ಜನರಿಂದ ಜನರಿಗಾಗಿ ಬಿಜೆಪಿ ಪ್ರಣಾಳಿಕೆಗೆ ಸಿದ್ಧತೆ

ಚುನಾವಣೆಯ ವೇಳೆ ಮತದಾರರಿಗೆ ನೀಡುವ ಭರವಸೆಯ ಪ್ರಣಾಳಿಕೆ ಬೇರೆ ಪಕ್ಷಗಳಂತೆ ಯಾವುದೋ ಹೋಟೆಲ್‌ನಲ್ಲಿ ಕುಳಿತು, ತಯಾರಿಸುವ ಪರಿಪಾಠ ಬಿಜೆಪಿ ಪಕ್ಷದಲ್ಲಿ ಇಲ್ಲ ಜನ ಸಾಮಾನ್ಯರಿಂದ ಅಭಿಪ್ರಾಯ ಸಂಗ್ರಹಿಸಿ ಅದರ ಆಧಾರದಲ್ಲಿ ಪ್ರಣಾಳಿಕೆ ತಯಾರಿಸಲಾಗುತ್ತದೆ ಎಂದು ಬಿಜೆಪಿ ಪಕ್ಷದ ರಾಜ್ಯ ಪ್ರಣಾಳಿಕಾ ಸಲಹಾ ಸಮಿತಿ ಸಹ ಸಂಚಾಲಕ ವಿಶ್ವನಾಥ್‌ ಭಟ್‌ ತಿಳಿಸಿದರು.

Preparation of BJP manifesto by people for people snr

 ಕೋಲಾರ :  ಚುನಾವಣೆಯ ವೇಳೆ ಮತದಾರರಿಗೆ ನೀಡುವ ಭರವಸೆಯ ಪ್ರಣಾಳಿಕೆ ಬೇರೆ ಪಕ್ಷಗಳಂತೆ ಯಾವುದೋ ಹೋಟೆಲ್‌ನಲ್ಲಿ ಕುಳಿತು, ತಯಾರಿಸುವ ಪರಿಪಾಠ ಬಿಜೆಪಿ ಪಕ್ಷದಲ್ಲಿ ಇಲ್ಲ ಜನ ಸಾಮಾನ್ಯರಿಂದ ಅಭಿಪ್ರಾಯ ಸಂಗ್ರಹಿಸಿ ಅದರ ಆಧಾರದಲ್ಲಿ ಪ್ರಣಾಳಿಕೆ ತಯಾರಿಸಲಾಗುತ್ತದೆ ಎಂದು ಬಿಜೆಪಿ ಪಕ್ಷದ ರಾಜ್ಯ ಪ್ರಣಾಳಿಕಾ ಸಲಹಾ ಸಮಿತಿ ಸಹ ಸಂಚಾಲಕ ವಿಶ್ವನಾಥ್‌ ಭಟ್‌ ತಿಳಿಸಿದರು.

ನಗರದ ಬಾಲಾಜಿ ಪ್ರಾರ್ಥನಾ ಮಂದಿರದಲ್ಲಿ ಬಿಜೆಪಿ ಪಕ್ಷದಿಂದ ಕೋಲಾರ ವಿಧಾನಸಭಾ ಕ್ಷೇತ್ರದ ಪ್ರಣಾಳಿಕಾ ಸಲಹಾ ಸಂಗ್ರಹ ಅಭಿಯಾನ ಉದ್ಘಾಟಿಸಿ ಮಾತನಾಡಿ, ಜನರ ಎಲ್ಲ ಅಭಿಪ್ರಾಯಗಳನ್ನು ಸಂಗ್ರಹಿಸಿ, ಆದ್ಯತೆ ಮೇರೆಗೆ ಮುಖ್ಯ ಅಂಶಗಳನ್ನು ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡು, ನೀಡುವ ಭರವಸೆಗಳನ್ನು ಈಡೇರಿಸುವ ಬದ್ದತೆ ಹೊಂದಿರುವ ಪಕ್ಷ ಎಂದರು.

ದೇಶ ಮತ್ತು ರಾಜ್ಯದ ಆರ್ಥಿಕ ಭವಿಷ್ಯದಿಂದ ಉಚಿತ ಕೊಡುಗೆಗಳು ಒಳ್ಳೆಯದಲ್ಲ, ಕಾಂಗ್ರೆಸ್‌ ಚುನಾವಣೆಯಲ್ಲಿ ಗೆಲ್ಲಲು ಪ್ರತಿ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌, ಮನೆಗೆ ಒಡತಿಗೆ ತಿಂಗಳಿಗೆ 2000 ಹಾಗೂ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್‌ ಘೋಷಿಸಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಪ್ರತಿ ವರ್ಷ 75 ಸಾವಿರ ಕೋಟಿ ರೂ ಹೊರೆಯಾಗಲಿದ್ದು, ಇಷ್ಟುಹಣ ಹೊಂದಿಸುವುದು ಕಷ್ಟವಾಗಲಿದೆ. ಜತೆಗೆ ರಾಜ್ಯದ ಸ್ಥಿತಿ ಕಷ್ಟವಾಗುತ್ತದೆ ಎಂದರು.

ರಾಜ್ಯದಲ್ಲಿ ಬಿಜೆಪಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದ್ದು, ಆ ಬಳಿಕ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಹಂತ ಹಂತವಾಗಿ ಅನುಷ್ಠಾನ ಮಾಡಲಾಗುವುದು, ಮೋದಿ ಒಳ್ಳೆಯೆಯವರು ಎಂಬ ಕಾರಣಕ್ಕೆ ಬಿಜೆಪಿ ಪಕ್ಷಕ್ಕೆ ಮತ ನೀಡದೆ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಬಿಜೆಪಿ ಪಕ್ಷಕ್ಕೆ ಮತ ನೀಡುವ ಮೂಲಕ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಬೇಕೆಂದು ತಿಳಿಸಿದರು.

ಪಕ್ಷದ ಮುಖಂಡರಾದ ಓಂಶಕ್ತಿ ಚಲಪತಿ, ಸಿ.ಡಿ.ರಾಮಚಂದ್ರೇಗೌಡ, ಎಸ್‌.ಬಿ.ಮುನಿವೆಂಕಟಪ್ಪ, ತಿಮ್ಮರಾಯಪ್ಪ,ವಿಜಯಕುಮಾರ್‌, ಬೆಗ್ಲಿ ಪ್ರಕಾಶ್‌ ಇದ್ದರು.

 ಮೂರು ಹಂತದಲ್ಲಿ ಬಿಜೆಪಿ ಟಿಕೆಟ್ ಪಟ್ಟಿ

ಬೆಂಗಳೂರು(ಮಾ.18):  ಆಡಳಿತಾರೂಢ ಬಿಜೆಪಿಯು ಮೂರು ಹಂತಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸುವ ಬಗ್ಗೆ ಚಿಂತನೆ ನಡೆಸಿದೆ. ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ತಮ್ಮ ಅಭ್ಯರ್ಥಿಗಳನ್ನು ತ್ವರಿತವಾಗಿ ಪ್ರಕಟಿಸಿದರೂ ಚಿಂತೆಪಡುವ ಅಗತ್ಯವಿಲ್ಲ. ಆತುರಪಡದೆ ಅಳೆದೂ ತೂಗಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪ್ರಕಟಿಸೋಣ ಎಂಬ ಅಭಿಪ್ರಾಯವನ್ನು ಬಿಜೆಪಿ ವರಿಷ್ಠರು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಚುನಾವಣಾ ವೇಳಾಪಟ್ಟಿ ಪ್ರಕಟಗೊಂಡ ಬಳಿಕ ಮೊದಲ ಹಂತದಲ್ಲಿ ಯಾವುದೇ ಗೊಂದಲವಿಲ್ಲದ, ಕಗ್ಗಂಟು ಇಲ್ಲದ ಸುಮಾರು ನೂರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸುವ ಬಗ್ಗೆ ವರಿಷ್ಠರು ಒಲವು ವ್ಯಕ್ತಪಡಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ನಾನು ಬಿಜೆಪಿ ಟಿಕೆಟ್‌ ಆಕಾಂಕ್ಷಿ: ನಾಗರಾಜು

