Asianet Suvarna News Asianet Suvarna News

ಮಂಗಳೂರು ಪ್ರತಿಷ್ಠಿತ ಎ.ಜೆ ಆಸ್ಪತ್ರೆ ನಿರ್ಲಕ್ಷ್ಯಕ್ಕೆ ಗರ್ಭಿಣಿ ಸಾವು, ರಣರಂಗವಾದ ಆಸ್ಪತ್ರೆ ಆವರಣ

 ವೈದ್ಯರ ‌ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು ಆರೋಪಿಸಿ ಮಂಗಳೂರಿನ ಪ್ರತಿಷ್ಠಿತ ಎ.ಜೆ. ಆಸ್ಪತ್ರೆಗೆ‌‌ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ

Pregnant woman dies Mangaluru AJ Hospital due to negligence of doctor gow
Author
First Published Jul 26, 2023, 4:40 PM IST | Last Updated Jul 26, 2023, 4:40 PM IST

ಭರತ್ ರಾಜ್ ಏಷ್ಯಾನೆಟ್ ಸುವರ್ಣ ‌ನ್ಯೂಸ್  

ಮಂಗಳೂರು (ಜು.26): ಖಾಸಗಿ ಆಸ್ಪತ್ರೆ ವೈದ್ಯರ ‌ನಿರ್ಲಕ್ಷ್ಯದಿಂದ ಗರ್ಭಿಣಿ ಸಾವು ಆರೋಪಿಸಿ ಮಂಗಳೂರಿನ ಪ್ರತಿಷ್ಠಿತ ಎ.ಜೆ. ಆಸ್ಪತ್ರೆಗೆ‌‌ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದ ಘಟನೆ ನಡೆದಿದ್ದು, ಭಾರೀ ಮಳೆಯ ಮಧ್ಯೆ ನಡೆದ ಪ್ರತಿಭಟನೆಗೆ ಮಂಗಳೂರಿನ ಎ.ಜೆ.ಆಸ್ಪತ್ರೆ ಅಕ್ಷರಶಃ ರಣರಂಗವಾಗಿದೆ.

ಮೃತದೇಹ ಆಸ್ಪತ್ರೆಯಿಂದ ಸಾಗಿಸಲು ಬಿಡದೇ ಕುಟುಂಬಸ್ಥರು ಮತ್ತು ಸಾರ್ವಜನಿಕರು ಹಾಗೂ ವಿಶ್ವಕರ್ಮ ಸಮುದಾಯದ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ‌ನೂಕಾಟ ತಳ್ಳಾಟ ನಡೆದು ಮಂಗಳೂರಿನ ಕುಂಟಿಕಾನ ಬಳಿಯ ಎ.ಜೆ.‌ಮೆಡಿಕಲ್ ಕಾಲೇಜು ಆಸ್ಪತ್ರೆ ಆವರಣ ರಣರಂಗವಾಗಿದೆ. ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುಕ್ಕೇಡಿಯ ಶಿಲ್ಪಾ ಆಚಾರ್ಯ (36) ಮೃತಪಟ್ಟ ಗರ್ಭಿಣಿಯಾಗಿದ್ದು, ಜುಲೈ 2ರಂದು ಹೆರಿಗೆ ನೋವು ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಆವತ್ತು ಸಿಜೆರಿನ್ ಮಾಡಿ ಡೆಲೆವರಿ ಮಾಡಬೇಕೆಂದು ಡ್ಯೂಟಿ ಡಾಕ್ಟರ್ ಹೇಳಿದ್ದು, ಆದರೆ ವೈದ್ಯೆ ವೀಣಾಗೆ ಕರೆ ಮಾಡಿದಾಗ ಭಾನುವಾರವಾದ ಕಾರಣ ಬರಲ್ಲ ಎಂದಿದ್ದರಂತೆ.

