Asianet Suvarna News Asianet Suvarna News

ಪ್ರವಾಸಿ ಕೇಂದ್ರಗಳ ಖಾಸಗೀಕರಣ: ಜನರ ಮನಸ್ಥಿತಿ ಬದಲಾಗ್ಬೇಕಿದೆ ಎಂದ ಸಚಿವ ಹೆಬ್ಬಾರ್‌

*  ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಸಲು ಹೇರಳವಾದ ಅವಕಾಶ 
*  ಪ್ರವಾಸೋದ್ಯಮ ಬೆಳೆಸಲು ಜನಪ್ರತಿನಿಧಿಗಳು ಇಚ್ಛಾಶಕ್ತಿ  ತೋರಿದರೂ ವಿರೋಧ
*  ಪಕ್ಕದ ಗೋವಾದಲ್ಲಿ ಖಾಸಗೀಕರಣ ಮೂಲಕವೇ ಪ್ರವಾಸೋದ್ಯಮ ಚಟುವಟಿಕೆ
 

Privatization of Tourist Spots Will Boost Uttara Kannada Tourism grg
Author
Bengaluru, First Published Oct 17, 2021, 10:11 AM IST
  • Facebook
  • Twitter
  • Whatsapp

ಕಾರವಾರ(ಅ.17):  ಪ್ರವಾಸೋದ್ಯಮ(Tourism) ಬೆಳೆಸಲು ಹೇರಳವಾದ ಅವಕಾಶವಿರುವ ಜಿಲ್ಲೆಯಂದ್ರೆ ಉತ್ತರಕನ್ನಡ(Uttara Kannada) ಜಿಲ್ಲೆ. ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಬೆಳೆಸಲು ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಸಿದರೂ ಕೆಲವು ಜನರು ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಈ ಕಾರಣದಿಂದ ಸಚಿವ ಶಿವರಾಮ‌ ಹೆಬ್ಬಾರ್ ಅವರು ಜನರು ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಿ ಎಂದು ಒತ್ತಾಯಿಸಿದ್ದಾರೆ.

"

ಉತ್ತರಕನ್ನಡ ಜಿಲ್ಲೆಯಲ್ಲಿ ವಾರ್‌ಶಿಪ್, ರಾಕ್ ಗಾರ್ಡನ್(Rock Garden), ಬೀಚ್‌ಗಳು(Beaches), ಪಾರ್ಕ್‌ಗಳು, ಬೋಟಿಂಗ್(Boating) ಮುಂತಾದವುಗಳು ಸೇರಿ ಹಲವು ಪ್ರವಾಸಿಗರ(Tourist) ಆಕರ್ಷಣಾ ಕೇಂದ್ರಗಳಿವೆ. ಆದರೆ, ಸರಿಯಾದ ನಿರ್ವಹಣೆಯಿಲ್ಲದೇ ಕೆಲವು ಪ್ರವಾಸಿ ಕೇಂದ್ರಗಳು(Tourist Spot) ತಮ್ಮ ಆಕರ್ಷಣೆಯನ್ನೇ ಕಳೆದುಕೊಳ್ಳುತ್ತಿದೆ. ಇವುಗಳ‌ ಖಾಸಗೀಕರಣ(Privatization) ನಡೆದಲ್ಲಿ ಅಭಿವೃದ್ಧಿಯೊಂದಿಗೆ ಸರಕಾರಕ್ಕೆ ಉತ್ತಮ ಆದಾಯ ದೊರಕುತ್ತದೆ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಾಕಷ್ಟು ಬಾರಿ ಅಭಿಪ್ರಾಯ ಮಂಡಿಸಿದರೂ ಕೆಲವು ಜನರು ಮಾತ್ರ ಪ್ರತೀ ಬಾರಿ ವಿರೋಧ ವ್ಯಕ್ತಪಡಿಸಿತ್ತಲೇ ಇದ್ದಾರೆ.  

Uttara Kannada| ರಾಜ್ಯದ ದ್ವೀಪಗಳು ಗೋವಾ ಹೆಸರಿನಲ್ಲಿ..!

