MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಖಡಕ್ ಅಧಿಕಾರಿ ಎಂಟ್ರಿ ಬಳಿಕ ರೆಸಾರ್ಟ್ ಆಗಿದ್ದ ಪರಪ್ಪನ ಅಗ್ರಹಾರದಲ್ಲಿ ನಿಜವಾದ ಜೈಲು ಜೀವನ ಆರಂಭ!

ಖಡಕ್ ಅಧಿಕಾರಿ ಎಂಟ್ರಿ ಬಳಿಕ ರೆಸಾರ್ಟ್ ಆಗಿದ್ದ ಪರಪ್ಪನ ಅಗ್ರಹಾರದಲ್ಲಿ ನಿಜವಾದ ಜೈಲು ಜೀವನ ಆರಂಭ!

'ಫೈವ್‌ಸ್ಟಾರ್ ಜೈಲು' ಎಂದು ಕುಖ್ಯಾತವಾಗಿದ್ದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಈಗ ಶಿಸ್ತಿನ ಪರ್ವ ಆರಂಭವಾಗಿದೆ. ಖಡಕ್ ಅಧಿಕಾರಿಗಳ ನೇಮಕದ ನಂತರ, ಜೈಲಿನೊಳಗೆ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಲಾಗಿದ್ದು, ಕೈದಿಗಳ ಐಷಾರಾಮಿ ಜೀವನಕ್ಕೆ ಅಂತ್ಯ ಹಾಡಲು ದಾಳಿಗಳನ್ನು ನಡೆಸಲಾಗುತ್ತಿದೆ.

2 Min read
Author : Gowthami K
Published : Feb 23 2026, 02:42 PM IST
Share this Photo Gallery
  • FB
  • TW
  • Linkdin
  • Whatsapp
15
ಐಷಾರಾಮಿ ಜೀವನದಿಂದ ಜೈಲು ಜೀವನದತ್ತ!
Image Credit : Asianet News

ಐಷಾರಾಮಿ ಜೀವನದಿಂದ ಜೈಲು ಜೀವನದತ್ತ!

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಒಂದು ಕಾಲದಲ್ಲಿ ಅಕ್ರಮಗಳು, ಐಷಾರಾಮಿ ಜೀವನ ಮತ್ತು ‘ಫೈವ್‌ಸ್ಟಾರ್ ಜೈಲು’ ಎಂಬ ಅಪಖ್ಯಾತಿಗೆ ಕಾರಣವಾಗಿತ್ತು. ಇದೀಗ ಪರಪ್ಪನ ಅಗ್ರಹಾರ ಜೈಲಿನ ಚಿತ್ರಣ ಸಂಪೂರ್ಣವಾಗಿ ಬದಲಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಖಡಕ್ ಅಧಿಕಾರಿಗಳ ನೇಮಕದ ಬಳಿಕ ಜೈಲಿನೊಳಗಿನ ಅಕ್ರಮಗಳಿಗೆ ಕಡಿವಾಣ ಬೀಳುತ್ತಿದ್ದು, ಶಿಸ್ತು ಹಾಗೂ ನಿಯಮಾವಳಿಗಳ ಕಟ್ಟುನಿಟ್ಟಿನ ಜಾರಿಗೆ ಚಾಲನೆ ದೊರೆತಿದೆ.

25
ಜೈಲಿನೊಳಗೆ ನಿಷೇಧಿತ ವಸ್ತುಗಳ ಬಳಕೆ
Image Credit : Asianet News

ಜೈಲಿನೊಳಗೆ ನಿಷೇಧಿತ ವಸ್ತುಗಳ ಬಳಕೆ

ಈ ಹಿಂದೆ ಜೈಲಿನೊಳಗೆ ಕೈದಿಗಳು ಐಷಾರಾಮಿ ಜೀವನ ನಡೆಸುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ನಿರಂತರ ವರದಿಗಳು ಪ್ರಕಟವಾಗಿದ್ದವು. ಕೈದಿಗಳ ಕಳ್ಳಾಟ, ಹಣದ ಲೇವಾದೇವಿ, ಜೈಲಿನೊಳಗೆ ನಿಷೇಧಿತ ವಸ್ತುಗಳ ಬಳಕೆ ಬಹಿರಂಗವಾಗಿ ಚರ್ಚೆಗೆ ಗ್ರಾಸವಾಗಿತ್ತು. ಕೆಲ ಕೈದಿಗಳು ತಮ್ಮ ಸೆಲ್‌ಗಳನ್ನು ಐಷಾರಾಮಿ ಕೊಠಡಿಗಳಂತೆ ರೂಪಿಸಿಕೊಂಡು, ಅಡುಗೆ ಪಾತ್ರೆಗಳು, ಅಡುಗೆ ಸಾಮಗ್ರಿಗಳು, ಹೆಚ್ಚುವರಿ ಬಟ್ಟೆಗಳು, ಶೂಗಳು, ಬೆಡ್ಶೀಟ್‌ಗಳು, ದಿಂಬುಗಳು ಸೇರಿದಂತೆ ದಿನನಿತ್ಯದ ಅಗತ್ಯಕ್ಕಿಂತ ಹೆಚ್ಚಿನ ವಸ್ತುಗಳನ್ನು ಸಂಗ್ರಹಿಸಿಕೊಂಡಿದ್ದರು. ಇದಲ್ಲದೆ ಮೊಬೈಲ್ ಫೋನ್‌, ಸಿಮ್ ಕಾರ್ಡ್‌, ಚಾರ್ಜರ್‌, ಇಯರ್‌ಫೋನ್‌ಗಳ ಬಳಕೆ, ಕುಳಿತುಕೊಳ್ಳಲು ಚೇರ್‌, ಮನರಂಜನೆಗಾಗಿ ಟಿವಿ ವ್ಯವಸ್ಥೆಯೂ ಇದ್ದದ್ದು ಬೆಳಕಿಗೆ ಬಂದಿತ್ತು. ಕೈದಿಗಳಿಂದ ಹಣ ಪಡೆದು ಜೈಲಾಧಿಕಾರಿಗಳು ಹಾಗೂ ಸಿಬ್ಬಂದಿಗಳು ‘ರಾಜಾತಿಥ್ಯ’ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿದ್ದವು.

