ರಾಯಚೂರು(ಮೇ 23): ರಾಜ್ಯಾದ್ಯಂತ ಸರ್ಕಾರಿ ಸಾರಿಗೆ ಬಸ್‌ಗಳ ಸಂಚಾರ ಬೆನ್ನಲ್ಲೆ ಖಾಸಗಿ ಬಸ್‌ಗಳ ಸಂಚಾರ ಇನ್ನೆರಡು ದಿನಗಳಲ್ಲಿ ಆರಂಭವಾಗಲಿದ್ದು, ಪ್ರಯಾಣದ ದರವನ್ನು ಶೇ.15ರಷ್ಟುಹೆಚ್ಚಳ ಮಾಡಲು ಅನುಮತಿ ನೀಡಲಾಗಿದೆ ಎಂದು ಸಾರಿಗೆ ಸಚಿವರೂ ಆದ ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು.

ನಗರದಲ್ಲಿ ಮಾತನಾಡಿ, ಖಾಸಗಿ ಬಸ್‌ಗಳ ಮಾಲಿಕರು ಬಸ್‌ ಸಂಚಾರಕ್ಕೆ ಅನುಮತಿ ಕೇಳಿದ್ದು, ಎರಡರಿಂದ ಮೂರು ದಿನಗಳಲ್ಲಿ ಸಂಚಾರ ಆರಂಭವಾಗಲಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು, ಪ್ರತಿ ಬಸ್‌ನಲ್ಲಿ 30 ಜನ ಪ್ರಯಾಣಿಕರ ಸಂಚಾರಕ್ಕೆ ಮಾತ್ರ ಅನುಮತಿ ನೀಡಲು ಸಿದ್ಧತೆ ನಡೆದಿದೆ. ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದರಿಂದ ನಷ್ಟವಾಗುತ್ತದೆ ಎಂದು ಖಾಸಗಿ ಮಾಲಿಕರು ಮನವಿ ಮಾಡಿದ್ದಕ್ಕೆ ಪ್ರಯಾಣದ ದರವನ್ನು ಹೆಚ್ಚಿಸಲಾಗಿದೆ.

2000 ಇಸವಿಯಲ್ಲೇ ಕನಿಷ್ಠಕ್ಕೆ ಇಳಿದ ರೆಪೋ ದರ: ಗೃಹ, ವಾಹನ ಸೇರಿ ಹಲವು ಸಾಲಗಳ ಬಡ್ಡಿ ದರ ಇಳಿಕೆ

ಶೀಘ್ರವೇ ರಾತ್ರಿ ವೇಳೆ ಬಸ್‌ ಸಂಚಾರ:

ಬಳ್ಳಾರಿಯ ಹೊಸಪೇಟೆಯಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಕೆಲ ಪ್ರದೇಶದಲ್ಲಿ ರಾತ್ರಿ ವೇಳೆಯಲ್ಲಿ ಬಸ್‌ ಸಂಚಾರ ಆರಂಭಗೊಂಡಿದ್ದು, ರಾಜ್ಯಾದ್ಯಂತ ಪೂರ್ಣ ಪ್ರಮಾಣದಲ್ಲಿ ರಾತ್ರಿ ವೇಳೆಯಲ್ಲೂ ಬಸ್‌ ಸಂಚಾರವನ್ನು ಅತೀ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದರು.