Asianet Suvarna News Asianet Suvarna News

ಖಾಲಿ ಬ್ಯಾಲೆಟ್ ಪೇಪರ್ ಹಾಕಿದ್ದರೆ ರಾಜಕೀಯದಿಂದ ನಿವೃತ್ತಿ ಹೊಂದುವೆ : Gubbi Srinivas

ನನಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವ ಪ್ರಾಮುಖ್ಯತೆ ಬಗ್ಗೆ ಗೊತ್ತು. ರಾಜ್ಯಸಭೆ ಚುನಾವಣೆಯಲ್ಲಿ ಖಾಲಿ ಬ್ಯಾಲೆಟ್ ಪೇಪರ್ ಹಾಕಿದ್ದರೆ ನಾನು ರಾಜಕೀಯ ದಿಂದ ನಿವೃತ್ತಿ ಹೊಂದುವೆ ಎಂದು ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ತಿಳಿಸಿದ್ದಾರೆ. 

will retire from politics if empty ballot blank paper  put in Rajya Sabha election  says Gubbi Srinivas gow
Author
Bengaluru, First Published Jun 10, 2022, 6:26 PM IST

ವರದಿ:  ಮಹಂತೇಶ್ ಕುಮಾರ್ ಏಷ್ಯನೆಟ್ ಸುವರ್ಣ ನ್ಯೂಸ್ 

ತುಮಕೂರು (ಜೂ.10):  ರಾಜ್ಯಸಭೆ ಚುನಾವಣೆಯಲ್ಲಿ ಖಾಲಿ ಬ್ಯಾಲೆಟ್ ಪೇಪರ್ ಹಾಕಿದ್ದರೆ ನಾನು ರಾಜಕೀಯ ದಿಂದ ನಿವೃತ್ತಿ ಹೊಂದುವೆ ಎಂದು ಗುಬ್ಬಿ ಜೆಡಿಎಸ್ ಶಾಸಕ ಶ್ರೀನಿವಾಸ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಏಷ್ಯನೆಟ್ ಸುವರ್ಣ ನ್ಯೂಸ್ ನೊಂದಿಗೆ  ಮಾತನಾಡಿದ ಅವರು, ನನಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವ ಪ್ರಾಮುಖ್ಯತೆ ಬಗ್ಗೆ ನನಗೂ ಗೊತ್ತಿದೆ. ನಾನು ನಾಲ್ಕು ಬಾರಿ ಶಾಸಕನಾಗಿದ್ದೆ ಎಂದರು.

ಯಾಕೆ ಅವರು ಅಪಾದನೆ ಮಾಡ್ತಾರೋ ಗೊತ್ತಿಲ್ಲ. ಸಂಜೆವರೆಗೂ ಕಾಯಿ ತಿಳಿಯಲಿದೆ. ಖಾಲಿ ಬ್ಯಾಲೇಟ್ ಪೇಪರ್ ಇತ್ತೆಂದರೇ ನಾನು ಮತದಾನ ಮಾಡಿಲ್ಲ ಅನ್ನೋ  ಅಪಾದನೆ ಮಾಡೊದರಲ್ಲಿ ನಿಜ ಇರುತ್ತೆ. ನಾನು ಅಸಮರ್ಥ ವ್ಯಕ್ತಿ, ನಾನು ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಉಳಿಯಲು ಯೋಗ್ಯತೆ ಇಲ್ಲದ ವ್ಯಕ್ತಿ ಅಂತಾ ಹೇಳಲಿ ಎಂದರು.

CHIKKAMAGALURU; ಕಳೆದ 4 ವರ್ಷದಲ್ಲಿ ಅಪಘಾತದಲ್ಲಿ 672 ಮಂದಿ ಸಾವು!

ಹಾಗೇ ಇದ್ದರೆ ರಾಜ್ಯದ ಜನರ ಕ್ಷಮೆ ಕೇಳುವೇ ಇನ್ನೂ ಎಂದು ರಾಜಕೀಯಕ್ಕೆ ನಿಲ್ಲಲ್ಲ. ನಾನು ಮತ ಹಾಕಿ ಅವರಿಗೆ ತೋರಿಸಿ ಬಂದಿದ್ದೆನೆ,ಆದರೂ ಯಾಕೆ ಹೀಗೆ ಹೇಳುತ್ತಿದ್ದಾರೋ ಗೊತ್ತಿಲ್ಲ. ದ್ವೇಷ ಇರುವ ಕಾರಣ ಮತ್ತೊಬ್ಬ ಅಭ್ಯರ್ಥಿ ಯನ್ನು ಗುಬ್ಬಿ  ಕ್ಷೇತ್ರಕ್ಕೆ ತಂದು ಹಾಕಿದ್ದಾರೆ ಎಂದರು.

