Asianet Suvarna News Asianet Suvarna News

ನಾಳೆಯಿಂದ 9 ದಿನ ಯಾವುದೇ ಪತ್ರಿಕಾಗೋಷ್ಠಿ ನಡೆಸುವಂತಿಲ್ಲ..!

ಕೊರೋನಾ ವೈರಸ್‌ ಭೀತಿ ಹಿನ್ನಲೆಯಲ್ಲಿ ಪುತ್ತೂರು ಪತ್ರಕರ್ತರ ಸಂಘದ ವತಿಯಿಂದ ಪುತ್ತೂರಿನ ಪತ್ರಿಕಾ ಭವನದಲ್ಲಿ ನಡೆಸಲಾಗುವ ಪತ್ರಿಕಾಗೋಷ್ಠಿಗಳನ್ನು ಮಾ.23ರಿಂದ 31ರ ತನಕ ರದ್ದುಪಡಿಸಲಾಗಿದೆ.

 

Press conference are not allowed for next 9 days in Puttur
Author
Bangalore, First Published Mar 22, 2020, 7:29 AM IST

ಮಂಗಳೂರು(ಮಾ.22): ಕೊರೋನಾ ವೈರಸ್‌ ಭೀತಿ ಹಿನ್ನಲೆಯಲ್ಲಿ ಪುತ್ತೂರು ಪತ್ರಕರ್ತರ ಸಂಘದ ವತಿಯಿಂದ ಪುತ್ತೂರಿನ ಪತ್ರಿಕಾ ಭವನದಲ್ಲಿ ನಡೆಸಲಾಗುವ ಪತ್ರಿಕಾಗೋಷ್ಠಿಗಳನ್ನು ಮಾ.23ರಿಂದ 31ರ ತನಕ ರದ್ದುಪಡಿಸಲಾಗಿದೆ.

ಪ್ರೆಸ್‌ಮೀಟ್‌ನಲ್ಲಿ ಹಲವು ಮಂದಿ ಒಟ್ಟಾಗಿ ಸೇರುವ ಜಾಗವಾಗುವ ಕಾರಣ ಪತ್ರಕರ್ತರ ಆರೋಗ್ಯದ ದೃಷ್ಟಿಯಿಂದ ಈ ಅನಿವಾರ್ಯ ಕ್ರಮವನ್ನು ಪತ್ರಕರ್ತರ ಸಂಘದ ಸದಸ್ಯರ ಒಪ್ಪಿಗೆ ಮೇರೆಗೆ ಹಾಗೂ ಸುದ್ದಿ ಮಾಡುವ ಸಂದರ್ಭದಲ್ಲಿ ಪತ್ರಕರ್ತರು ಸರ್ಕಾರ ನೀಡಿರುವ ಎಚ್ಚರಿಕೆಯನ್ನು ಪಾಲಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಭಾರತ ತುರ್ತಾಗಿ 2 ವಾರ ಲಾಕ್‌ಡೌನ್‌ ಆಗದಿದ್ದರೆ ಭಾರೀ ಗಂಡಾಂತರ!

ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಪತ್ರಕರ್ತರ ಸಂಘದ ಅಧ್ಯಕ್ಷ ಸಂಶುದ್ದೀನ್‌ ಸಂಪ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈಗಾಗಲೇ ಕಾಸರಗೋಡು ಭಾಗದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ನಿಟ್ಟಿನಲ್ಲಿ ಕೇರಳವನ್ನು ಸಂಪರ್ಕಿಸುವ ಬಸ್‌ಗಳನ್ನೂ ಬಂದ್ ಮಾಡಲಾಗಿದೆ.

Follow Us:
Download App:
  • android
  • ios