ದಲಿತರ ಸ್ಮಶಾನ, ನಿವೇಶನ ಸಮಸ್ಯೆ ಪರಿಹಾರಕ್ಕೆ ಆದ್ಯತೆ: ಶಾಸಕ ಸಿ.ಪಿ.ಯೋಗೇಶ್ವರ್

ತಾಲೂಕಿನ ದಲಿತ ಸಮುದಾಯ ಹತ್ತಾರು ಜ್ವಲಂತ ಸಮಸ್ಯೆಗಳಲ್ಲಿ ಸ್ಮಶಾನ ಹಾಗೂ ನಿವೇಶನ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಲಾಗುವುದು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಭರವಸೆ ನೀಡಿದರು. 

Priority given to resolving Dalit cemetery and site issues Says MLA CP Yogeshwar gvd

ಚನ್ನಪಟ್ಟಣ (ಡಿ.22): ತಾಲೂಕಿನ ದಲಿತ ಸಮುದಾಯ ಹತ್ತಾರು ಜ್ವಲಂತ ಸಮಸ್ಯೆಗಳಲ್ಲಿ ಸ್ಮಶಾನ ಹಾಗೂ ನಿವೇಶನ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಲಾಗುವುದು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಭರವಸೆ ನೀಡಿದರು. ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ, ಪಂಗಡಗಳ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನ ದಲಿತ ಸಮುದಾಯದ ಸಮಸ್ಯೆಗಳನ್ನು ಪಟ್ಟಿ ಮಾಡಿ ಹಂತ ಹಂತವಾಗಿ ಪರಿಹರಿಸೋಣ. ತಾಲೂಕಿನಲ್ಲಿ ಸ್ಮಶಾನ ಜಾಗ, ಸ್ಮಶಾನ ಒತ್ತುವರಿ, ನಿವೇಶನ ಸಮಸ್ಯೆ, ಮೂಲ ಸೌಕರ್ಯಗಳ ಸಮಸ್ಯೆ ಹೀಗೆ ಅನೇಕ ಸಮಸ್ಯೆಗಳಿಗೆ ಮುಕ್ತಿ ಕೊಡೋಣ ಎಂದರು.

ಮೂರು ತಿಂಗಳಿಗೊಮ್ಮೆ ಸಭೆ: ಪರಿಶಿಷ್ಟ ಜಾತಿ, ಪಂಗಡಗಳ ಕುಂದುಕೊರತೆಗಳು ಒಂದೇ ಸಭೆಯಲ್ಲೇ ಪರಿಹಾರವಾಗಲ್ಲ. ಇದಕ್ಕೆ ಸಾಕಷ್ಟು ಕಾಲಾವಕಾಶ ಬೇಕು. ನಿಮ್ಮ ಸಮಸ್ಯೆಗಳನ್ನು ಪಟ್ಟಿ ಮಾಡಿ ತಿಳಿಸಿ, ಅದನ್ನು ಪರಿಹರಿಸಲು ಅಧಿಕಾರಿಗಳಿಗೆ ಕಾಲಾವಕಾಶ ನೀಡೋಣ. ಮೂರು ತಿಂಗಳಿಗೊಮ್ಮೆ ಕುಂದುಕೊರತೆ ಸಭೆ ನಡೆಸಿ ಪ್ರಗತಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಗೃಹ ಆರೋಗ್ಯ ಯೋಜನೆ ಫೆಬ್ರವರಿಯಲ್ಲಿ ರಾಜ್ಯವ್ಯಾಪಿ ವಿಸ್ತರಣೆ: ಸಚಿವ ದಿನೇಶ್ ಗುಂಡೂರಾವ್

ದಲಿತ ಮುಖಂಡರ ಸಮಿತಿ: ದಲಿತ ಸಮುದಾಯದ ಸಮಸ್ಯೆ ಪರಿಹರಿಸಲು ಅಧಿಕಾರಿಗಳನ್ನು ನಂಬಿ ಕುಳಿತರೆ ಆಗುವುದಿಲ್ಲ. ಹಾಗಾಗಿ ನಿಮ್ಮಲ್ಲೇ ಹತ್ತು ಮುಖಂಡರ ಸಮಿತಿ ರಚಿಸಿ, ನಾನು ಸಹ ನಿಮ್ಮೊಂದಿಗಿರುವೆ. ಪಟ್ಟಿ ಮಾಡಿಕೊಂಡು, ಇಲಾಖೆಯ ಅಧಿಕಾರಿಗಳು, ಸಚಿವರನ್ನು ನಾವೆಲ್ಲ ಭೇಟಿ ಮಾಡಿ ಗಮನ ಸೆಳೆಯುವ ಕೆಲಸ ಮಾಡೋಣ. ಒಂದಲ್ಲ ನಾಲ್ಕು ಬಾರಿ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸೋಣ ಎಂದರು. ಸಭೆಯಲ್ಲಿ ತಹಸೀಲ್ದಾರ್ ನರಸಿಂಹಮೂರ್ತಿ, ಇಒ ಸಂದೀಪ್, ವೃತ್ತ ನಿರೀಕ್ಷಕರಾದ ರವಿಕಿರಣ್, ಕೃಷ್ಣ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸರೋಜಮ್ಮ ಇತರರಿದ್ದರು.

