಯಂತರ ಗವೀಶ್, ಸಂಜಯ್ ಜಿ.ಪಂ.ಮಾಜಿ ಸದಸ್ಯ ಅರೇಹಳ್ಳಿ ರಮೇಶ್, ಮುಖಂಡರಾದ ನಸ್ರುಲ್ಲಾ ಖಾನ್, ಗೌಡಗೆರೆ ವಸಂತ್, ಶ್ರೀನಿವಾಸ್, ಎಂ.ಎಸ್.ರಾವ್ ಸೇರಿದಂತೆ ಹಲವರು ಹಾಜರಿದ್ದರು.

ಬೆಂಗಳೂರು(ಸೆ.06):  ರಾಜ್ಯದ ಯಾವುದೇ ಭಾಗದಲ್ಲೂ ಅಘೋಷಿತ ವಿದ್ಯುತ್‌ ಕಡಿತ ಮಾಡಿಲ್ಲ. ಲೋಡ್‌ ಶೆಡ್ಡಿಂಗ್‌ ಮಾಡುವಂತೆ ಅಧಿಕಾರಿಗಳಿಗೆ ಯಾವ ಸೂಚನೆಯನ್ನೂ ನೀಡಿಲ್ಲ. ವಿದ್ಯುತ್‌ ಸ್ಥಾವರಗಳ ದುರಸ್ಥಿ ಕಾರ್ಯಗಳು ಇರುವೆಡೆ ಕೊಂಚ ವ್ಯತ್ಯಯಗಳು ಆಗಿರಬಹುದು ಅಷ್ಟೆಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ವಿದ್ಯುತ್‌ ಕಡಿತ ಮಾಡುತ್ತಿರುವ ಬಗ್ಗೆ ರೈತರಿಂದ ಬರುತ್ತಿರುವ ದೂರುಗಳ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಮಳೆ ಕೊರತೆಯಿಂದ ವಿದ್ಯುತ್‌ ಬೇಡಿಕೆ ಹೆಚ್ಚಾಗಿದೆ. ಬೇಸಿಗೆಯಲ್ಲಿ ಇರುವಷ್ಟು ವಿದ್ಯುತ್‌ ಬೇಡಿಕೆ ಈಗಲೇ ಇದೆ. ಥರ್ಮಲ್‌ ವಿದ್ಯುತ್‌ ಘಟಕ ದುರಸ್ತಿ ನಡೆಯುತ್ತಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಕೆಲವೆಡೆ ಕೊಂಚ ವ್ಯತ್ಯಯ ಆಗಿರಬಹುದು. ಆದರೆ, ಎಲ್ಲಿಯೂ ಲೋಡ್‌ ಶೆಡ್ಡಿಂಗ್‌ಗೆ ಸೂಚನೆ ನೀಡಿಲ್ಲ ಎಂದು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios