ನವದೆಹಲಿ(ಮಾ.22): ಭಾರತವನ್ನೇಕೆ ಎರಡು ದಿನಸಂಪೂರ್ಣ ಲಾಕ್ ಡೌನ್ ಮಾಡಬೇಕು? ಬೇರೆ ಆದಿಯೇ ಇಲ್ಲವೇ?  ಕೊರೋನಾದಿಂದ ರಕ್ಷಿಸಿಕೊಳ್ಳಲು ಇದೊಂದೇ ಉಪಾಯನಾ? ಇಲ್ಲಿದೆ ಸಂಪೂರ್ಣ ಮಾಹಿತಿ

1. ತುರ್ತು ಕ್ರಮ ಕೈಗೊಳ್ಳದ ಇಟಲಿ ಬೆಲೆ ತೆರುತ್ತಿದೆ. 1 ವಾರ ಮೊದಲೇ ಲಾಕ್‌ಡೌನ್‌ ಮಾಡಿ ದಕ್ಷಿಣ ಕೊರಿಯಾ ಪಾರಾಗಿದೆ. ಭಾರತ ಇದನ್ನು ಅನುಸರಿಸಬೇಕಿದೆ.

2. ಜನರು ಮನೆಯಲ್ಲಿದ್ದರೆ ಸೋಂಕು ತಪ್ಪಿಸಬಹುದು. ಚೇತರಿಸಲೂ ಅನುಕೂಲ. ಇಲ್ಲವಾದಲ್ಲಿ 1 ವಾರದ ಬಳಿಕ ಪರಿಸ್ಥಿತಿ ಗಂಭೀರ, ಆಗ ಲಾಕ್‌ಡೌನ್‌ ಅನಿವಾರ‍್ಯ

3. ತಡವಾದರೆ ಸೋಂಕು ಮಿತಿ ಮೀರಿ ವೈದ್ಯಕೀಯ ವ್ಯವಸ್ಥೆ ಕುಸಿಯುತ್ತದೆ. ವೈದ್ಯರು, ಆರೋಗ್ಯ ಸಿಬ್ಬಂದಿಗೂ ಅಪಾಯ. ಚೀನಾ, ಇಟಲಿಯಲ್ಲಿ ಆದದ್ದೂ ಇದೇ

4. ಅಲ್ಲದೆ, ಸೋಂಕು ಪರೀಕ್ಷಿಸುವ ಕಿಟ್‌ ಕಡಿಮೆ ಇದೆ. ಲಕ್ಷಣ ಇದ್ದವರನ್ನಷ್ಟೇ ಪರೀಕ್ಷಿಸುತ್ತಿದ್ದೇವೆ. ಹಾಗಾಗಿ, ಖಾಸಗಿಯವರಿಗೂ ಪರೀಕ್ಷೆಗೆ ಅವಕಾಶ ನೀಡಬೇಕು

5. ಚೀನಾದ ನಿಯಂತ್ರಣ ಮಾಹಿತಿ ನಂಬಲರ್ಹವಾಗಿಲ್ಲ. ಅವರ ಮಾಹಿತಿ, ವಿವರ ನಿಖರವಾಗಿಲ್ಲ. ಹಾಗಾಗಿ, ಅವರ ಮಾದರಿ ಬದಲು ಕೊರಿಯಾ ಅನುಸರಣೆ ಸೂಕ್ತ

ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಿ

ಮಾ.27ರಿಂದ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, 8 ಲಕ್ಷಕ್ಕೂ ಹೆಚ್ಚು ಮಕ್ಕಳು ಪರೀಕ್ಷೆ ಬರೆಯಬೇಕಿದೆ. ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮಕ್ಕಳು ಬಸ್ಸು ಮತ್ತಿತರೆ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಿದರೆ ಅವರಿಗೆ ಸೋಂಕು ತಗಲುವ, ಅವರಿಂದಲೇ ವೈರಸ್‌ ಹಬ್ಬುವ ಅಪಾಯವಿದೆ. ಹೀಗಾದಲ್ಲಿ, ಮನೆಮನೆಗೆ ಕೊರೋನಾ ಹಬ್ಬಲು ಅನಗತ್ಯವಾಗಿ ಅವಕಾಶ ಕಲ್ಪಿಸಿದಂತಾಗುತ್ತದೆ. ಹಾಗಾಗಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಂದೂಡಿಕೆ ಸೂಕ್ತ.