ದಲಿತ ಮುಖಂಡರಿಂದ ಸಮಸ್ಯೆಗಳ ಸುರಿಮಳೆ: ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡ ಪಟ್ಲು ಗೋವಿಂದರಾಜು ಮಾತನಾಡಿ, ತಾಲೂಕಿನ ೧೧೨ ರೆವಿನ್ಯು ಗ್ರಾಮಗಳಲ್ಲಿ ೪೩ ಗ್ರಾಮಗಳಲ್ಲಿ ಸ್ಮಶಾನ ಸಮಸ್ಯೆ ಇದೆ. ೧೩ ಕಡೆ ಸ್ಮಶಾನಗಳು ಒತ್ತುವರಿಯಾಗಿದೆ. ಜಮೀನು ಇಲ್ಲದ ದಲಿತರಿಗೆ ಜಮೀನು ನೀಡಬೇಕು. ವಿಶೇಷ ಅನುದಾನ ತಂದು ಹೊಸ ಕಾರ್ಖಾನೆಗಳನ್ನು ನಿರ್ಮಿಸಿ ದಲಿತರಿಗೆ ಉದ್ಯೋಗ ಕೊಡಿಸಬೇಕು ಎಂದು ಆಗ್ರಹಿಸಿದರು. ಮಂಗಳವಾರಪೇಟೆ ಶೇಖರ್ ಮಾತನಾಡಿ, ತಾಲೂಕಿನ ಬಹುತೇಕ ಕಡೆ ದಲಿತ ಕುಟುಂಬಗಳು ಕಿಷ್ಕಿಂದೆಯಂತಹ ಜಾಗದಲ್ಲಿ ವಾಸಿಸುತ್ತಿವೆ. ಪ್ರತಿ ಗ್ರಾಮದಲ್ಲೂ 5 ಎಕರೆ ಜಾಗ ಗುರುತಿಸಿ ದಲಿತರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಬೇಕು. ಒಂದು ಕೈಗಾರಿಕೆ ಸ್ಥಾಪಿಸಿ ದಲಿತ ಯುವಕರಿಗೆ ಉದ್ಯೋಗ ಕಲ್ಪಿಸಬೇಕು. 

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿಲ್ಲ ಪಶು ವೈದ್ಯರು?: ಪ್ರಾಣಿಗಳು ಸತ್ತರೆ ಮರಣೋತ್ತರ ಪರೀಕ್ಷೆ ಹೇಗೆ?

5 ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಎಕರೆ ಜಾಗ ಕಾಯ್ದಿರಿಸಿ ಬುದ್ಧ ವಿಹಾರ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು. ದಲಿತ ಮುಖಂಡರಾದ ಮತ್ತೀಕೆರೆ ಹನುಮಂತಯ್ಯ, ಕೃಷ್ಣಪ್ಪ, ಅಕ್ಕೂರು ಶೇಖರ್, ಬಿ.ವಿ.ಎಸ್.ಕುಮಾರ್, ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ದಲಿತ ಕೇರಿಗಳಲ್ಲಿ ಮೂಲ ಸೌಕರ್ಯ, ಸ್ಮಶಾನಗಳ ಒತ್ತುವರಿ, ಅಂಬೇಡ್ಕರ್ ಭವನ ಪೂರ್ಣಗೊಳಿಸುವುದು, ಸಮುದಾಯ ಭವನಗಳ ನಿರ್ಮಾಣ, ಅಂಗಡಿಗಳಲ್ಲಿ ಮದ್ಯ ಮಾರಾಟ ಸಮಸ್ಯೆ ಕುರಿತು ಶಾಸಕರ ಗಮನ ಸೆಳೆದರು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಗೆ ನಿರೀಕ್ಷೆಗೂ ಮೀರಿ ಸಾರ್ವಜಿನಿಕರು ಆಗಮಿಸಿದ್ದರಿಂದ ಸ್ಥಳದ ಕೊರತೆ ಉಂಟಾಯಿತು. ಸಭಾಂಗಣದಲ್ಲಿ ಎಷ್ಟೋ ಜನ ನಿಂತುಕೊಂಡೇ ತಮ್ಮ ಸಮಸ್ಯೆ ತೋಡಿಕೊಂಡರು. ಸಾರ್ವಜನಿಕರು ಶಾಸಕರಿಗೆ ತಮ್ಮ ಸಮಸ್ಯೆಗಳ ಪರಿಹರಿಸುವಂತೆ ಅರ್ಜಿ ಸಲ್ಲಿಸಿದರು.

Latest Videos
Follow Us:
Download App:
  • android
  • ios