ಬೊಂಬೆ ಉದ್ಯಮದ ಬಗ್ಗೆ ಪ್ರಧಾನಿಗೆ ವಿಶೇಷ ಒಲವು: ಕೇಂದ್ರ ಸಚಿವ ಫಗ್ಗನ್‌ ಸಿಂಗ್‌

ಚನ್ನಪಟ್ಟಣದ ಬೊಂಬೆಗಳಿಗೆ ವಿಶೇಷ ಮಾನ್ಯತೆ ನೀಡಿ ಜಾಗತಿಕ ಮಟ್ಟದಲ್ಲಿ ವೇದಿಕೆ ಕಲ್ಪಿಸಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಉಕ್ಕು ಖಾತೆ ರಾಜ್ಯ ಸಚಿವ ಫಗ್ಗನ್‌ ಸಿಂಗ್‌ ಕುಲಸ್ತೆ ತಿಳಿಸಿದರು. 

Prime Minister has a special fondness for the puppet industry says union minister faggan singh kulaste gvd

ಚನ್ನಪಟ್ಟಣ (ಡಿ.31): ಚನ್ನಪಟ್ಟಣದ ಬೊಂಬೆಗಳಿಗೆ ವಿಶೇಷ ಮಾನ್ಯತೆ ನೀಡಿ ಜಾಗತಿಕ ಮಟ್ಟದಲ್ಲಿ ವೇದಿಕೆ ಕಲ್ಪಿಸಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಉಕ್ಕು ಖಾತೆ ರಾಜ್ಯ ಸಚಿವ ಫಗ್ಗನ್‌ ಸಿಂಗ್‌ ಕುಲಸ್ತೆ ತಿಳಿಸಿದರು. ತಾಲೂಕಿನ ಮುನಿಯಪ್ಪನದೊಡ್ಡಿ ಗ್ರಾಮದಲ್ಲಿ ಕರಕುಶಲ ವಸ್ತುಗಳ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಕುಶಲ ಕರ್ಮಿಗಳ ಜತೆ ಸಂವಾದ ನಡೆಸಿದ ಅವರು, ಚನ್ನಪಟ್ಟಣದ ಬೊಂಬೆ ಉದ್ಯಮ ಕುರಿತು ಪ್ರಧಾನಿ ಮೋದಿಗೆ ವಿಶೇಷ ಒಲವಿದ್ದು, ಬೊಂಬೆ ಉದ್ಯಮಕ್ಕೆ ಉತ್ತಮ ಮಾರುಕಟ್ಟೆಕಲ್ಪಿಸುವ ಆಸಕ್ತಿ ವಹಿಸಿದ್ದಾರೆ. 

ಕೇಂದ್ರ ಸರ್ಕಾರ ಸಹ ಈ ನಿಟ್ಟಿನಲ್ಲಿ ಯೋಜನೆ ಹಾಕಿಕೊಂಡಿದ್ದು, ಮುಂದಿನ ದಿನಗಳಲ್ಲಿ ಬೊಂಬೆ ಉದ್ಯಮಕ್ಕೆ ಚೈತನ್ಯ ನೀಡಲು ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. ಆತ್ಮನಿರ್ಭರ ಯೋಜನೆಯಡಿ ಚನ್ನಪಟ್ಟಣದ ಬೊಂಬೆಗಳಿಗೆ ಮಾರುಕಟ್ಟೆಕಲ್ಪಿಸುವ ಜತೆಗೆ ಜಾಗತಿಕ ಮಟ್ಟದ ಮಾರುಕಟ್ಟೆಕಲ್ಪಿಸುವುದು ಪ್ರಧಾನಿಯವರ ಆಶಯವಾಗಿದೆ. ಟಾಯ್‌್ಸ ಫೆಸ್ಟ್‌, ಆಟಿಕೆ ಕ್ಲಸ್ಟರ್‌, ಆತ್ಮನಿರ್ಭರ ಸೇರಿದಂತೆ ಹಲವಾರು ಕಾರ‍್ಯಕ್ರಮಗಳನ್ನು ರೂಪಿಸಿ ಬೊಂಬೆ ಉದ್ಯಮಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟುಯೋಜನೆಗಳನ್ನು ರೂಪಿಸುವ ಮೂಲಕ ಬೊಂಬೆ ಉದ್ಯಮಕ್ಕೆ ಉತ್ತಮ ಮಾರುಕಟ್ಟೆ ಕಲ್ಪಿಸಲಾಗುವುದು ಎಂದರು.

