*  ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಡಗವಾದಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘ *  ಹಾಲಿ, ಮಾಜಿ ಅಧ್ಯಕ್ಷರ ಭ್ರಷ್ಟಾಚಾರಕ್ಕೆ ಸೊಸೈಟಿ ಬಲಿ*  ಸರ್ಕಾರ ಕೂಡಲೇ ಜನರಿಗೆ ಹಣ ಕೊಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹ

ಮಂಡ್ಯ(ಏ.24): ರಾಜ್ಯಕ್ಕೆ(Karnataka) ಮಾದರಿಯಾಗಿದ್ದ ಕೃಷಿ ಪತ್ತಿನ ಸಹಕಾರ ಸಂಘವೊಂದು ದಿವಾಳಿಯಾದ ಘಟನೆ ಮಂಡ್ಯ(Mandya) ಜಿಲ್ಲೆಯ ಮಳವಳ್ಳಿ(Malavalli) ತಾಲೂಕಿನ ತಡಗವಾದಿ ಗ್ರಾಮದಲ್ಲಿ ನಡೆದಿದೆ. ಡೆಪಾಸಿಟ್ ಹಣ ವಾಪಸ್ ನೀಡೋದಕ್ಕೂ ಸಾಧ್ಯವಾಗದೆ ಕೃಷಿ ಪತ್ತಿನ ಸಹಕಾರ ಸಂಘ ಬಾಗಿಲು ಬಂದ್ ಮಾಡಿದೆ. 

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ(Primary Agricultural Co-operative Society) ಇಟ್ಟಿದ್ದ ಹಣ ವಾಪಸ್ ತೆಗೆದುಕೊಳ್ಳಲು ಸಾಧ್ಯವಾಗದೇ ಜನರು ಕಂಗಾಲಾಗಿ ಹೋಗಿದ್ದಾರೆ. ಹಾಲಿ, ಮಾಜಿ ಅಧ್ಯಕ್ಷರ ಭ್ರಷ್ಟಾಚಾರಕ್ಕೆ(Corruption) ತಡಗವಾದಿ ಗ್ರಾಮದ ಸೊಸೈಟಿ ಬಲಿಯಾಗಿದೆ ಅಂತ ಹೇಳಲಾಗುತ್ತಿದೆ.

Sri Lanka Bankrupt : ಭಾರತದ ಉದಾಹರಣೆ ನೀಡಿ, 3.6 ಟನ್ ಚಿನ್ನ ಮಾರಾಟ ಮಾಡಿದ ಶ್ರೀಲಂಕಾ!

ಇದೇ ಕೃಷಿ ಪತ್ತಿನ ಸಹಕಾರ ಸಂಘ ಕೆಲವು ವರ್ಷದ ಹಿಂದಷ್ಟೇ ಕೋಟ್ಯಾಂತರ ರೂಪಾಯಿ ಲಾಭದಲ್ಲಿತ್ತು. ಲಾಭದ ಹಣದಲ್ಲೇ ಗ್ರಾಮದಲ್ಲಿ ಸೂಪರ್ ಮಾರ್ಕೆಟ್ ಸಹ ನಿರ್ಮಾಣ ಮಾಡಲಾಗಿತ್ತು. ಉತ್ತಮ ಸೇವೆ ನೀಡುವ ಮೂಲಕ ಗ್ರಾಹಕರ ನಂಬಿಕೆಗೂ ಪಾತ್ರವಾಗಿತ್ತು. ಇದೇ ಕಾರಣಕ್ಕಾಗಿಯೇ 335 ಮಂದಿ 1.30 ಕೋಟಿ ಹಣವನ್ನ FD ಮಾಡಿದ್ದರು ಅಂತ ತಿಳಿದು ಬಂದಿದೆ. 