Related Articles

Related image1
ಪರಪ್ಪನ ಅಗ್ರಹಾರದಲ್ಲಿ ಜೈಲು ಸಿಬ್ಬಂದಿಗೆ ಹಲ್ಲೆ ಮಾಡಿದ ಕೈದಿಗಳು; ಅಸಿಸ್ಟಂಟ್ ಜೈಲರ್ ಮೇಲೆ ಇಬ್ಬರ ಹಲ್ಲೆ
Related image2
ಕಟ್ಟುನಿಟ್ಟು ಮಾಡಿದರೂ ನಿಲ್ಲದ ಪರಪ್ಪನ ಅಗ್ರಹಾರ ಪವಾಡ
35
ಐಪಿಎಸ್ ಅಧಿಕಾರಿ ಅನ್ಶುಕುಮಾರ್ ಖಡಕ್ ನಿಯಮ
Image Credit : Asianet News

ಐಪಿಎಸ್ ಅಧಿಕಾರಿ ಅನ್ಶುಕುಮಾರ್ ಖಡಕ್ ನಿಯಮ

ಈ ಎಲ್ಲಾ ಅಕ್ರಮಗಳಿಗೆ ತೆರೆ ಎಳೆಯುವ ಉದ್ದೇಶದಿಂದ ಸರ್ಕಾರ ಖಡಕ್ ಅಧಿಕಾರಿಗಳನ್ನು ಜೈಲಿಗೆ ನಿಯೋಜಿಸಿತು. ಐಪಿಎಸ್ ಅಧಿಕಾರಿಯಾಗಿ ಅನ್ಶುಕುಮಾರ್ ಅವರನ್ನು ನೇಮಕ ಮಾಡಲಾಗಿದ್ದು, ಕಾರಾಗೃಹ ಡಿಜಿಪಿಯಾಗಿ ಅಲೋಕ್ ಕುಮಾರ್ ಅಧಿಕಾರ ಸ್ವೀಕರಿಸಿದ ಬಳಿಕ ಜೈಲಿನೊಳಗಿನ ಕಾರ್ಯವೈಖರಿಯಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ. ಅಧಿಕಾರಿಗಳ ಕಟ್ಟುನಿಟ್ಟಿನ ನಿರ್ದೇಶನದಂತೆ ಜೈಲಿನಲ್ಲಿ ನಿರಂತರ ದಾಳಿ (ರೇಡ್) ಕಾರ್ಯಾಚರಣೆ ಆರಂಭವಾಗಿದೆ.

45
ಪದೇ ಪದೇ ಜೈಲಿಗೆ ದಾಳಿ
Image Credit : Asianet News

ಪದೇ ಪದೇ ಜೈಲಿಗೆ ದಾಳಿ

ಇತ್ತೀಚೆಗೆ ಜೈಲು ಸಿಬ್ಬಂದಿಗಳು ಕೈದಿಗಳ ಸೆಲ್‌ಗಳ ಮೇಲೆ ದಾಳಿ ನಡೆಸಿ, ಅವರು ಬಳಸುತ್ತಿದ್ದ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪಾತ್ರೆಗಳು, ಅಡುಗೆ ಸಾಮಗ್ರಿಗಳು, ಚೇರ್‌ಗಳು ಸೇರಿದಂತೆ ಅನಧಿಕೃತವಾಗಿ ಇಟ್ಟುಕೊಂಡಿದ್ದ ವಸ್ತುಗಳನ್ನು ಸಂಗ್ರಹಿಸಿ ಜೈಲು ಆವರಣದಲ್ಲೇ ಡಂಪ್ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಸುಮಾರು ಎರಡು ಟ್ರ್ಯಾಕ್ಟರ್ ಲೋಡ್ ವಸ್ತುಗಳನ್ನು ತೆಗೆದುಕೊಂಡು ಹೋಗಿ ಜೈಲು ಆವರಣದಲ್ಲಿ ರಾಶಿ ರಾಶಿಯಾಗಿ ಹಾಕಲಾಗಿದೆ. ಬಕೆಟ್‌ಗಳು, ಬೆಡ್ಶೀಟ್‌ಗಳು, ಪಾತ್ರೆಗಳು, ಅಡುಗೆ ಸಾಮಗ್ರಿಗಳು, ಚೇರ್‌ಗಳು ಸೇರಿದಂತೆ ಜೈಲಿನ ನಿಯಮಗಳಿಗೆ ವಿರುದ್ಧವಾಗಿ ಇಡಲಾಗಿದ್ದ ವಸ್ತುಗಳ ದೊಡ್ಡ ರಾಶಿ ಜೈಲು ಆವರಣದಲ್ಲಿ ಕಾಣಿಸಿಕೊಂಡಿದೆ.

