Asianet Suvarna News Asianet Suvarna News

ಹಾಸನ: ಮಕ್ಕಳ ಆಟದ ಮೈದಾನದಲ್ಲಿ ಮದ್ವೆ ಕಾರುಗಳದ್ದೇ ದರ್ಬಾರು..!

ಹಾಸನದಲ್ಲಿ ಮಕ್ಕಳಿಗೆ ಆಡೋಕೆ ಅಂತ ಸರ್ಕಾರ ಪ್ಲೇಗ್ರೌಂಡ್ ಕೊಟ್ರೆ ಜನ ಖಾಸಗಿ ಮದುವೆ ವಾಹನಗಳೆಲ್ಲ ಬಂದು ಬೇಕಾಬಿಟ್ಟಿ ಪಾರ್ಕಿಂಗ್ ಮಾಡ್ತಿದ್ದಾರೆ. ಮಳೆಗಾಲವಾಗಿರುವ ಕಾರಣ ವಾಹನಗಳು ಓಡಾಡಿ ಶಾಲಾ ಆವರಣವೇ ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಜನರೇನೋ ಆರಾಮವಾಗಿ ವಾಹನಗಳಲ್ಲಿ ಹತ್ತಿ ಹೋಗ್ತಾರೆ, ಆದ್ರೆ ಮಕ್ಕಳ ಪಾಡು ಹೇಳತೀರದು.

Private vehicles parking in Govt school play ground
Author
Bangalore, First Published Sep 13, 2019, 2:47 PM IST

ಹಾಸನ(ಸೆ.13): ಸರ್ಕಾರಿ ಶಾಲಾ ಆವರಣದಲ್ಲಿ ಮದುವೆ, ಇನ್ನಿತರ ಸಮಾರಂಭಗಳ ವಾಹನ ನಿಲುಗಡೆ ಮಾಡುತ್ತಿದ್ದು, ಮೈದಾನ ಕೆಸರುಗದ್ದೆಯಾಗಿ ಬದಲಾಗಿದೆ.

ಸಕಲೇಶಪುರ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ನಡೆಯುವ ಮದುವೆ ಮತ್ತಿತರ ಶುಭ ಕಾರ್ಯಗಳಿಗೆ ಬರುವವರು ತಮ್ಮ ವಾಹನಗಳನ್ನು, ಕಲ್ಯಾಣ ಮಂಟಪ ಮುಂಭಾಗದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ನಿಲುಗಡೆ ಮಾಡುತ್ತಿದ್ದಾರೆ. ಇದರಿಂದ ಒಂದೆಡೆ ಮಕ್ಕಳಿಗೆ ತೊಂದರೆಯಾಗುತ್ತಿದ್ದರೆ, ಮತ್ತೊಂದೆಡೆ ಮಳೆಗಾಲ ಆಗಿರುವ ಕಾರಣ ಶಾಲಾ ಆವರಣ ಕೆಸರು ಗದ್ದೆಯಾಗಿ ಮಾರ್ಪಾಟ್ಟಿದೆ. ಇದರಿಂದ ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದೆ.

ಇರೋ ಒಂದು ಮೈದಾನವೂ ಮಕ್ಕಳ ಆಟಕ್ಕೆ ಲಭ್ಯವಿಲ್ಲ:

ಗುರವೇಗೌಡ ಕಲ್ಯಾಣ ಮಂಟಪದ ಮುಂಭಾಗದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಲೂಕಿನ ಪುರಾತನ ಶಾಲೆಗಳಲ್ಲಿ ಒಂದಾಗಿದೆ. ಶಾಲೆಗೆ ಹೊಂದಿಕೊಂಡಂತೆ ಮೈದಾನವಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಸುಭಾಷ್‌ ಮೈದಾನ ಬಿಟ್ಟರೆ ಆಟೋಟಗಳನ್ನು ನಡೆಸಲು ಇರುವುದು ಇದೊಂದೇ ಸ್ಥಳವಾಗಿದೆ. ಆದರೆ ಇದೀಗ ಮೈದಾನದಲ್ಲಿ ಕಲ್ಯಾಣ ಮಂಟಪಕ್ಕೆ ಬರುವವರು ತಮ್ಮ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದು, ಆಟದ ಮೈದಾನದವೆಲ್ಲಾ ಕೆಸರುಮಯವಾಗಿದೆ. ಇದರಿಂದ ಆಟವಾಡಲು ಮಕ್ಕಳಿಗೆ ಕಷ್ಟವಾಗುತ್ತಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಅಲ್ಲದೇ ಇದೇ ಮೈದಾನದಲ್ಲಿ ಹಲವು ಸಾರ್ವಜನಿಕ ಕಾರ್ಯಕ್ರಮಗಳು ಸಹ ನಡೆಯುತ್ತವೆ.

'ಜಿಟಿಡಿ ಬಿಜೆಪಿಗೆ ಅಸ್ಪೃಶ್ಯರಲ್ಲ: BJPಗೆ ಬಂದ್ರೆ ಒಳ್ಳೇದು'..!

ಶಾಲಾ ಮೈದಾನದಲ್ಲಿ ವಾಹನಗಳ ನಿಲುಗಡೆ ಮಾಡಬೇಡಿ ಎಂದು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇತ್ತ ಗಮನವರಿಸಿ ಇಲ್ಲಿ ವಾಹನಗಳನ್ನು ನಿಲುಗಡೆ ನಿಷೇಧಿಸಲು ಕ್ರಮಕೈಗೊಳ್ಳಬೇಕಾಗಿದೆ ಎಂದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮನವಿ ಮಾಡಿದ್ದಾರೆ.

ಅಧಿಕಾರಿಗಳು ಗಮನ ಹರಿಸಿ:

ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವಾಹನಗಳ ನಿಲುಗಡೆ ಮಾಡುವುದರಿಂದ ಮೈದಾನ ಕೆಸರುಮಯವಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಆಟವಾಡಲು ಸಮಸ್ಯೆ ಆಗುತ್ತಿದೆ. ವಾಹನ ನಿಲ್ಲಿಸದಂತೆ ಹಲವು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟಅಧಿಕಾರಿಗಳು ಕೂಡಲೇ ಈ ಬಗ್ಗೆ ಗಮನ ಹರಿಸಿ ವಾಹನ ನಿಲುಗಡೆ ನಿಷೇಧಿಸಬೇಕು ಎಂದು ಎಸ್‌.ಎಂ. ಮಂಜುನಾಥ್‌ ಹೇಳಿದ್ದಾರೆ.

'ಯಡಿಯೂರಪ್ಪ ಅವರಂಥವರನ್ನು ಬಹಳಷ್ಟು ಕಂಡಿದ್ದೇನೆ, ಇದು ಬಹಳ ಕಾಲ ನಡೆಯಲ್ಲ'

Follow Us:
Download App:
  • android
  • ios