3100 ಮಂದಿ ಉಳಿತಾಯ ಖಾತೆಯಲ್ಲಿ(Savings Account) 1.40 ಕೋಟಿ ಹಣ ಇಟ್ಟಿದ್ದಾರೆ. ಸದ್ಯ ಸೊಸೈಟಿಯಲ್ಲಿ ಗ್ರಾಹಕರಿಗೆ ನೀಡಲು ಹಣವೇ ಇಲ್ಲ. ಜನರಿಗೆ ಉತ್ತರ ನೀಡಲಾಗದೆ ಸೊಸೈಟಿ ಬಾಗಿಲು ಮುಚ್ಚಲಾಗಿದೆ. ಕೂಲಿನಾಲಿ ಮಾಡಿ ಕೂಡಿಟ್ಟಿದ್ದ ಹಣ ವಾಪಸ್ ತೆಗೆದುಕೊಳ್ಳಲು ಸಾಧ್ಯವಾಗದೆ ಜನರು ಸಂಕಷ್ಟಕ್ಕೀಡಾಗಿದ್ದಾರೆ. 

ಹಾಲಿ ಆಡಳಿತ ಮಂಡಳಿ ಅಧ್ಯಕ್ಷರಾಗಿದ್ದ ಅಧ್ಯಕ್ಷ ಚೌಡಯ್ಯ, ಮಾಜಿ ಅಧ್ಯಕ್ಷ ಹನುಮಂತು ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. ಸರ್ಕಾರ(Government of Karnataka) ಕೂಡಲೇ ಜನರಿಗೆ ಹಣ ಕೊಡಿಸಲು ಕ್ರಮ ತೆಗೆದುಕೊಳ್ಳಬೇಕು. ಚೌಡಯ್ಯ, ಹನುಮಂತು ಬಂಧಿಸಿ ಕ್ರಿಮಿನಲ್ ಕೇಸ್ ಹಾಕಬೇಕು ಅಂತ ಗ್ರಾಮಸ್ಥರು(Villagers) ಒತ್ತಾಯಿಸಿದ್ದಾರೆ. 

Sri Lanka Economic Crisis ದೇಶ ದಿವಾಳಿಯಾದದ್ದು ಹೇಗೆ? ಆ ಒಂದು ಕುಟುಂಬ ರಾಜಕೀಯದ ಕಥೆ!

ರಿಯಲ್‌ ಎಸ್ಟೇಟ್‌ ಕಂಪನಿ ಸೂಪರ್‌ಟೆಕ್‌ ದಿವಾಳಿ ಘೋಷಣೆ: 25,000 ಮನೆ ಖರೀದಿದಾರರಿಗೆ ಸಂಕಷ್ಟ

ನವದೆಹಲಿ: ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸೂಪರ್‌ಟೆಕ್‌ ರಿಯಲ್‌ ಎಸ್ಟೇಟ್‌ ಕಂಪನಿಯನ್ನು ದಿವಾಳಿ ಎಂದು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಶುಕ್ರವಾರ ಘೋಷಣೆ ಮಾಡಿದೆ. ಬಾಕಿ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿದ ಎನ್‌ಸಿಎಲ್‌ಟಿ ಈ ಘೋಷಣೆ ಮಾಡಿದೆ. 

ಹೀಗಾಗಿ ಮುಂದಿನ ಪ್ರಕ್ರಿಯೆ ಆರಂಭವಾಗುವವರೆಗೂ, ಸೂಪರ್‌ಟೆಕ್‌ನಿಂದ ಮನೆ ಖರೀದಿಗೆ ಹಣ ಪಾವತಿ ಮಾಡಿದ್ದ ಸುಮಾರು 25000 ಜನರು ಸಂಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ. ಎನ್‌ಸಿಎಲ್‌ಟಿ ಆದೇಶವು ಸೂಪರ್‌ಟೆಕ್ ಗ್ರೂಪ್‌ನ ಇತರ ಕಂಪನಿಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅದು ತಿಳಿಸಿದೆ.