ಮೈಸೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ 25 ಲಕ್ಷ ಹಣದ ಜತೆ ಮಹಿಳಾ ಪ್ರೊಫೆಸರ್ ಎಸ್ಕೇಪ್!
ಮೈಸೂರಿನ ಪ್ರತಿಷ್ಠಿತ ಎಟಿಎಂಇ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಫೀಸ್ ದುಡ್ಡು ಕದ್ದು ಮಹಿಳಾ ಪ್ರೊಫೆಸರ್ ಪರಾರಿಯಾಗಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಕಾಲೇಜು ನಿರಾಕರಿಸಿದೆ.
ಮೈಸೂರು (ಜು.25): ಮೈಸೂರಿನ ಪ್ರತಿಷ್ಠಿತ ಎಟಿಎಂಇ ಕಾಲೇಜಿನಲ್ಲಿ ವಿದ್ಯಾರ್ಥಿಗಳ ದುಡ್ಡು ಕದ್ದು ಮಹಿಳಾ ಪ್ರೊಫೆಸರ್ ಒಬ್ಬರು ಪರಾರಿಯಾಗಿರುವ ಘಟನೆ ನಡೆದಿದೆ. 25 ಲಕ್ಷ ರೂ. ಹಣದೊಂದಿಗೆ ಪ್ರೊಫೆಸರ್ ನಾಪತ್ತೆಯಾಗಿದ್ದಾರೆ.ಘಟನೆ ಬಳಿಕ ಪರೀಕ್ಷೆ ಹೊಸ್ತಿಲಲ್ಲಿ ಇರುವ ವಿದ್ಯಾರ್ಥಿಗಳಿಗೆ ಪೀಕಲಾಟವಾಗಿದೆ. ಬರೋಬ್ಬರಿ 200 ವಿದ್ಯಾರ್ಥಿಗಳಿಗೆ ಪ್ರೊಫೆಸರ್ ಮೋಸ ಮಾಡಿದ್ದು, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ ಸಹಾಯಕ ಪ್ರಾಧ್ಯಾಪಕಿ ಹರ್ಷಿತಾ ವಿದ್ಯಾರ್ಥಿಗಳಿಂದ ಫೀಸ್ ಕಲೆಕ್ಟ್ ಮಾಡಿದ್ದಳು. ಇದೀಗ ಪರೀಕ್ಷಾ ಶುಲ್ಕದ ಹಣದೊಂದಿಗೆ ಎಸ್ಕೇಪ್ ಆಗಿದ್ದಾಳೆ. ಈ ಸಂಬಂಧ ವಿದ್ಯಾರ್ಥಿಗಳು ವರುಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆರೋಪಿ ಪ್ರೊ.ಹರ್ಷಿತಾ ಮತ್ತು ಎಟಿಎಂಐ ಕಾಲೇಜು ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಾಳೆಯೇ ಪರೀಕ್ಷೆ ನಿಗದಿಯಾಗಿರುವ ಹಿನ್ನೆಲೆ, ಹರ್ಷಿತಾಗೂ ನಮಗೂ ಸಂಬಂಧ ಇಲ್ಲ. ಹೊಸದಾಗಿ ಫೀಸ್ ಕಟ್ಟಿ ಎಂದು ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಹಿಂಸೆ ನೀಡುತ್ತಿದೆ. ವಿದ್ಯಾರ್ಥಿಗಳು ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಕಟ್ಟಿ ಮೋಸ ಹೋಗಿದ್ದಾರೆ. ಪ್ರೊ.ಹರ್ಷಿತಾ ನಕಲಿ ರಶೀದಿ ನೀಡಿ ವಿದ್ಯಾರ್ಥಿಗಳನ್ನು ಯಾಮಾರಿಸಿದ್ದಾಳೆ.
