Asianet Suvarna News Asianet Suvarna News

ಕೋಪಿಷ್ಠ ಕೊಳಕು ಮಂಡಲ ಹಾವು ಕಡಿದು ತುಂಬು ಗರ್ಭಿಣಿ ಸಾವು

ಕುಶಾಲನಗರದ ರಾಧಾಕೃಷ್ಣ ಬಡಾವಣೆಯ ಮನೆಯೊಂದರಲ್ಲಿ ಅವಿತಿದ್ದ ವಿಷಕಾರಿ ಹಾವು ಕಚ್ಚಿ ಗರ್ಭಿಣಿ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ಕುಶಾಲನಗರದ ಶಾಜಿ ಎಂಬವರ ಪತ್ನಿ ಸುಜಿತಾ ಮೃತ ಗರ್ಭಿಣಿ.

pregnant woman died in madikeri after Russells viper bites her
Author
Bangalore, First Published Jan 26, 2020, 11:27 AM IST

ಮಡಿಕೇರಿ(ಜ.26): ಕುಶಾಲನಗರದ ರಾಧಾಕೃಷ್ಣ ಬಡಾವಣೆಯ ಮನೆಯೊಂದರಲ್ಲಿ ಅವಿತಿದ್ದ ವಿಷಕಾರಿ ಹಾವು ಕಚ್ಚಿ ಗರ್ಭಿಣಿ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ಕುಶಾಲನಗರದ ಶಾಜಿ ಎಂಬವರ ಪತ್ನಿ ಸುಜಿತಾ ಮೃತ ಗರ್ಭಿಣಿ.

ಶುಕ್ರವಾರ ರಾತ್ರಿ ಶೌಚಾಲಯಕ್ಕೆ ತೆರಳುತ್ತಿದ್ದ ಸುಜಿತಾ, ಅಡುಗೆ ಕೋಣೆ ದಾಟುತ್ತಿದ್ದಂತೆಯೇ ಕಾಲಿಗೆ ಹಾವು ಕಚ್ಚಿದೆ. ಅಡುಗೆ ಮನೆಯಲ್ಲಿ ಈ ಹಾವಿತ್ತು ಎನ್ನಲಾಗಿದೆ. ಹಾವು ಕಚ್ಚಿದ ಕೆಲವೇ ಹೊತ್ತಿನಲ್ಲಿ ಸುಜಿತಾ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಸಂಬಂಧಿಕರು ಗಾಯಾಳುವನ್ನು ಕುಶಾಲನಗರ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಬಳಿಕ ಜಿಲ್ಲಾಸ್ಪತೆಗೆ ದಾಖಲಿಸಿದ್ದಾರೆ. ತುರ್ತು ನಿಗಾ ಘಟಕದಲ್ಲಿದ್ದ ಸಜಿತಾ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ಕಿತ್ತಳೆ ಮಾರಿ ಶಿಕ್ಷಣ ದೇಗುಲ ಕಟ್ಟಿದ ಅಕ್ಷರ ಸಂತನಿಗೆ ಪದ್ಮಶ್ರೀ

ಪತಿ ಶಾಜಿ ಅವರು ಕತಾರ್‌ನಲ್ಲಿದ್ದು, ಸ್ವದೇಶಕ್ಕೆ ಬರುತ್ತಿದ್ದಾರೆ ಎನ್ನಲಾಗಿದೆ. ಮೂಲತಃ ಅರೆಕಾಡು ಗ್ರಾಮದ ಸಜಿತಾ, ವರ್ಷದ ಹಿಂದಷ್ಟೇ ವಿವಾಹವಾಗಿದ್ದರು. ರಸೆಲ್ಸ್‌ ವೈಫರ್‌ ಹಾವನ್ನು ಕನ್ನಡದಲ್ಲಿ ಕೊಳಕು ಮಂಡಲ ಎನ್ನಲಾಗುತ್ತದೆ.

ತ್ರಿಕೋನಾಕಾರದ ತಲೆಯಿರುವ ಹಾವಿನ ಮೂಗಿನ ಹೊಳ್ಳೆಗಳು ಕಣ್ಣಿನಷ್ಟೇ ದೊಡ್ಡದಾಗಿರುತ್ತವೆ. ಈ ಹಾವುಗಳು ತೆರೆದ ಹುಲ್ಲುಗಾವಲು, ಕಲ್ಲಿನ ಪ್ರದೇಶ ಹಾಗೂ ಮುಳ್ಳಿನ ಪೊದೆಗಳಲ್ಲಿ ಹೆಚ್ಚಾಗಿ ಕಂಡಬರುತ್ತವೆ. ಕೋಪಿಷ್ಟ ಹಾಗೂ ವೇಗವಾಗಿ ದಾಳಿ ಮಾಡುವ ಗುಣ ಈ ಹಾವಿನಲ್ಲಿದೆ.

Follow Us:
Download App:
  • android
  • ios