Bengaluru: ಮನೆ ದೋಚಿ ನಿಂಬೆಹಣ್ಣು ಇಡ್ತಿದ್ದ ಜ್ಯೋತಿಷಿ, ಚಿನ್ನಾಭರಣ ಸಹಿತ ಎಸ್ಕೇಪ್

ಹೀಗಾಗಿ ಅದೇ ದಿನ ವೀಣಾ ಅನುಪಸ್ಥಿತಿಯಲ್ಲಿ ಶಿಲ್ಪಾಗೆ ಸಿಜೆರಿನ್ ಮಾಡಿ ಬೇರೆ ವೈದ್ಯರು ಡೆಲಿವರಿ ಮಾಡಿದ್ದು, ಹೆಣ್ಣು ಮಗು ಆಗಿದೆ, ಆದರೆ ಗರ್ಭಕೋಶವನ್ನು ತೆಗೆಯಬೇಕಾಗುತ್ತದೆ ಎಂದಿದ್ದಾರೆ. ಆ ಬಳಿಕ ಎರಡು ದಿನಗಳ ನಂತರ ಶಿಲ್ಪಾಗೆ ಜ್ವರ ಬಂದಿದೆ ಎಂದು ಚಿಕಿತ್ಸೆ ನೀಡಿದ್ದು, 5 ದಿನಗಳ ನಂತರ ಬ್ರೆನ್ ಮೇಜ‌ರ್ ಡ್ಯಾಮೇಜ್ ಆಗಿದೆ ಎಂದಿದ್ದಾರೆ. 

ಜುಲೈ 25ರಂದು ಐಸಿಯುನಲ್ಲಿ ಶಿಲ್ಪಾ ಸಾವನ್ನಪ್ಪಿದ್ದಾಗಿ ಮಾಹಿತಿ ನೀಡಿದ್ದಾರೆ. ಸದ್ಯ ಸಾವಿಗೆ ವೈದ್ಯರ ನಿರ್ಲಕ್ಷ್ಯ ಹಾಗೂ ಬೇರೆ ವೈದ್ಯರಿಂದ ಡೆಲಿವರಿ ಮಾಡಿಸಿದ್ದೇ ಕಾರಣ ಎಂದು ಶಿಲ್ಪಾ ಪತಿ ಪ್ರದೀಪ್ ಆರೋಪ ಮಾಡಿದ್ದಾರೆ. ಅದರಂತೆ ಶಿಲ್ಪಾ ಪತಿ ಪ್ರದೀಪ್ ಆಚಾರ್ಯ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಎ. ಜೆ ಆಸ್ಪತ್ರೆಯ ವೈದ್ಯರಾದ ವೀಣಾ ಭಗವಾನ್ ಹಾಗೂ ಡೀನ್ ಅಶೋಕ ಹೆಗಡೆ, ಅನಸ್ತೇಶಿಯಾ ಡಾ.ಗುರುರಾಜ್ ತಂತ್ರಿ, ಆಡಳಿತ ವರ್ಗ ಹಾಗೂ ಸಿಬ್ಬಂಧಿಗಳ ನಿರ್ಲಕ್ಷತನದ ವಿರುದ್ದ 174(3)(vi) ಸಿ.ಆರ್‌.ಪಿ‌.ಸಿ ಯಂತೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೈಸೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ 25 ಲಕ್ಷ ಹಣದ ಜತೆ ಮಹಿಳಾ ಪ್ರೊಫೆಸರ್‌ ಎಸ್ಕೇಪ್!

ಈ ಮಧ್ಯೆ ಇಂದು ಮರಣೋತ್ತರ‌ ಪರೀಕ್ಷೆಗಾಗಿ ಸರ್ಕಾರಿ ವೆನ್ ಲಾಕ್ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದ್ದು, ಈ ವೇಳೆ ಎ.ಜೆ. ಆಸ್ಪತ್ರೆ ಬಳಿ ಮೃತದೇಹ ತಡೆದು ಸಂಬಂಧಿಕರು, ಸಾರ್ವಜನಿಕರು ಹಾಗೂ ವಿಶ್ವಕರ್ಮ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆ ಆಡಳಿತ ಸ್ಥಳಕ್ಕೆ ಬರುವಂತೆ ಮಳೆಯೇ ಮಧ್ಯೆ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಅಂಬ್ಯುಲೆನ್ಸ್ ತಡೆದ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ನೂಕಾಟ ನಡೆದಿದ್ದು, ಪೊಲೀಸರ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಕೊನೆಗೂ ಪೊಲೀಸ್ ಬಲ ಪ್ರಯೋಗಿಸಿ ಮೃತದೇಹ ಸಾಗಿಸಿದ ಪೊಲೀಸರು ಮಂಗಳೂರಿನ ಸರ್ಕಾರಿ ವೆನ್ ಲಾಕ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

Latest Videos
Follow Us:
Download App:
  • android
  • ios