55
ಸಿಬ್ಬಂದಿಗಳ ಮೇಲೂ ಕಟ್ಟುನಿಟ್ಟಿನ ನಿಗಾ
Image Credit : Asianet News

ಸಿಬ್ಬಂದಿಗಳ ಮೇಲೂ ಕಟ್ಟುನಿಟ್ಟಿನ ನಿಗಾ

ಖಡಕ್ ಅಧಿಕಾರಿಗಳ ನೇಮಕದ ಬಳಿಕ ಪರಪ್ಪನ ಅಗ್ರಹಾರ ಜೈಲಿನ ವಾತಾವರಣದಲ್ಲಿ ಸ್ಪಷ್ಟ ಬದಲಾವಣೆ ಕಂಡುಬರುತ್ತಿದ್ದು, ಕೈದಿಗಳ ಮೇಲೆ ನಿಯಮಾನುಸಾರ ನಿಯಂತ್ರಣ, ಸಿಬ್ಬಂದಿಗಳ ಮೇಲೂ ಕಟ್ಟುನಿಟ್ಟಿನ ನಿಗಾವಹಿಸುವ ಕ್ರಮ ಜಾರಿಯಲ್ಲಿದೆ. ‘ಫೈವ್‌ಸ್ಟಾರ್ ಜೈಲು’ ಎಂಬ ಟೀಕೆಗೆ ಕಾರಣವಾಗಿದ್ದ ಅಕ್ರಮಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಈ ಕ್ರಮಗಳು ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಜೈಲಿನಲ್ಲಿ ಶಿಸ್ತು ಮತ್ತು ಪಾರದರ್ಶಕ ಆಡಳಿತ ಕಾಪಾಡುವ ಗುರಿಯೊಂದಿಗೆ ಕಾರ್ಯಾಚರಣೆ ಮುಂದುವರಿಯಲಿದೆ ಎಂಬ ಸಂದೇಶವನ್ನು ಅಧಿಕಾರಿಗಳು ನೀಡಿದ್ದಾರೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬೆಂಗಳೂರು
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ
ಸುದ್ದಿ
ಬೆಂಗಳೂರು ನಗರ

Latest Videos
Recommended Stories
Recommended image1
ಅಡ್ಡಪಲ್ಲಕ್ಕಿ ಉತ್ಸವದ ವೇಳೆ ಬಂದೂಕಿನಿಂದ 'ಗಾಳಿಯಲ್ಲಿ ಗುಂಡು' ಹಾರಿಸಿದ ಬಸನಗೌಡ ಪಾಟೀಲ್; ಈಗ ಪೊಲೀಸರ ಅತಿಥಿ!
Recommended image2
ಇಂಡಸ್ಟ್ರಿಯಲ್ ಕಾರಿಡಾರ್ ಸ್ಥಾಪನೆಗೆ 1 ಸಾವಿರ ಎಕರೆ ಜಾಗ ಗುರುತು: ಉ. ಕರ್ನಾಟಕಕ್ಕೆ ಬಂಪರ್
Recommended image3
60 ಸಾವಿರದ ಕ್ಯಾಮೆರಾ ಆರ್ಡರ್​ ಮಾಡಿದ್ರೆ ಬಂತು ವಾಷಿಂಗ್​ ಪೌಡರ್​: ಹುಬ್ಬಳ್ಳಿಯಲ್ಲಿ ದುಬೈವಾಲಾನಿಗೆ ಮೋಸ!
Related Stories
Recommended image1
ಪರಪ್ಪನ ಅಗ್ರಹಾರದಲ್ಲಿ ಜೈಲು ಸಿಬ್ಬಂದಿಗೆ ಹಲ್ಲೆ ಮಾಡಿದ ಕೈದಿಗಳು; ಅಸಿಸ್ಟಂಟ್ ಜೈಲರ್ ಮೇಲೆ ಇಬ್ಬರ ಹಲ್ಲೆ
Recommended image2
ಕಟ್ಟುನಿಟ್ಟು ಮಾಡಿದರೂ ನಿಲ್ಲದ ಪರಪ್ಪನ ಅಗ್ರಹಾರ ಪವಾಡ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved