Asianet Suvarna News Asianet Suvarna News

ಬೆಂಗಳೂರು ಮೆಟ್ರೋ 3ನೇ ಹಂತಕ್ಕೆ ತಯಾರಿ ಆರಂಭ

*  42 ಕಿಮೀ ಉದ್ದದ ಯೋಜನೆ
*  ಡಿಪಿಆರ್‌ ಸಿದ್ಧಪಡಿಸಲು ರೈಟ್ಸ್‌ ಸಂಸ್ಥೆಗೆ ನಿಗಮ ಸೂಚನೆ
*  2025ರಿಂದ ಕಾಮಗಾರಿ, 3 ವರ್ಷದಲ್ಲಿ ಕಾಮಗಾರಿ ಪೂರ್ಣ
 

Preparation for Bengaluru Metro Phase 3 Begins grg
Author
Bengaluru, First Published Nov 1, 2021, 6:14 AM IST

ಬೆಂಗಳೂರು(ನ.01): ಬೆಂಗಳೂರು(Bengaluru) ಮೆಟ್ರೋ(Metro) ನಿಗಮವು ಎರಡನೇ ಹಂತದ ಯೋಜನೆಗಳು ಇನ್ನೂ ನಡೆದಿರುವಾಗಲೇ ಮೂರನೇ ಹಂತದ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಸುಮಾರು 42 ಕಿಲೋ ಮೀಟರ್‌ ಉದ್ದದ ಮೂರನೇ ಹಂತಕ್ಕೆ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸಲು ನಿಗಮ ಅನುಮತಿ ನೀಡಿದೆ.

ಮೂರನೇ ಹಂತದ ಯೋಜನೆಯಲ್ಲಿ ಮೆಟ್ರೋ ಮಾರ್ಗ ಎಲ್ಲೆಲ್ಲಿ ಹೋಗುತ್ತದೆ ಎಂಬ ವಿವರವನ್ನು ಒಳಗೊಂಡ ವರದಿಯನ್ನು ಮೆಟ್ರೋ ನಿಗಮ(Metro Corporation) ಸಿದ್ಧಪಡಿಸಿದೆ. ಈ ವರದಿಯ ಆಧಾರದಲ್ಲಿ ರೈಲ್‌ ಇಂಡಿಯಾ ಟೆಕ್ನಿಕಲ್‌ ಆ್ಯಂಡ್‌ ಇಕಾನಾಮಿಕ್‌ ಸರ್ವಿಸ್‌ (ರೈಟ್ಸ್‌)ಗೆ ಡಿಪಿಆರ್‌ ಸಿದ್ಧಪಡಿಸುವಂತೆ ಕೋರಿದೆ. ಮುಂದಿನ ವರ್ಷದ ಜೂನ್‌ ಒಳಗೆ ಡಿಪಿಆರ್‌ ಸಿದ್ಧಗೊಳ್ಳುವ ನಿರೀಕ್ಷೆಯಿದೆ. ಇದರ ಜೊತೆಗೆ ಟ್ರಾಫಿಕ್‌ ಸರ್ವೇ(Traffic Survey) ಕೂಡ ನಡೆಯಲಿದೆ.

ಮೆಟ್ರೋ: 40 ಅಡಿ ಮೇಲಿಂದ ಕುಸಿದು ಬಿದ್ದ ಕ್ರೇನ್‌: ತಪ್ಪಿದ ಭಾರೀ ಅನಾಹುತ

ಮೆಟ್ರೋ ನಿಗಮದ ಹಿರಿಯ ಅಧಿಕಾರಿಗಳ ಅನಿಸಿಕೆಯ ಪ್ರಕಾರ 2028ರೊಳಗೆ ಮೂರನೇ ಹಂತದ ಯೋಜನೆಯೂ ಕಾರ್ಯಗತಗೊಳ್ಳಲಿದೆ. 2025ರೊಳಗೆ ಏರ್‌ಪೋರ್ಟ್‌ ಲೈನ್‌(Airport Line) (2ಎ ಮತ್ತು 2ಬಿ) ಸೇರಿದಂತೆ ಎರಡನೇ ಹಂತದ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಿ ಆ ಬಳಿಕ ಮೂರನೇ ಹಂತದ ಯೋಜನೆಯನ್ನು ಮೂರು ವರ್ಷದೊಳಗೆ ಜನ ಬಳಕೆಗೆ ಲಭ್ಯವಾಗುವಂತೆ ಮಾಡುವ ಗುರಿ ಇಟ್ಟುಕೊಂಡಿದೆ.

ಜೆಪಿ ನಗರದಿಂದ ಹೆಬ್ಬಾಳ, ಹೊಸಹಳ್ಳಿ ಟೋಲ್‌ನಿಂದ ಕಡಬಗೆರೆ ಹೀಗೆ ಎರಡು ಕಾರಿಡಾರ್‌ನಲ್ಲಿ(Corridor) ಒಟ್ಟು 42 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ನಿರ್ಮಾಣದ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ಪ್ರಸ್ತಾವಿತ ಮೆಟ್ರೋ ಮಾರ್ಗವು ಒಟ್ಟು 9 ಕಡೆಗಳಲ್ಲಿ ಮೆಟ್ರೋ, ಸಬ್‌ ಅರ್ಬನ್‌(Suburban) ಮತ್ತು ಬಸ್‌ ಡಿಪೋವನ್ನು(Bus Depot) ಸಂಪರ್ಕಿಸಲಿದೆ. ಆದರೆ, ಯೋಜನೆಯ ಅಂತಿಮ ಸ್ವರೂಪ ಡಿಪಿಆರ್‌ ಸಿದ್ಧಗೊಂಡ ಬಳಿಕವೇ ಸ್ಪಷ್ಟವಾಗಲಿದೆ ಎಂದು ಮೆಟ್ರೋದ ಅಧಿಕಾರಿಗಳು ಹೇಳುತ್ತಾರೆ.