ಯುಪಿಎಸ್‌ಸಿಯಲ್ಲಿ ದೇಶಕ್ಕೆ 570ನೇ ರ‍್ಯಾಂಕ್ ಪಡೆದ ಸ್ಲಂ ಹುಡುಗ ಹುಸೇನ್
ಈ ಪ್ರಕರಣವು ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಂಬಂತಾಗಿದೆ. ಏಕೆಂದರೆ ಪ್ರೊಫೆಸರ್ ಮಾಡಿದ ತಪ್ಪಿಗೆ ಕಾಲೇಜು ವಿದ್ಯಾರ್ಥಿಗಳಿಗೆ ಸಂಕಷ್ಟವಾಗಿದೆ. ಪ್ರೊಫೆಸರ್ ತಪ್ಪು ಒಪ್ಪಿಕೊಂಡ ಮೇಲೂ ಪರೀಕ್ಷೆ ಬರೆಯಲು ಮಕ್ಕಳಿಗೆ ಮೈಸೂರಿನ ಎಟಿಎಂಇ ಕಾಲೇಜು ಅವಕಾಶ ನೀಡುತ್ತಿಲ್ಲ.
ಘಟನೆ ಸಂಬಂಧ ಕಾಲೇಜು ಮುಖ್ಯಸ್ಥರ ಮುಂದೆ ಪ್ರೊ.ಹರ್ಷಿತಾ ತಪ್ಪೊಪ್ಪಿಗೆ ಬರೆದುಕೊಟ್ಟಿದ್ದಾರೆ. ಈ ವಿಚಾರವನ್ನು ಮಾಧ್ಯಮದ ಮುಂದೆ ಕಾಲೇಜು ಆಡಳಿತಾಧಿಕಾರಿ ಡಾ.ಸಚ್ಚಿದಾನಂದ ಒಪ್ಪಿಕೊಂಡಿದ್ದಾರೆ. ಇಷ್ಟೆಲ್ಲ ಆದ ನಂತರವೂ ಫೀಸ್ ಕಟ್ಟುವಂತೆ ಮಕ್ಕಳ ಮೇಲೆ ಫೀಸ್ ಕಟ್ಟುವಂತೆ ಕಾಲೇಜು ಒತ್ತಡ ಹೇರುತ್ತಿದೆ.
ಕೇವಲ 35 ಪಾಸ್ ಅಂಕ ಗಳಿಸಿದ ತುಷಾರ್ ಸುಮೇರಾ ಐಎಎಸ್ ಅಧಿಕಾರಿ!
ಯಾವ ಕಾರಣಕ್ಕೆ ಮಕ್ಕಳು ಅವರಿಗೆ ಹಣ ಕೊಟ್ಟಿದ್ದಾರೆ ಗೊತ್ತಿಲ್ಲ. ಸುಮಾರು 24.5ಲಕ್ಷ ಹಣ ಬರಬೇಕು. ಈಗಾಗಲೇ ಆಂತರಿಕ ಪರೀಕ್ಷೆಗಳಿಗೆ ಅವಕಾಶ ಕೊಟ್ಟಿದೆ. ಪರೀಕ್ಷೆಗೆ ಕೂರಬೇಕು ಅಂದ್ರೆ ಆಡಳಿತ ಮಂಡಳಿ ಅಧ್ಯಕ್ಷರ ಬಳಿ ಹೋಗಿ ಬರಲಿ ಎಂಬುದು ಆಡಳಿತಾಧಿಕಾರಿ ವಾದವಾಗಿದೆ. ಹೀಗಾಗಿ ಇಂದು ಪರೀಕ್ಷೆ ಬರೆಯಬೇಕಿರುವ ಹಲವು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕಾಲೇಜು ಆಡಳಿತ ಹಾಗೂ ಪ್ರೊಫೆಸರ್ ನಡುವಿನ ಜಗಳದಲ್ಲಿ ಕಾಲೇಜು ಮಕ್ಕಳು ಹೈರಾಣಾವಾಗಿರುವುದಂತೂ ಸುಳ್ಳಲ್ಲ