ನಾನು ಇಲ್ಲೆ ಇರ್ತಿನಿ ಅಂತಾ ಹೇಳಿದರೂ ಕೂಡ ಅವರು ಪಕ್ಷದಲ್ಲಿ ಇರಿಸಿಕೊಳ್ಳಲು ರೆಡಿಯಿಲ್ಲ. ನಾನು ಅವರ ಮನೆಗೆ ಸೀಮಂತಕ್ಕೆ ಹೋದೆ ,ಅಲ್ಲಿ ಹೋದರೂ ಮಾತನಾಡಿಸಿಲ್ಲ, ಕಾರ್ಯಾಗಾರಕ್ಕೆ ಹೋದರೂ ಮಾತನಾಡಿಸಿಲ್ಲ. ಇಲ್ಲಿಗೆ ಬಂದು ಸೀಮಂತಕ್ಕೆ ನಾನೇನು ಕರೆದಿದ್ದಾನಾ ಎಂದರು. ನನ್ನ ಮಗ ಕರೆದ್ರು ಮಾತನಾಡಿಸಿಕೊಳ್ತಾನೆ ಅಂದರು. ಅಷ್ಟೋಂದು ಒಳಗೆ ದ್ವೇಷ ಇದೆ. ಹೀಗಿರುವಾಗ ನನಗೆ ಹೇಗೆ ಒಳ್ಳೆಯದು ಭಯಸ್ತಾರೆಂದ್ರೆ ನನ್ನಂತ ಮೂರ್ಖ ಇನ್ನೊಬ್ಬ ಇಲ್ಲ ಎಂದರು.

Udupi; ಮಹಿಳೆಯರನ್ನು ಬಳಸಿಕೊಂಡು ಗೋಮಾಂಸ ಸಾಗಾಟಕ್ಕೆ ಯತ್ನಿಸಿದ ನಾಲ್ವರು

ನಾನು ಆತ್ಮಸಾಕ್ಷಿ ಮತ ಹಾಕಿದ್ದೆನೆ. ಬಿ ಪಾರಂ ಕೊಟ್ಟಿದ್ದಾರೆ ಅವರ ಅವಧಿ ಮುಗಿಯೋವರೆಗೂ ಆ ಪಕ್ಷಕ್ಕೆ ದ್ರೋಹ ಮಾಡಬಾರದು ಅಂತಾ ಮಾಡಿದ್ದೆನೆ. ನಾನು ರಾಜಕೀಯದಲ್ಲಿ ಅಧಿಕಾರ ಹಣ ಮುಖ್ಯವಾಗಿದ್ದರೇ ಸಚಿವರಾಗುತ್ತಿದ್ದೆ. ಯಡಿಯೂರಪ್ಪ ಮೊದಲ ಬಾರಿಗೆ ಸಿಎಂ ಆದಾಗ ಸಚಿವರಾಗುತ್ತಿದ್ದೆ. ಮೊನ್ನೆ ಕೂಡ ಹೋದ್ರಲ್ಲ ಆಗಲೂ ಆಗ್ತಿದೆ ಎಂದರು. ಒತ್ತಡ ಇತ್ತು. ಕುಮಾರಸ್ವಾಮಿ ಹೇಳಿದ್ದಾರೆ ತಾನೇ‌ ಒಂದು ವೇಳೆ ಹಾಗಿದ್ದರೇ ನಾನು ದ್ರೋಹ ಮಾಡಿದ್ದಿನಿ ಅಂತಾ . ಇಲ್ಲಾಂದ್ರೆ ಅವರು ಯಾಕೆ ಉದ್ವೇಗಕ್ಕೆ ಒಳಗಾಗಿ ಕುಮಾರಸ್ವಾಮಿ ಹೇಳಿದ್ದಾರೋ‌ ಗೊತ್ತಿಲ್ಲ. ಮಾನ ಮಾರ್ಯಾದೆ ಇಲ್ಲ ಅಂತಿದ್ದಾರೆ ಯಾಕೋ ಗೊತ್ತಿಲ್ಲ ಎಂದರು.

Follow Us:
Download App:
  • android
  • ios