ಈ ಕಾರಣದಿಂದಲೇ ಸಚಿವ ಶಿವರಾಮ ಹೆಬ್ಬಾರ್ ಅವರು , ಪಕ್ಕದ ಗೋವಾದಲ್ಲಿ(Goa) ಪ್ರವಾಸೋದ್ಯಮ ಸಾಕಷ್ಟು ಬೆಳೆಯುತ್ತಿದೆ. ಯಾವುದೂ ಸರಕಾರದಿಂದ(Government) ನಡೆಯುತ್ತಿಲ್ಲ. ಗೋವಾದಲ್ಲಿ ಶೇ. 100ಕ್ಕೆ 90ರಷ್ಟು ಖಾಸಗೀಕರಣದಿಂದ‌ಲೇ ಪ್ರವಾಸೋದ್ಯಮ ಚಟುವಟಿಕೆಗಳು ನಡೆಯುತ್ತಿದ್ದು, 450ಕೋಟಿ ರೂ.ನಷ್ಟು ಆದಾಯ(Revenue) ಸರಕಾರಕ್ಕೆ ಪ್ರವಾಸೋದ್ಯಮದಿಂದಲೇ ದೊರೆಯುತ್ತಿದೆ. ಉತ್ತರಕನ್ನಡ ಜಿಲ್ಲೆಯಲ್ಲೂ ಪ್ರವಾಸೋದ್ಯಮವನ್ನು ಖಾಸಗಿ ಸಹಭಾಗಿತ್ವದಲ್ಲಿ ಜನರಿಗೆ ಉಪಯೋಗವಾಗೋ ರೀತಿಯಲ್ಲಿ ಮಾಡಬೇಕಾದ ಅವಶ್ಯಕತೆಯಿದೆ ಎಂದು ಉತ್ತರಕನ್ನಡ ಜಿಲ್ಲೆ ಉಸ್ತುವಾರಿ ಸಚಿವ ಶಿವರಾಮ‌ ಹೆಬ್ಬಾರ್(Shivaram Hebbar) ತಿಳಿಸಿದ್ದಾರೆ. 

ಅಂದಹಾಗೆ, ಗೋವಾದಲ್ಲಿ ಪ್ರವಾಸೋದ್ಯಮ ಸಾಕಷ್ಟು ಎತ್ತರಕ್ಕೆ ಬೆಳೆದಿದ್ದು, ದೇಶ- ವಿದೇಶದ ಜನರು ಕೂಡಾ ಗೋವಾಕ್ಕೆ ಭೇಟಿ ನೀಡಿ ಸಂತೋಷವಾಗಿ ಸಮಯ ಕಳೆದು ತೆರಳುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಜನರು ಕೂಡಾ ಇಂತಹ ಸ್ಥಿತಿಗತಿಗಳಿಗೆ ಒಪ್ಪಿಕೊಂಡು ಪ್ರವಾಸೋದ್ಯಮ ಬೆಳೆಸಲು ಕೈಜೋಡಿಸಬೇಕು. ಗೋವಾದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ನೋಡಲು ಕರ್ನಾಟಕದಿಂದ(Karnataka) ಗೋವಾಕ್ಕೆ ತೆರಳುತ್ತಾರೆ. ಅದನ್ನೇ ಉತ್ತರಕನ್ನಡ ಜಿಲ್ಲೆಯಲ್ಲಿ ಮಾಡಿದಲ್ಲಿ ಜನರಿಗೆ ಬೇರೊಂದು ಯೋಚನೆ ಬರುತ್ತದೆ. ಗೋವಾಕ್ಕೆ ಹೋಗುವುದನ್ನು ಒಪ್ಪಿಕೊಂಡು ಸಂತೋಷ ಪಟ್ಟುಕೊಂಡು ಬರ್ತಾರೆ.  ಬೇರೆ ಜಿಲ್ಲೆಯ ದುಡ್ಡು ನಮ್ಮ ಜಿಲ್ಲೆಗೆ ಬಂದು ಬೀಳುತ್ತದೆ, ನಮ್ಮ ಜಿಲ್ಲೆಯ ಸಾವಿರಾರು ಮಕ್ಕಳಿಗೆ ಉದ್ಯೋಗವಕಾಶ(Jobs) ದೊರೆಯುತ್ತದೆ ಎಂದು ಯೋಚನೆ ಮಾಡ್ತಿಲ್ಲ. ಜಿಲ್ಲೆಯ ಜನರು ಗೋವಾಕ್ಕೆ ತೆರಳಿ ಎಲ್ಲವನ್ನೂ ಅನುಭವಿಸುತ್ತಾರೆ‌. ಆದರೆ, ನಮ್ಮ ಜಿಲ್ಲೆಯಲ್ಲಿ ಮಾತ್ರ ಬೇಡವೆಂಬ ಮಡಿವಂತಿಕೆ ತೋರಿಸ್ತಾರೆ. ಈ ಕಾರಣದಿಂದ ಜಿಲ್ಲೆಯ ಜನರ ಮನಸ್ಥಿತಿ ಬದಲಾವಣೆ ಆಗ್ಬೇಕಿದೆ ಎಂದು ಸಚಿವ ಹೆಬ್ಬಾರ್  ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ ಪ್ರವಾಸೋದ್ಯಮ ಕೇಂದ್ರವಾಗಿರುವ ಉತ್ತರಕನ್ನಡ ಜಿಲ್ಲೆಯನ್ನು ಗೋವಾ ಮಾದರಿಯಲ್ಲಿ ಬೆಳೆಸಲು ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಸಿದರೂ, ಕೆಲವು ಜನರಿಂದ ಮಾತ್ರ ಇವುಗಳಿಗೆ ಅಡ್ಡಿಯಾಗುತ್ತಿದೆ. ಈ ಕಾರಣದಿಂದ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಠಿಯಿಂದಾದ್ರೂ ಜನರು ತಮ್ಮ ಮನಸ್ಥಿತಿ ಬದಲಾಯಿಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಕೈಜೋಡಿಸಬೇಕಿದೆ.
 

Follow Us:
Download App:
  • android
  • ios