Asianet Suvarna News Asianet Suvarna News

ಕೊಡಗು: ತಲಕಾವೇರಿ ಅರ್ಚಕರ ಕುಟುಂಬದ ಒಂದು ಮೃತ ದೇಹ ಪತ್ತೆ

ಒಂದೆಡೆ ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮೆರೆಯುತ್ತಿದ್ರೆ, ಮತ್ತೊಂದೆಡೆ ಕೆಲ ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಶುರುವಾಗಿದ್ದು, ಜನರು ಮತ್ತಷ್ಟು ಆತಂಕಗೊಂಡಿದ್ದಾರೆ.ಇನ್ನು ಬ್ರಹ್ಮಗಿರಿ ಬೆಟ್ಟ ಕುಸಿದ ಕಣ್ಮರೆಯಾಗಿದ್ದ ಅರ್ಚಕರ ಕುಟುಂಬವರದ ಪೈಕಿ ಒಂದು ಮೃತ ದೇಹ ಪತ್ತೆಯಾಗಿದೆ. 

priests family one dead body found Who Missing in landslides at kodagu
Author
Bengaluru, First Published Aug 8, 2020, 4:48 PM IST

ಕೊಡಗು, (ಆ.08): ಭಾರೀ ಮಳೆ ನಡುವೆಯು ಇಂದು (ಶನಿವಾರ) ಎನ್.ಡಿ.ಆರ್.ಎಫ್. ತಂಡ ಕಾಯಾ೯ಚರಣೆ ನಡೆಸಿ ತಲಕಾವೇರಿ ದೇವಾಲಯದ ಅರ್ಚಕರ ಕುಟುಂಬದ ಐವರ ಮೖತದೇಹದ ಪೈಕಿ ಓರ್ವರ ಮೃತದೇಹವನ್ನ ಪತ್ತೆ ಹಚ್ಚಿದೆ. 

ಭಾರೀ ಮಳೆಯಿಂದಾಗಿ ಬ್ರಹ್ಮಗಿರಿ ಬೆಟ್ಟ ಕುಸಿದು ಅರ್ಚಕರ ಕುಟುಂಬ ಕಣ್ಮರೆಯಾಗಿತ್ತು.  ಅರ್ಚಕರ ಕುಟುಂಬದ ಐವರ ಮೖತದೇಹಕ್ಕಾಗಿ ಶೋಧ ಕಾಯ೯ ನಡೆಸಿತ್ತು. ಈ ವೇಳೆ ಐವರ ಪೈಕಿ ಒಬ್ಬರ ಮೖತದೇಹ ಪತ್ತೆಯಾಗಿದೆ.

ಕೊಡಗಿನಲ್ಲಿ ಅರ್ಚಕರ ಕುಟುಂಬ ಕಣ್ಮರೆ: ಕಾರ್ಯಾಚರಣೆಗೆ ಮಳೆ ಅಡ್ಡಿ

ಪ್ರಧಾನ ಅರ್ಚಕ ಟಿ.ಎಸ್.ನಾರಾಯಣ ಆಚಾರ್‌ ಅವರ ಸಹೋದರ ಆನಂದತೀಥ೯(86) ಎಂಬವರ ಮೃತ ದೇಹ ಪತ್ತೆಯಾಗಿದ್ದು, ಕೆಲವೊಂದು ಬಟ್ಟೆ, ಪಾತ್ರೆಗಳು ಸಿಕ್ಕಿದೆ. ನಾರಾಯಾಣಾಚಾರ್ ಅವರಿಗೆ ಸೇರಿದ್ದ ನಾಲ್ಕು  ಹಸುಗಳ ಕಳೇಬರ ಇದೀಗ ಪತ್ತೆಯಾಗಿದೆ.

ಭಾಗಮಂಡಲ ವ್ಯಾಪ್ತಿಯ ತಲಕಾವೇರಿಯಲ್ಲಿ ಬುಧವಾರ ತಡರಾತ್ರಿ ಸುರಿದ ಮಳೆಗೆ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಜರಿದು ತಲಕಾವೇರಿಯ ದೇವಸ್ಥಾನದ ಅರ್ಚಕರುಗಳ ಎರಡು ಮನೆ ಮೇಲೆ ಬಿದ್ದಿತ್ತು.

ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್.ನಾರಾಯಣ ಆಚಾರ್, ಪತ್ನಿ ಶಾಂತಾ, ಸಹೋದರ ಆನಂದತೀಥ೯ ಹಾಗೂ ಇಬ್ಬರು ಅರ್ಚಕರು ನಾಪತ್ತೆಯಾಗಿದ್ದು, ಇನ್ನುಳಿದವರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.

"

Follow Us:
Download App:
  • android
  • ios