ನೂತನ ಜಿಲ್ಲೆಯಾಗಿ ಮುನ್ನಲೆಗೆ ಬಂದ ಗಂಗಾವತಿ, ಸಿದ್ದು ಸರ್ಕಾರಕ್ಕೆ ತಟ್ಟಲಿದೆಯಾ ಹೋರಾಟದ ಬಿಸಿ?
ಬತ್ತದ ಕಣಜ ಎಂದೇ ಖ್ಯಾತಿ ಪಡೆದಿರುವ ಗಂಗಾವತಿ(ಕಿಷ್ಮಿಂದೆ) ರಾಜ್ಯದ ನೂತನ ಜಿಲ್ಲೆಯಾಗಿ ಮುನ್ನಲೆಗೆ ಬಂದಿದೆ. ಕನಕಗಿರಿ , ಕಾರಟಗಿ, ಕಂಪ್ಲಿ, ಸಿಂಧನೂರು, ತಾವರಗೇರಾ ಪಟ್ಟಣಗಳನ್ನು ಸೇರಿಸಿ ನೂತನ ಜಿಲ್ಲೆ ಮಾಡುವಂತೆ ಹೋರಾಟ ಸಮಿತಿ ಆಗ್ರಹಿಸಿದೆ.
ಕೊಪ್ಪಳ (ಜು.2): ಬತ್ತದ ಕಣಜ ಎಂದೇ ಖ್ಯಾತಿ ಪಡೆದಿರುವ ಗಂಗಾವತಿ(ಕಿಷ್ಮಿಂದೆ) ರಾಜ್ಯದ ನೂತನ ಜಿಲ್ಲೆಯಾಗಿ ಮುನ್ನಲೆಗೆ ಬಂದಿದೆ. ಕನಕಗಿರಿ , ಕಾರಟಗಿ, ಕಂಪ್ಲಿ, ಸಿಂಧನೂರು, ತಾವರಗೇರಾ ಪಟ್ಟಣಗಳನ್ನು ಸೇರಿಸಿ ನೂತನ ಜಿಲ್ಲೆ ಮಾಡುವಂತೆ ಹೋರಾಟ ಸಮಿತಿ ಆಗ್ರಹಿಸಿದೆ. ಹೊಸ ಜಿಲ್ಲೆಗಾಗಿ ಪಕ್ಷಾತೀತವಾಗಿ ಹೋರಾಟ ನಡೆಸಲು ರಾಜಕೀಯ ಪಕ್ಷಗಳು ಸೇರಿದಂತೆ ಸಾಹಿತಿಗಳು, ಅನೇಕ ಸಂಘಗಳು ಒಗ್ಗಟ್ಟಾಗಿ ಹೋರಾಡಲು ಮುಂದಾಗಿವೆ.
ಶನಿವಾರ ನಗರದಲ್ಲಿ ಕನ್ನಡ ಸಾಹಿತ್ಯ ಭವನದಲ್ಲಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ನೂತನ ಜಿಲ್ಲೆ ಹೋರಾಟಕ್ಕೆ ಮುಂದಿನ ರೂಪುರೇಷೆ ಸಿದ್ದಪಡಿಸುವ ಕುರಿತ ಚರ್ಚಿಸಲಾಗಿದೆ. ಜಿಲ್ಲೆಯ ಅರ್ಹತೆ ಕುರಿತಂತೆ ಕಿರುಹೊತ್ತಿಗೆ ರೂಪಿಸುವುದು ಜಿಲ್ಲೆ ಘೋಷಣೆಯಾಗುವರಿಗೂ ಹೋರಾಟ ಮುಂದುವರಿಸುವುದು ಮತ್ತು ನಿರಂತರ ಸಭೆಯೊಂದಿಗೆ ಎಲ್ಲ ಸಮುದಾಯ ಮತ್ತು ಸಂಘಟನೆಗಳನ್ನು ಒಗ್ಗೂಡಿಸಲು ಕುರಿತು ಚರ್ಚಿಸಲಾಗಿದೆ.
ಕಲುಷಿತ ಕುಡಿಯುವ ನೀರಿಗೆ ಇನ್ನೆಷ್ಟು ಬಲಿಯಾಗಬೇಕು? 5 ಬಲಿಯಾದ್ರೂ ಎಚ್ಚೆತ್ತುಕೊಳ್ಳದ ಕೊಪ್ಪಳ ಜಿಲ್ಲಾಡಳಿತ!
ಕೊಪ್ಪಳ ನೂತನ ಜಿಲ್ಲೆಯಾಗುವ ವೇಳೆ ನಮ್ಮವರ ನಿರ್ಲಕ್ಷ್ಯದಿಂದ ಗಂಗಾವತಿ ಜಿಲ್ಲೆಯಾಗಲು ಸಾಧ್ಯವಾಗಲಿಲ್ಲ. ಕೊಪ್ಪಳಕ್ಕಿಂತ ಗಂಗಾವತಿ ಭೌಗೋಳಿಕವಾಗಿ, ಶೈಕ್ಷಣಿಕ, ಸಾಂಸ್ಕೃತಿಕವಾಗಿ ಮುಂದಿದೆ. ಹೀಗಾಗಿ ಜಿಲ್ಲಾ ಕೇಂದ್ರವಾಗುವ ಎಲ್ಲ ಅರ್ಹತೆ ಇದ್ದರೂ ಗಂಗಾವತಿಯ ಮುಖಂಡರು ರಾಜಕಾರಣಿಗಳು ಸಾರ್ವಜನಿಕರು ಸಂಘ-ಸಂಸ್ಥೆಗಳು ಒತ್ತಡ ಹೇರದ ಪರಿಣಾಮ ಅಂದು ಕೊಪ್ಪಳ ಜಿಲ್ಲೆಯಾಗಿ ಘೋಷಣೆಯಾಯಿತು ಇದೀಗ ಕಿಷ್ಕಿಂದೆ ವಿಶ್ವವಿಖ್ಯಾತವಾಗಿರುವುದರಿಂದ ಕಿಷ್ಕಿಂದೆ ಹೆಸರಿನಲ್ಲೇ ಗಂಗಾವತಿ ಜಿಲ್ಲಾ ಕೇಂದ್ರವಾಗಿ ಮಾಡಲು ಹೋರಾಟಕ್ಕೆ ಸಿದ್ಧತೆ ನಡೆಸಿದ್ದೇವೆ
ಗಂಗಾವತಿ ಮಾಜಿ ಶಾಸಕ ಪರಣ್ಣ ಮುನವಳ್ಳಿ