Asianet Suvarna News Asianet Suvarna News

Bagalkot Horticulture Fair: ಕೃಷಿ, ತೋಟಗಾರಿಕೆ ಬಲವರ್ಧನೆಗೆ ಆದ್ಯತೆ: ಸಚಿವ ನಿರಾಣಿ

*  ಬಾಗಲಕೋಟೆ ಜಿಲ್ಲೆಯಲ್ಲಿ ಸಿಮೆಂಟ್‌, ಸಕ್ಕರೆ ಉದ್ಯಮ ವಿಸ್ತಾರವಾಗಿದೆ 
*  ಫಲಶ್ರೇಷ್ಠ ರೈತ ಪ್ರಶಸ್ತಿ ಪ್ರದಾನ
*  ತೋಟಗಾರಿಕಾ ಕ್ಷೇತ್ರದಲ್ಲಿ ರಾಷ್ಟ್ರದಲ್ಲಿಯೇ 2ನೇ ಸ್ಥಾನದಲ್ಲಿರುವ ಕರ್ನಾಟಕ
 

Priority for Agricultural and Horticultural Consolidation Says Murugesh Nirani grg
Author
Bengaluru, First Published Dec 26, 2021, 12:22 PM IST
  • Facebook
  • Twitter
  • Whatsapp

ಬಾಗಲಕೋಟೆ(ಡಿ.26): ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರದ ಬಲವರ್ಧನೆ ಸದ್ಯದ ಅಗತ್ಯತೆ ಆಗಿದ್ದು, ನಾನು ಉಸ್ತುವಾರಿಯಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಆರಂಭಿಕ ಹಂತವಾಗಿ 1 ಸಾವಿರ ಎಕರೆ ಪ್ರದೇಶದಲ್ಲಿ ಇಸ್ರೇಲ್‌ ಮಾದರಿ ನೀರಾವರಿ ಮುಂದಿಟ್ಟುಕೊಂಡು ಕೃಷಿ ಚಟುವಟಿಕೆ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಸಚಿವ ಮುರುಗೇಶ ನಿರಾಣಿ(Murugesh Nirani) ತಿಳಿಸಿದ್ದಾರೆ.  ತೋಟಗಾರಿಕೆ ಮೇಳದಲ್ಲಿ(Horticulture Fair) ಶನಿವಾರ ಫಲಶ್ರೇಷ್ಠ ರೈತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೈತ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು, ಜಗತ್ತಿಗೆ ಮಾದರಿಯಾಗಿರುವ ಇಸ್ರೇಲ್‌ ತಂತ್ರಜ್ಞಾನ(Israel Technology) ಬಳಸಿ ಆರಂಭಿಕ ಹಂತದಲ್ಲಿ 1 ಸಾವಿರ ಎಕರೆ ಪ್ರದೇಶವನ್ನು ಕೃಷಿಗೆ(Agriculture) ಒಳಪಡಿಸಿ ನಂತರ 5 ಸಾವಿರ ಎಕರೆಗೆ ವಿಸ್ತರಿಸುವ ಯೋಚನೆ ಇದೆ ಎಂದರು.

ಬಾಗಲಕೋಟೆ(Bagalkot) ಜಿಲ್ಲೆಯಲ್ಲಿ ತೋಟಗಾರಿಕೆ ಹಾಗೂ ಕೃಷಿ ಕ್ಷೇತ್ರ ಬಹಳಷ್ಟು ವಿಸ್ತಾರವಾಗುವ ಜೊತೆಗೆ ಕೃಷಿ ಸಂಬಂ​ಧಿಸಿದ ಕೈಗಾರಿಕೆಗಳು ಸಹ ಸ್ಥಾಪನೆಯಾಗುತ್ತಿವೆ. ಸಿಮೆಂಟ್‌, ಸಕ್ಕರೆ ಉದ್ಯಮ ವಿಸ್ತಾರವಾಗಿದೆ ಇವುಗಳನ್ನು ಗಮನಿಸಿ ಬಾಗಲಕೋಟೆ ಸಮೀಪ 500 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣ(Airport) ಸ್ಥಾಪನೆಗೆ ಸರ್ಕಾರ ಮುಂದಾಗಲಿದೆ. ಕೇಂದ್ರ ಸರ್ಕಾರದ(Central Government) ಉಡಾನ ಯೋಜನೆಯಲ್ಲಿ ನಿರ್ಮಾಣಗೊಳ್ಳುವ ವಿಮಾನ ನಿಲ್ದಾಣದಲ್ಲಿ ರೈತನು ಸಹ ಪ್ರಯಾಣ ಮಾಡಬಹುದಾಗಿದೆ ಎಂದರು.

Bagalkote: ತರಹೇವಾರಿ ಬೆಲ್ಲಕ್ಕೆ ಜನ ಫಿದಾ, ಶುಗರ್​ ಫ್ರೀ ಬೆಲ್ಲದ ಪದಾರ್ಥಗಳಿಗೆ ಭಾರೀ ಡಿಮ್ಯಾಂಡ್

ಬಾಗಲಕೋಟೆಯ ತೋಟಗಾರಿಕೆ ವಿವಿ(Bagalkot University of Horticultural Sciences)  ಇನ್ನಷ್ಟು ಸಂಶೋಧನೆ ಹಾಗೂ ಆಧುನಿಕತೆಯನ್ನು ಮೈಗೂಡಿಸಿಕೊಳ್ಳುವ ಅಗತ್ಯತೆ ಇದೆ. ಬರುವ ದಿನಗಳಲ್ಲಿ ವಿವಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕುಲಪತಿಗಳು ಮಾರ್ಗದರ್ಶನ ಮಾಡಿದರೆ ಸರ್ಕಾರವು ಸಹ ನೆರವಿಗೆ ಬರಲಿದೆ ಎಂದರು.