ಕಮಲ ಅರ​ಳಿ​ಸಲು ಬಿಜೆ​ಪಿ​ಯಿಂದ ಶ್ರೀರಾ​ಮನ ಜಪ: ಎಚ್‌ಡಿಕೆ, ಡಿಕೆ​ಶಿ ಕಟ್ಟಿಹಾಕುವ ಪ್ಲಾನ್‌

ಜಾಗತಿಕ ಮಾರುಕಟ್ಟೆ: ಚನ್ನಪಟ್ಟಣದ ಬೊಂಬೆಗಳು ಮತ್ತು ಆಟಿಕೆಗಳಿಗೆ ಉತ್ತಮ ಬೇಡಿಕೆ ಇದೆ. ಸ್ಥಳೀಯವಾಗಿ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲೂ ಚನ್ನಪಟ್ಟಣದ ಬೊಂಬೆಗಳಿಗೆ ಮಾರುಕಟ್ಟೆದೊರಕಿಸಬೇಕು ಎಂಬುದು ಪ್ರಧಾನಿ ಮೋದಿಯ ಕನಸಾಗಿದೆ. ಆ ನಿಟ್ಟನಲ್ಲಿ ಆಟಿಕೆ ತಯಾರಿಕಾ ಉದ್ಯಮದ ಬೆಳವಣಿಗೆಗೆ ಅಗತ್ಯ ತಾಂತ್ರಿಕತೆಯನ್ನು ಒದಗಿಸುವ ಜತೆಗೆ ಜಾಗತಿಕ ಮಾರುಕಟ್ಟೆಕಲ್ಪಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು. ನೈಸರ್ಗಿಕ ಬಣ್ಣಗಳನ್ನು ಬಳಸಿ ತಯಾರಿಸಲಾಗುವ ಚನ್ನಪಟ್ಟಣ ಬೊಂಬೆಗಳು ಸಾಕಷ್ಟುಜನಪ್ರಿಯವಾಗಿದೆ. ಬೊಂಬೆ ಉದ್ಯಮಕ್ಕೆ ಕಾಯಕಲ್ಪ ನೀಡಿದ್ದೇ ಆದಲ್ಲಿ ಅದರಿಂದ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುವ ಜತೆಗೆ, ನೂರಾರು ಸ್ವಯಂ ಉದ್ಯೋಗಗಳು ರಚನೆಯಾಗುತ್ತವೆ. ಆ ನಿಟ್ಟಿನಲ್ಲಿ ಈ ಉದ್ಯಮಕ್ಕೆ ಎಲ್ಲ ರೀತಿಯ ಸಹಕಾರ ನೀಡಲು ಕೇಂದ್ರ ಸರ್ಕಾರ ಸಿದ್ಧವಿದ್ದು, ಬೊಂಬೆ ಕ್ಲಸ್ಟರ್‌ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಬದುಕು ಕಟ್ಟಿಕೊಂಡ ಮಹಿಳೆಯರು: ಚನ್ನಪಟ್ಟಣದ ಬೊಂಬೆ ತಯಾರಿಕೆಯಿಂದ ಇಲ್ಲಿನ ನೂರಾರು ಮಹಿಳೆಯರು ಬದುಕು ಕಟ್ಟಿಕೊಂಡಿದ್ದಾರೆ. ಆಟಿಕೆ ತಯಾರಿಕೆ ಕಾರ‍್ಯದಿಂದ ಉತ್ತಮ ಸಂಪಾದನೆ ಮಾಡುತ್ತಿರುವುದಾಗಿ ಮಹಿಳೆಯರೇ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಮಾಣವನ್ನು ಹೆಚ್ಚು ಮಾಡುವಂತೆ ಕಾರ‍್ಯಕ್ರಮ ರೂಪಿಸಲಾಗುವುದು. ಬೊಂಬೆ ಉದ್ಯಮದ ಮೂಲಕ ಹೊಸ ಉದ್ಯೋಗ ಸೃಷ್ಟಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ದಿಗ್ವಿಜಯ್‌ ಬೋಡ್ಕೆ, ಜಿಪಂ ಉಪಕಾರ್ಯದರ್ಶಿ ಟಿ.ಕೆ. ರಮೇಶ್‌, ಜಿಪಂ ಮುಖ್ಯ ಯೋಜನಾ ಅಧಿಕಾರಿ ಚಿಕ್ಕ ಸುಬ್ಬಯ್ಯ, ಚನ್ನಪಟ್ಟಣ ತಾಪಂ ಇಒ ಶಿವಕುಮಾರ್‌, ತಾಪಂ ಸಹಾಯಕ ನಿರ್ದೇಶಕ ಸಿದ್ದಲಿಂಗಯ್ಯ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು, ಸಂಜೀವಿನಿ ಸಿಬ್ಬಂದಿ ಮತ್ತು ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜಾತಿ, ಧರ್ಮಾಧಾ​ರಿತ ರಾಜ​ಕೀ​ಯಕ್ಕೆ ಮನ್ನಣೆ ನೀಡಲ್ಲ: ಅನಿತಾ ಕುಮಾ​ರ​ಸ್ವಾಮಿ

