ಅತ್ಯಂತ ಆಕರ್ಷಣೆಯ ಆನೆ ರಂಗ 35 ಕಾಡಾನೆ ದಾಳಿಗೆ ಬಲಿ| ಶಿವಮೊಗ್ಗ ಜಿಲ್ಲೆಯಲ್ಲಿರುವ ಸಕ್ರೆಬೈಲು ಆನೆ ಬಿಡಾರ|  ಕಳೆದ ರಾತ್ರಿ ರಂಗನ ಮೇಲೆ ಏಕಾಏಕಿ ದಾಳಿ ನಡೆಸಿದ ಕಾಡಾನೆ| ಕಾಡಾನೆಯತ ದಂತ ತಿವಿತಕ್ಕೆ ಬಲಿಯಾದ ರಂಗ|  

ಶಿವಮೊಗ್ಗ(ಅ.24): ಜಿಲ್ಲೆಯ ಸಕ್ರೆಬೈಲು ಆನೆ ಬಿಡಾರದ ಆನೆ ರಂಗ(35) ಕಾಡಾನೆ ದಾಳಿಗೆ ಬಲಿಯಾದ ಘಟನೆ ನಿನ್ನೆ(ಶುಕ್ರವಾರ) ರಾತ್ರಿ ನಡೆದಿದೆ. ತನ್ನ ಮೈಕಟ್ಟಿನಿಂದಲೇ ಎಲ್ಲರನ್ನು ಆಕರ್ಷಿಸಿದ್ದ ರಂಗನ ಸಾವಿಗೆ ಪ್ರಾಣಿ ಪ್ರಿಯರು ಕಂಬನಿ ಮಿಡಿದಿದ್ದಾರೆ. 

ಕಳೆದ ರಾತ್ರಿ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದ ಸಂದರ್ಭದಲ್ಲಿ ಸರಪಳಿಯಲ್ಲಿ ಭಂದಿಯಾಗಿದ್ದ ರಂಗ ಅಸಹಾಯಕನಾಗಿ ದಂತ ತಿವಿತಕ್ಕೆ ಬಲಿಯಾಗಿದ್ದಾನೆ ಎಂದು ತಿಳಿದು ಬಂದಿದೆ. 

ಸಿಗಂದೂರು ವಿವಾದಕ್ಕೆ ಟ್ವಿಸ್ಟ್, ಜಿಲ್ಲಾಡಳಿತ ನೇತೃತ್ವದಲ್ಲಿ ಸಮಿತಿ

ಸಕ್ರೆಬೈಲು ಕ್ಯಾಂಪ್‌ನಲ್ಲಿಯೇ ಹುಟ್ಟಿದ ರಂಗ ಗೀತಾ ಆನೆಯ ಮರಿಯಾಗಿತ್ತು. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿ ಮತ್ತು ವೈದ್ಯರ ತಂಡ ದೌಡಾಯಿಸಿದೆ ಎಂದು ತಿಳಿದು ಬಂದಿದೆ.