ನಮ್ಮ ಜೈನ ಸಮುದಾಯದ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸ ಮಾಡಬೇಕಿದೆ. ಆ ನಿಟ್ಟಿನಲ್ಲಿ ಬಡ ಜೈನ ಮಕ್ಕಳ ವಿದ್ಯಾರ್ಜನೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಮಿಡಿಗೇಶಿ ಶ್ರೀಸುಪಾರ್ಶ್ವನಾಥ ತೀರ್ಥಂಕರ ಜಿನ ಮಂದಿರ ಸಮಿತಿ ಅಧ್ಯಕ್ಷ ಎ.ಎನ್‌. ರಾಜೇಂದ್ರ ಪ್ರಸಾದ್‌ ತಿಳಿಸಿದರು.

ಮಧುಗಿರಿ : ನಮ್ಮ ಜೈನ ಸಮುದಾಯದ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸ ಮಾಡಬೇಕಿದೆ. ಆ ನಿಟ್ಟಿನಲ್ಲಿ ಬಡ ಜೈನ ಮಕ್ಕಳ ವಿದ್ಯಾರ್ಜನೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಮಿಡಿಗೇಶಿ ಶ್ರೀಸುಪಾರ್ಶ್ವನಾಥ ತೀರ್ಥಂಕರ ಜಿನ ಮಂದಿರ ಸಮಿತಿ ಅಧ್ಯಕ್ಷ ಎ.ಎನ್‌. ರಾಜೇಂದ್ರ ಪ್ರಸಾದ್‌ ತಿಳಿಸಿದರು.

ತಾಲೂಕಿನ ಮಿಡಿಗೇಶಿ ಗ್ರಾಮದಲ್ಲಿ ಈಚೆಗೆ ನಡೆದ ಶ್ರೀಸುಪಾರ್ಶ್ವನಾಥ ತೀರ್ಥಂಕರ ಹಾಗೂ ಬ್ರಹ್ಮಯಕ್ಷರ ಜಿನಮಂದಿರದ ವಾರ್ಷಿಕ ಪೂಜಾ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ಬಸದಿ ವ್ಯಾಪ್ತಿಯ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ನಂತರ ಜಿಲ್ಲಾ ಮಟ್ಟದಲ್ಲಿ ಬಡ ವಿದ್ಯಾರ್ಥಿಗಳನ್ನು ಗುರುತಿಸಲಾಗುವುದು. ಇದೇ ವೇಳೆ ಇಬ್ಬರು ವಿದ್ಯಾರ್ಥಿಗಳಾದ ಸುಜನಜೈನ ಮತ್ತು ಮುಕ್ತಜೈನಗೆ ಪ್ರೋತ್ಸಾಹ ಧನದ ಚೆಕ್ಕನ್ನು ವಿತರಿಸಿದರು. ಇದೇ ಸಂರ್ಭದಲ್ಲಿ ಬಸದಿ ಮಾಜಿ ಅಧ್ಯಕ್ಷ ಎನ್‌.ಬಿ.ವಿಮಲ್‌ ಕುಮಾರ್‌ ಸೇವೆಯನ್ನು ಪ್ರಶಂಸಿಸಿದರು.

ಉಪಾಧ್ಯಕ್ಷ ಬಿ. ಮಾಣಿಕ್ಯರಾಜು ಮಾತನಾಡಿ, ಪೋಷಕರು ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸಮಾಜದಲ್ಲಿ ತಮ್ಮ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ನೀಡುವ ಮುಖೇನ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಬೇಕು. ಹಾಸ್ಟಲ್‌ ಪ್ರಾರಂಭಿಸುವ ಕಾರ್ಯವಾಗಬೇಕು ಎಂದರು.

ವೇದಿಕೆಯಲ್ಲಿ ಉದಯಕುಮಾರ್‌, ಬ್ರಹ್ಮಪ್ಪ, ಕಮಲೇಶ್‌, ದೇವಕುಮಾರ್‌, ಪ್ರಸಾದ್‌ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶೈಲಜರಾಜೇಂದ್ರ ಪ್ರಸಾದ್‌, ಪದ್ಮಪ್ರಭುಕುಮಾರ್‌, ವೀರಜೀನೇಂದ್ರ,ಧರಣೇಂದ್ರ ಕುಮಾರ್‌, ದೀಪಕ್‌, ಪುರೋಹಿತರತ್ನ ಜ್ವಾಲೇಂದ್ರಕುಮಾರ್‌ ಸೇರಿದಂತೆ ಜೈ ಮಹಿಳಾ ಸಮಾಜದ ಪದಾಧಿಕಾರಿಗಳು ಭಾಗವಹಿಸಿದ್ದರು.