ಡಿಜಿಟಲೀಕರಣದಿಂದ ಹಳೆಯ ದಾಖಲಾತಿ ಸಂರಕ್ಷಣೆ: ಸಚಿವ ಶಿವರಾಜ ತಂಗಡಗಿ

ಭೂ ದಾಖಲೆಗಳ ಡಿಜಿಟಲೀಕರಣದಿಂದ ಹಳೆಯ ದಾಖಲಾತಿಗಳ ಸಂರಕ್ಷಣೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು. 

Preservation of old records through digitization Says Minister Shivaraj Tangadagi

ಕೊಪ್ಪಳ (ಜ.09): ಭೂ ದಾಖಲೆಗಳ ಡಿಜಿಟಲೀಕರಣದಿಂದ ಹಳೆಯ ದಾಖಲಾತಿಗಳ ಸಂರಕ್ಷಣೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು. ಬೆಂಗಳೂರಿನ ತಮ್ಮ ಕಚೇರಿಯಿಂದ ಗೂಗಲ್ ಮೀಟ್ ಮೂಲಕ ಭೂ ಸುರಕ್ಷಾ ಯೋಜನೆ ಅಡಿ ಜಿಲ್ಲೆಯ ಎಲ್ಲಾ ತಾಲೂಕಿನ ಭೂ ದಾಖಲೆಗಳ ಗಣಕೀಕರಣ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಭೂ ದಾಖಲೆಗಳ ಗಣಕೀಕರಣ ಕಾರ್ಯ ಕೊಪ್ಪಳ ಜಿಲ್ಲೆಯಲ್ಲಿ ಸರಿಯಾಗಿ ಮಾಡಬೇಕು. ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಭೂ ದಾಖಲೆಗಳ ಗಣಕೀಕರಣ ಸರಿಯಾಗಿ ನಡೆಯಬೇಕು. ವಿಶೇಷವಾಗಿ ನೀರಾವರಿ ಭಾಗದಲ್ಲಿ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತವೆ.

ತಾಲೂಕು ಕಚೇರಿ, ಸರ್ವೇ ಮತ್ತು ನೊಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣದಿಂದ ಹಳೆಯ ದಾಖಲಾತಿಗಳ ಸಂರಕ್ಷಣೆ ಮಾಡಲು ಅನುಕೂಲವಾಗುತ್ತದೆ ಎಂದರು. ಹಳೆಯ ದಾಖಲೆಗಳ ಸಂರಕ್ಷಣೆ ಹಾಗೂ ಕಳುವಾಗಲು, ತಿದ್ದಲು ಅಸಾಧ್ಯ. ನೇರವಾಗಿ ಡಿಜಿಟಲ್ ಮಾಧ್ಯಮ ಮೂಲಕ ಭೂ ದಾಖಲೆ ಪಡೆದುಕೊಳ್ಳುವ ಸೌಲಭ್ಯ ಜನರಿಗೆ ಇರಲಿದೆ. ವಿಳಂಬ, ಅಡೆ ತಡೆಗಳನ್ನು ಆಲಿಸಿ, ತ್ವರಿತ ಆಡಳಿತ ಸೇವೆಯನ್ನು ಜನರಿಗೆ ಒದಗಿಸುವುದು ಉದ್ದೇಶವಾಗಿದೆ. ಜಿಲ್ಲೆಯ ಕಾರಟಗಿಯಲ್ಲಿ ಮೊದಲಿಗೆ ಪಾಯಲೇಟ ಬೇಸ್‌ ಮಾಡಿರುವುದು ಯಶಸ್ವಿಯಾಗಿದೆ. ಅಲ್ಲಿ ಚೆನ್ನಾಗಿ ಮಾಡುತ್ತಿದ್ದಾರೆ. 

ಅದರಂತೆ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಈ ಕೆಲಸ ನಡೆಯಬೇಕು ಎಂದು ಹೇಳಿದರು. ನಗರದ ತಹಸೀಲ್ದಾರ ಕಚೇರಿಯಿಂದ ಭೂ ದಾಖಲೆಗಳ ಗಣಕೀಕರಣಕ್ಕೆ ಥಂಬ್ ನೀಡುವ ಮೂಲಕ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ, ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಭೂ ದಾಖಲೆಗಳ ಗಣಕೀಕರಣ ನಡೆಯುತ್ತಿದೆ. 3 ಲಕ್ಷಕಿಂತ ಹೆಚ್ಚಿನ ಫೈಲುಗಳು ಆಗುತ್ತವೆ. ಆನ್‌ಲೈನ್‌ ಮೂಲಕ ಭೂ ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತಿದೆ. 

ಬಿಜೆಪಿಯವರದ್ದು ನಾಟಕ ಕಂಪನಿ‌: ಸಚಿವ ಶಿವರಾಜ ತಂಗಡಗಿ

ಭೂ ದಾಖಲೆಗಳ ಗಣಕೀಕರಣಕ್ಕೆ ಸಮಸ್ಯೆಗಳಾಗದಂತೆ ಪ್ರತಿ ತಾಲೂಕಿನಲ್ಲಿ 6 ಜನ ಆಪರೇಟರ್‌, 3 ಸ್ಕ್ಯಾನರ್‌, ಯುಪಿಎಸ್ ಸೇರಿದಂತೆ ಇತರೆ ಗಣಕೀಕರಣಕ್ಕೆ ಬೇಕಾಗುವ ಎಲ್ಲಾ ಉಪಕರಣ ನೀಡಲಾಗಿದೆ. ಈ ಕಾರ್ಯ ರಾಜ್ಯದ ಎಲ್ಲಾ ‌ಕಡೆಯು ನಡೆಯುತ್ತಿದೆ ಎಂದರು. ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ತಹಸೀಲ್ದಾರ ವಿಠಲ ಚೌಗಲಾ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಜಿಲ್ಲಾ ಎಲ್ಲಾ ‌ತಾಲೂಕಿನ ತಹಸೀಲ್ದಾರರು, ಉಪ ತಹಸೀಲ್ದಾರರು, ಭೂ ದಾಖಲೆಗಳ ‌ಗಣಕೀಕರಣ ಸಿಬ್ಬಂದಿ ಸೇರಿದಂತೆ ಇತರರು ಗೂಗಲ್ ಮೀಟ್‌ನಲ್ಲಿ ಭಾಗವಹಿಸಿದ್ದರು.

Latest Videos
Follow Us:
Download App:
  • android
  • ios