ಬೆಂಗಳೂರಿನ ಮೆಟ್ರೋ ಸ್ಟೇಷನ್ ಗೆ ಶಂಕರ್ ನಾಗ್ ಹೆಸರು ?

ಜೆಪಿ ನಗರದಿಂದ ಹೆಬ್ಬಾಳದ ತನಕ 31 ಕಿ.ಮೀ. ಉದ್ದ ಒಂದನೆಯ ಕಾರಿಡಾರ್‌ ಇರಲಿದೆ. ಇದರಲ್ಲಿ 22 ನಿಲ್ದಾಣಗಳು ಬರಲಿದೆ. ಜೆಪಿ ನಗರ ನಾಲ್ಕು ಮತ್ತು ಐದನೇ ಹಂತ, ಜೆಪಿ ನಗರ, ಕದಿರೇನಹಳ್ಳಿ, ಕಾಮಾಖ್ಯ ಬಸ್‌ ಡಿಪೋ, ಹೊಸಕೆರೆಹಳ್ಳಿ ಕ್ರಾಸ್‌, ಪಿಇಎಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಮೈಸೂರು ರಸ್ತೆ, ನಾಗರಬಾವಿ ಸರ್ಕಲ್‌, ವಿನಾಯಕ ಬಡಾವಣೆ, ಅಂಬೇಡ್ಕರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಬಿಡಿಎ ಕಾಂಪ್ಲೆಕ್ಸ್‌, ಸುಮನಹಳ್ಳಿ ಕ್ರಾಸ್‌, ಚೌಡೇಶ್ವರಿ ನಗರ, ಫ್ರಿಡಂ ಫೈಟರ್‌ ಕ್ರಾಸ್‌, ಕ್ರಾಂತಿವೀರ ಸ್ಟುಡಿಯೋ, ಪೀಣ್ಯ, ಬಾಹುಬಲಿ ನಗರ, ಬಿಇಎಲ್‌ ಸರ್ಕಲ್‌, ಪಟೇಲಪ್ಪ ಬಡಾವಣೆ, ಹೆಬ್ಬಾಳ ಮತ್ತು ಕೆಂಪಾಪುರದಲ್ಲಿ ನಿಲ್ದಾಣ ಸ್ಥಾಪಿಸುವ ಪ್ರಸ್ತಾವನೆ ಇದೆ. ಕಾರಿಡಾರ್‌-2 11 ಕಿ.ಮೀ. ಇರಲಿದ್ದು ಕಡಬಗೆರೆ, ಫಾರೆಸ್ಟ್‌ ಗೇಟ್‌, ಬ್ಯಾಡರಹಳ್ಳಿ ಹೆರೋಹಳ್ಳಿ. ಸುಂಕದಕಟ್ಟೆ, ಸುಮನಹಳ್ಳಿ ಕ್ರಾಸ್‌, ವಿನಾಯಕ ನಗರ, ಕೆಎಚ್‌ಬಿ ಕಾಲೋನಿ ಮತ್ತು ಹೊಸಹಳ್ಳಿ ನಿಲ್ದಾಣಗಳು ಬರಲಿದೆ.

ಎರಡನೇ ಹಂತದ ಯೋಜನೆಯ ಮುಕ್ತಾಯದ ನಂತರ ಒಟ್ಟು 175 ಕಿ.ಮೀ. ಉದ್ದದ ಜಾಲವನ್ನು ಮೆಟ್ರೋ ಹೊಂದಲಿದೆ. ಆದರೆ ಮೆಟ್ರೋ ಯೋಜನೆ ಆರಂಭಗೊಂಡು ಹದಿನೈದು ವರ್ಷ ಆಗುತ್ತ ಬಂದಿದ್ದರೂ ಈವರೆಗೆ ಕೇವಲ 56.1 ಕಿ.ಮೀ. ಉದ್ದದ ಜಾಲದಲ್ಲಿ ಮಾತ್ರ ಮೆಟ್ರೋ ಕಾರ್ಯನಿರ್ವಹಿಸುತ್ತಿದೆ. ಏರ್‌ಪೋರ್ಟ್‌ ಮಾರ್ಗದ ಕೆ.ಆರ್‌. ಪುರದಿಂದ ವಿಮಾನ ನಿಲ್ದಾಣದ ಮಾರ್ಗದ ಟೆಂಡರ್‌(Tender) ಬಾಕಿ ಇರುವುದು ಸೇರಿದಂತೆ ಒಟ್ಟು 120 ಕಿ.ಮೀ.ಗೂ ಹೆಚ್ಚು ಮಾರ್ಗ ನಿರ್ಮಾಣದ ವಿವಿಧ ಹಂತದಲ್ಲಿದೆ.
 

Follow Us:
Download App:
  • android
  • ios