ಹಾಗೆ ನೋಡಿದರೆ, ಜೆಡಿಎಸ್‌ ಈಗಾಗಲೇ ಇತರ ಎಲ್ಲ ರಾಜಕೀಯ ಪಕ್ಷಗಳಿಗಿಂತ ಮೊದಲೇ ತನ್ನ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಪ್ರಕಟಿಸಿದೆ. ಕಾಂಗ್ರೆಸ್‌ ಈಗ ಗಂಭೀರವಾಗಿ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ಆರಂಭಿಸಿದ್ದು, ಶೀಘ್ರದಲ್ಲೇ ಪಟ್ಟಿಪ್ರಕಟಿಸುವ ನಿರೀಕ್ಷೆಯಿದೆ. ಆದರೆ, ಬಿಜೆಪಿ ಮಾತ್ರ ಅಭ್ಯರ್ಥಿಗಳ ಆಯ್ಕೆಗಿಂತ ಪಕ್ಷ ಸಂಘಟನೆ ಬಲಪಡಿಸುವತ್ತ ಹೆಚ್ಚು ಗಮನಹರಿಸಿದೆ. ಪಕ್ಷ ಸಂಘಟನೆ ಬಲಗೊಂಡ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಅಷ್ಟುಕಷ್ಟಕರವಾಗುವುದಿಲ್ಲ. ಮೇಲಾಗಿ, ಇತರ ಪಕ್ಷಗಳ ನಡೆ ಆಧರಿಸಿ ನಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದು ಎಂಬ ಲೆಕ್ಕಾಚಾರವೂ ಬಿಜೆಪಿ ನಾಯಕರಲ್ಲಿದೆ ಎನ್ನಲಾಗಿದೆ.

ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿರುವ ವಿಧಾನಸಭೆಯನ್ನು ಪ್ರತಿನಿಧಿಸುತ್ತಿರುವ ಬಹುತೇಕ ಎಲ್ಲ ಸಚಿವರಿಗೂ ಟಿಕೆಟ್‌ ನೀಡುವುದು ಖಾತ್ರಿಯಾಗಿದೆ. ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಚುನಾವಣೆಗೆ ಸ್ಪರ್ಧಿಸದೆ ತಮ್ಮ ಪುತ್ರನನ್ನು ಕಣಕ್ಕಿಳಿಸುವ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ. ಹಾಗೊಂದು ವೇಳೆ ಪುತ್ರನಿಗೆ ಟಿಕೆಟ್‌ ಸಿಕ್ಕರೆ ತಾವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ. ಆದರೆ, ಇದಕ್ಕೆ ಪಕ್ಷದ ವರಿಷ್ಠರು ಒಪ್ಪುತ್ತಾರಾ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಕಾಂಗ್ರೆಸ್ ನಾಯಿಗಳು ಮೋದಿ, ಬೊಮ್ಮಾಯಿಯನ್ನು ಕೆಟ್ಟದ್ದಾಗಿ ಬೈಯುತ್ತವೆ: ಈಶ್ವರಪ್ಪ

ಈ ನಡುವೆ ವಿಜಯ ಸಂಕಲ್ಪ ಯಾತ್ರೆ ಕೈಗೊಂಡಿರುವ ಪಕ್ಷದ ನಾಯಕರಿಗೆ ಬಹುತೇಕ ರಾಜ್ಯದ ಯಾವ ಕ್ಷೇತ್ರಗಳಲ್ಲಿ ಯಾವ ಪರಿಸ್ಥಿತಿ ಇದೆ ಎಂಬುದರ ಸ್ಥೂಲ ಮಾಹಿತಿ ಲಭ್ಯವಾಗುತ್ತಿದೆ. ಹೀಗಾಗಿ, ಈ ಯಾತ್ರೆ ಮುಗಿದ ಬಳಿಕ ರಾಜ್ಯ ಘಟಕದ ಹಿರಿಯ ನಾಯಕರು ಒಂದೆಡೆ ಕುಳಿತು ಸಮಾಲೋಚನೆ ನಡೆಸಲಿದ್ದಾರೆ. ಬಳಿಕ ಕೋರ್‌ ಕಮಿಟಿ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ವಿಸ್ತೃತ ಚಿಂತನ ಮಂಥನ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.

Latest Videos
Follow Us:
Download App:
  • android
  • ios