ಕುಶಲಕರ್ಮಿಗಳೊಂದಿಗೆ ಚರ್ಚೆ, ಆಟಿಕೆ ಖರೀದಿ: ತಾಲೂಕಿನ ಮುನಿಯಪ್ಪನ ದೊಡ್ಡಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ರಚನೆ ಮಾಡಲಾಗಿರುವ ಸಂಜೀವಿನಿ ಒಕ್ಕೂಟದ ಸ್ವ-ಸಹಾಯ ಗುಂಪಿನ ಮಹಿಳೆಯರು ಸಿದ್ಧಪಡಿಸುವ ಮರದ ಬೊಂಬೆ ತಯಾರಿಕಾ ಘಟಕಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ಫಗ್ಗನ್‌ ಸಿಂಗ್‌ ಕುಲಸ್ತೆ ಕುಶಲಕರ್ಮಿಗಳೊಂದಿಗೆ ಸುಮಾರು ಅರ್ಧ ತಾಸು ಚರ್ಚೆ ನಡೆಸಿದರು. ಈ ವೇಳೆ ಆಟಿಕೆ ತಯಾರಿಕೆ ವಿಧಾನ, ನೈಸರ್ಗಿಕ ಬಣ್ಣ ಹಾಗೂ ಅರಗು ಬಳಸುವ ವಿಧಾನಗಳ ಕುರಿತು ಮಾಹಿತಿ ಪಡೆದ ಸಚಿವರು, ಆಟಿಕೆ ತಯಾರಿಕೆ ವಿಧಾನವನ್ನು ವೀಕ್ಷಿಸಿದರು. ಈ ವೇಳೆ ಅಲ್ಲಿನ ಮಹಿಳಾ ಕುಶಲಕರ್ಮಿಗಳೊಂದಿಗೆ ಚರ್ಚೆ ನಡೆಸಿ ಅವರ ಸಮಸ್ಯೆ ಆಲಿಸಿದರು. ಬೊಂಬೆ ತಯಾರಿಕಾ ವಿಧಾನವನ್ನು ಕಂಡು ವಿಸ್ಮಯಗೊಂಡ ಅವರು, 500 ರು. ಮೌಲ್ಯದ ಬೊಂಬೆಗಳನ್ನು ಖರೀದಿಸಿದರು.

Latest Videos
Follow Us:
Download App:
  • android
  • ios