ಕೃಷಿ ಸಚಿವ ಬಿ.ಸಿ.ಪಾಟೀಲ:

ಆನ್‌ಲೈನ್‌ ಮೂಲಕ ಫಲಶ್ರೇಷ್ಠ ರೈತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ(BC Patil) ಮಾತನಾಡಿ, ತೋಟಗಾರಿಕಾ ಕ್ಷೇತ್ರದಲ್ಲಿ ರಾಜ್ಯವು(Karnataka) ರಾಷ್ಟ್ರದಲ್ಲಿಯೇ(India) 2ನೇ ಸ್ಥಾನದಲ್ಲಿದ್ದು ತೋಟಗಾರಿಕೆ ಅಭಿವೃದ್ಧಿಗೆ ಪೂರಕವಾದ ಉತ್ತಮ ಮಣ್ಣು ಮತ್ತು ಹವಾಗುಣ ಹೊಂದಿರುವುದರಿಂದ ಈ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಬಹುದಾಗಿದೆ ಎಂದರು.

ರಾಜ್ಯದ 23 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಬಾಗಲಕೋಟೆ ತೋಟಗಾರಿಕೆ ವಿವಿ ಮಹಿಳಾ ಸಬಲೀಕರಣಕ್ಕಾಗಿ ತೋಟಗಾರಿಕೆ ಮೇಳ ಎಂಬ ಆಶಯದೊಂದಿಗೆ ನಡೆಯುತ್ತಿರುವುದು ಸಂತಸ ತಂದಿದೆ. 2021ನೇ ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಹಣ್ಣು ಮತ್ತು ತರಕಾರಿಗಳ ವರ್ಷವೆಂದು ವಿಶ್ವಸಂಸ್ಥೆ ಘೋಷಿಸಿರುವುದು ಸಹ ಹೆಮ್ಮೆ ತಂದಿದೆ ಎಂದರು. ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ವಿವಿ ಕುಲಪತಿ ಇಂದಿರೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

30 ವಷ೯ಗಳ ಬಳಿಕ ಬಾಗಲಕೋಟೆಯಲ್ಲಿ ಗ್ರಾಮದೇವಿ ಜಾತ್ರೆ!

ಫಲಶ್ರೇಷ್ಠ ರೈತ ಪ್ರಶಸ್ತಿ ಪ್ರದಾನ

ಮೊದಲ ದಿನವಾದ ಶನಿವಾರ ತೋಟಗಾರಿಕೆ ಮೇಳದಲ್ಲಿ 8 ರೈತ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಬೀದರ ಜಿಲ್ಲೆಯ ಕಮಠಾಣ ಗ್ರಾಮದ ನಾಗಭೂಷಣ ಕಮಠಾಣ, ಕಲಬುರ್ಗಿಯ ಸುಜಾತಾ ಪಾಟೀಲ, ಯಾದಗಿರಿಯ ಸತ್ಯನಾರಾಯಣ ಬಂಡಿ, ರಾಯಚೂರಿನ ಬಸವರಾಜ ಮಾಲಿಪಾಟೀಲ, ಬಳ್ಳಾರಿಯ ಶಾಂತಮ್ಮ, ವಿಜಯನಗರದ ಕುಮಾರಿ ದೀಪ್ತಿ ಬಾಲಕೋಟೆಶ್ವರಾವ್‌, ಕೊಪ್ಪಳದ ಬಸಯ್ಯ ಹಿರೇಮಠ, ವಿಜಯಪುರದ ಲಕ್ಷ್ಮೇ ಬಸಗೊಂಡ ಅವರನ್ನು ಸಚಿವರು ಫಲಶ್ರೇಷ್ಠ ರೈತ ಪ್ರಶಸ್ತಿ ಪ್ರದಾನ ಮಾಡಿದರು.

2008ರಲ್ಲಿ ಅಸ್ತಿತ್ವಕ್ಕೆ ಬಂದ ಬಾಗಲಕೋಟೆಯ ತೋಟಗಾರಿಕೆ ವಿವಿಯನ್ನು ಅಂದಿನ ಸಿಎಂ ಬಿಎಸ್‌ವೈ(BS Yediyurappa) ನೀಡಿದರು. ಬೀಳಗಿ ತಾಲೂಕಿನ ಮನ್ನಿಕೇರಿಯಲ್ಲಿ ಹಾಗೂ ನನ್ನ ಕ್ಷೇತ್ರ ವ್ಯಾಪ್ತಿಯ ನರೆನೂರ ಬಳಿ 5000 ಎಕರೆ ಪ್ರದೇಶವನ್ನು ಕೈಗಾರಿಕೆ ಸ್ಥಾಪನೆಗಾಗಿ ಗುರುತಿಸಲಾಗಿತ್ತು. ಅಲ್ಲಿ ತೋಟಗಾರಿಕೆ ವಿವಿಯ ಸ್ಥಾಪನೆ ನನ್ನದಾಗಿತ್ತು. ಕಾರಣಾಂತರದಿಂದ ಅದು ಸಾಧ್ಯವಾಗಲಿಲ್ಲ. ಅಂದು ರಾಜಕೀಯ ಭಾಗವಹಿಸಿದ್ದರಿಂದ ಅದು ಸಾಧ್ಯವಾಗಲಿಲ್ಲ ಅಂತ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.  
 

Follow Us:
Download App:
  • android
  • ios