ಮಲ್ಪೆ ಬೀಚ್ ಗೆ ಬೇಲಿ ಅಳವಡಿಕೆ, ನೀರಿಗಿಳಿದರೆ ಹುಷಾರ್!
ವೀಕೆಂಡ್ ಗೆ ಉಡುಪಿ ಕಡೆ ಬಂದು, ಮಲ್ಪೆ ಬೀಚ್ ಗೆ ಹೋಗಬೇಕು ಅನ್ನೋ ಪ್ಲಾನ್ ಹಾಕಿಕೊಂಡಿದ್ದರೆ ಸದ್ಯಕ್ಕೆ ಡ್ರಾಪ್ ಮಾಡುವುದೇ ಒಳ್ಳೆಯದು. ಮುಂಗಾರು ಪ್ರವೇಶದ ಹಿನ್ನೆಲೆಯಲ್ಲಿ ಕಡಲಿನ ಸ್ವಭಾವ ಬದಲಾಗಿದೆ. ಸಮುದ್ರದ ತೀರ ಪ್ರದೇಶದಲ್ಲಿ ಒಳಸುಳಿಗಳು ಹೆಚ್ಚಿದ್ದು, ಕಡಲಿಗೆ ಬೇಲಿ ಹಾಕಲಾಗಿದೆ.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ(ಜೂ.10): ವೀಕೆಂಡ್ ಗೆ ಉಡುಪಿ ಕಡೆ ಬಂದು, ಮಲ್ಪೆ ಬೀಚ್ ಗೆ ಹೋಗಬೇಕು ಅನ್ನೋ ಪ್ಲಾನ್ ಹಾಕಿಕೊಂಡಿದ್ದರೆ ಸದ್ಯಕ್ಕೆ ಡ್ರಾಪ್ ಮಾಡುವುದೇ ಒಳ್ಳೆಯದು. ಮುಂಗಾರು ಪ್ರವೇಶದ ಹಿನ್ನೆಲೆಯಲ್ಲಿ ಕಡಲಿನ ಸ್ವಭಾವ ಬದಲಾಗಿದೆ. ಸಮುದ್ರದ ತೀರ ಪ್ರದೇಶದಲ್ಲಿ ಒಳಸುಳಿಗಳು ಹೆಚ್ಚಿದ್ದು, ಕಡಲಿಗೆ ಬೇಲಿ ಹಾಕಲಾಗಿದೆ.
ಮಲ್ಪೆ ಬೀಚ್ ಬಂದ್- ಕಡಲಿಗೆ ತಡೆಗೋಡೆ ಬೇಲಿ
ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ವಿಶ್ವಪ್ರಸಿದ್ಧ ಬೀಚ್ ಇದೆ. ವಾರಾಂತ್ಯದಲ್ಲಿ ಸಾವಿರಾರು ಜನ ಇಲ್ಲಿಗೆ ಭೇಟಿ ಕೊಡುತ್ತಾರೆ. ಕಡಲಲ್ಲಿ ನೀರಾಟವಾಡಿ ಖುಷಿಪಡುತ್ತಾರೆ. ಕಳೆದ ಭಾನುವಾರವು ಕೂಡ 10 ರಿಂದ 15 ಸಾವಿರ ಪ್ರವಾಸಿಗರು ಬಂದಿದ್ದರು. ಆದರೆ ಈ ವೀಕೆಂಡ್ ಗೆ ನೀವು ಮಲ್ಪೆಗೆ ಬಂದರೆ ನೀರಿಗೆ ಇಳಿಯುವಂತಿಲ್ಲ.
CHIKKAMAGALURU ; ಅಕ್ರಮ ಗೋಮಾಂಸ ಮಾರಾಟ ಶೆಡ್ ತೆರವು
ಮಲ್ಪೆ ಬೀಚಿನ ಸುಮಾರು 400 ಮೀಟರ್ ವ್ಯಾಪ್ತಿಯಲ್ಲಿ ಬಲೆ ಎಳೆಯಲಾಗಿದೆ. ಸಮುದ್ರ ತೀರದ ಉದ್ದಕ್ಕೂ ತಡೆಗೋಡೆಯಂತೆ ಆವರಣ ಬೇಲಿಯನ್ನು ಹಾಕಲಾಗಿದೆ. ಈ ಬೇಲಿಯನ್ನು ದಾಟಿ ಯಾರೂ ಸಮುದ್ರಕ್ಕೆ ಕಾಲಿರಿಸುವಂತಿಲ್ಲ. ಒಂದು ವೇಳೆ ನೀವೇನಾದರೂ ನೀರಿಗಿಳಿದರೆ ಲೈಫ್ ಗಾರ್ಡುಗಳು ನಿಮ್ಮನ್ನು ಎಚ್ಚರಿಸುತ್ತಾರೆ. ಎಚ್ಚರಿಕೆಯನ್ನೂ ಮೀರಿ ನೀವು ನೀರಿಗಿಳಿದರೆ, ಮುಂದಿನ ಅನಾಹುತಕ್ಕೆ ನೀವೇ ಹೊಣೆಯಾಗುತ್ತೀರಿ!
