ಶಿವಮೊಗ್ಗ(ಅ.24): ಶಿಕ್ಷಾ ಭಂದಿ ಕೈದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕೇಂದ್ರ ಕಾರಾಗೃಹದಲ್ಲಿ ನಿನ್ನೆ(ಶುಕ್ರವಾರ) ನಡೆದಿದೆ. ಮಂಜುನಾಥ್(33) ಎಂಬಾತನೇ ಆತ್ಮಹತ್ಯೆಗೆ ಶರಣಾದ ಕೈದಿಯಾಗಿದ್ದಾನೆ. ಮೃತ ಕೈದಿ ಮಂಜು ಜಿಲ್ಲೆಯ ಸಾಗರ ಎಸ್.ಎಸ್ ಕಾಲೊನಿಯ ನಿವಾಸಿಯಾಗಿದ್ದಾನೆ. 

ಶುಕ್ರವಾರ ಸಂಜೆ ಜೈಲಿನ ತುಂಗಾ ವಿಭಾಗದ ರೂಂ ನಂಬರ್ 35 ರ ಶೌಚಾಲಯದಲ್ಲಿ ಟವಲ್‌ನಿಂದ ಮಂಜು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದನು. ತಕ್ಷಣ ಜೈಲು ಸಿಬ್ಬಂದಿಗಳು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಂಜು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. 

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದ ಆನೆ ರಂಗ ಇನ್ನಿಲ್ಲ

ಇಂದು ನ್ಯಾಯಾಧೀಶರ ಸಮ್ಮುಖದಲ್ಲಿ ಪಂಚೆನಾಮೆ ಶವಪರೀಕ್ಷೆ ನಡೆಸಲಾಗಿದೆ. ಮರಣೋತ್ತರದ ವಿಡಿಯೋ ಸಂಪೂರ್ಣ ಚಿತ್ರೀಕರಣವಾಗಿದೆ. ಕೈದಿಯ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.