ಕಳೆದವಾರ ನಾಲ್ವರ ರಕ್ಷಣೆ: ಮುಂಗಾರು ಆಗಮನದ ವೇಳೆ ಕಡಲಿನ ಸ್ವಭಾವ ಬದಲಾಗುತ್ತದೆ. ಮೇಲ್ನೋಟಕ್ಕೆ ಶಾಂತವಾಗಿ ಕಂಡರೂ, ತೀರ ಪ್ರದೇಶದಲ್ಲಿ ಒಳಸುಳಿಗಳು ಇರುತ್ತವೆ. ಕಳೆದವಾರ ಲೈಫ್ ಗಾರ್ಡ್ಗಳ ಎಚ್ಚರಿಕೆಯನ್ನು ಮೀರಿ ಕಡಲಿಗಿಳಿದ ನಾಲ್ವರನ್ನು ಪ್ರತ್ಯೇಕ ಘಟನೆಗಳಲ್ಲಿ ರಕ್ಷಿಸಲಾಗಿದೆ. ಈ ರಕ್ಷಣೆಯ ಭಾಗ್ಯ ಯಾವತ್ತೂ ಸಿಗುತ್ತೆ ಅನ್ನೋ ಗ್ಯಾರಂಟಿ ಇಲ್ಲ! ಯಾಕಂದರೆ ಸ್ಥಳೀಯ ನುರಿತ ಈಜುಗಾರರು ಕೂಡ ಇದರಿಂದ ಬಚಾವಾಗುವುದು ಸಾಧ್ಯವಿಲ್ಲ.
ಲೈಫ್ ಗಾರ್ಡ್ ಗಳು ಸಾಕಷ್ಟು ಎಚ್ಚರಿಕೆ ನೀಡಿದರೂ ಪ್ರವಾಸಿಗರು ಕೇಳೋದಿಲ್ಲ. ಅಷ್ಟೊಂದು ದೂರದಿಂದ ಬಂದಿದ್ದೇವೆ ಕಡಲಿಗಿಳಿಯಲೇ ಬೇಕು ಎಂದು ಹಠ ಹಿಡಿಯುತ್ತಾರೆ. ಸ್ವತಹ ತಾವೇ ಅಪಾಯ ತಂದುಕೊಳ್ಳುತ್ತಾರೆ. ಇದೇ ಕಾರಣಕ್ಕೆ ಸದ್ಯ ಮಲ್ಪೆ ಬೀಚ್ ನಲ್ಲಿ ತಡೆಗೋಡೆಯಾಗಿ ಬಲೆ ಅಳವಡಿಸಲಾಗಿದೆ. ಈ ಬಲೆಯನ್ನು ದಾಟಿ ಯಾರು ಬರದಂತೆ ಸೂಚಿಸಲಾಗಿದೆ.
ಖಾಲಿ ಬ್ಯಾಲೆಟ್ ಪೇಪರ್ ಹಾಕಿದ್ದರೆ ರಾಜಕೀಯದಿಂದ ನಿವೃತ್ತಿ ಹೊಂದುವೆ : Gubbi Srinivas
ಬೇಸರ ವ್ಯಕ್ತ ಪಡಿಸುವ ಪ್ರವಾಸಿಗರು: ದೂರದ ಊರುಗಳಿಂದ ಸಮುದ್ರತೀರದಲ್ಲಿ ನೀರಾಟವಾಡಲೇ ಬೇಕೆಂದು ಪ್ರವಾಸಿಗರು ಬರುತ್ತಾರೆ. ಅವರಿಗೆ ಇಲ್ಲಿನ ಪ್ರಕೃತಿ ವಿಕೋಪಗಳ ಬಗ್ಗೆ ಅರಿವಿರುವುದಿಲ್ಲ. ಹಾಗಾಗಿ ಲೈಫ್ ಗಾರ್ಡ್ ಗಳ ಜೊತೆ ಜಗಳಕ್ಕೆ ಬೀಳುತ್ತಾರೆ. ಇತ್ತೀಚಿಗೆ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಮತ್ತು ಪ್ರಕರಣ ಠಾಣೆಯ ಮೆಟ್ಟಿಲೇರಿದ ವಿದ್ಯಮಾನವೂ ನಡೆದಿದೆ. ಇದೇ ಕಾರಣಕ್ಕೆ ಕಳೆದ ಎರಡು ವರ್ಷಗಳಿಂದ ಈ ರೀತಿ ಬಲೆ ಅಳವಡಿಸಿ ಪ್ರವಾಸಿಗರನ್ನು ನಿರ್ಬಂಧಿಸಲಾಗುತ್ತಿದೆ.
Chikkamagaluru; ಕಳೆದ 4 ವರ್ಷದಲ್ಲಿ ಅಪಘಾತದಲ್ಲಿ 672 ಮಂದಿ ಸಾವು!
ಮುಂಗಾರು ಆಗಮನದ ನಿರೀಕ್ಷೆ: ಮುಂದಿನ ಕೆಲವೇ ಗಂಟೆಗಳಲ್ಲಿ ಕರಾವಳಿಯ ಮೂಲಕ ಮುಂಗಾರು ರಾಜ್ಯ ಪ್ರವೇಶಿಸುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮುಂಗಾರು ಪ್ರವೇಶದ ವೇಳೆ ಗಾಳಿಸಹಿತ ಮಳೆಯಾಗುವ ಸೂಚನೆ ಇರುವುದರಿಂದ, ಮೀನುಗಾರರ ಸಹಿತ ಯಾರೂ ಕಡಲಿಗಿಳಿಯಬಾರದೆಂಬ ಎಚ್ಚರಿಕೆ ನೀಡಲಾಗುತ್ತೆ.