Praveen Nettaru: ಪ್ರವೀಣ್ ನೆಟ್ಟಾರು ಕುಟುಂಬ ಹೊಸ ಮನೆಗೆ ಮಳೆಗಾಲದೊಳಗೆ ಪ್ರವೇಶ

ಜು.26ರಂದು ಹತ್ಯೆಗೀಡಾದ ದ.ಕ. ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಕುಟುಂಬದ ಸ್ವಂತ ಮನೆ ಪ್ರವೇಶ ಕನಸು ಶೀಘ್ರ ನನಸಾಗಲಿದೆ. ಪ್ರವೀಣ್‌ ನೆಟ್ಟಾರು ಮನೆ ಕಾಮಗಾರಿ ಐದೂವರೆ ತಿಂಗಳಲ್ಲೇ ಮುಕ್ತಾಯಗೊಳ್ಳುತ್ತಿದೆ. ಏ.15ರೊಳಗೆ ಎಲ್ಲ ಕಾಮಗಾರಿ ಪೂರ್ತಿಗೊಂಡು ಜೂನ್‌ ಮಳೆಗಾಲದೊಳಗೆ ಮನೆಯ ಪ್ರವೇಶೋತ್ಸವ ಕೂಡ ನೆರವೇರಲಿದೆ.

Praveen Nettaru family enters own house during the rainy season manggaluru rav

ಮಂಗಳೂರು (ಫೆ.24) : ಜು.26ರಂದು ಹತ್ಯೆಗೀಡಾದ ದ.ಕ. ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಕುಟುಂಬದ ಸ್ವಂತ ಮನೆ ಪ್ರವೇಶ ಕನಸು ಶೀಘ್ರ ನನಸಾಗಲಿದೆ. ಪ್ರವೀಣ್‌ ನೆಟ್ಟಾರು ಮನೆ ಕಾಮಗಾರಿ ಐದೂವರೆ ತಿಂಗಳಲ್ಲೇ ಮುಕ್ತಾಯಗೊಳ್ಳುತ್ತಿದೆ. ಏ.15ರೊಳಗೆ ಎಲ್ಲ ಕಾಮಗಾರಿ ಪೂರ್ತಿಗೊಂಡು ಜೂನ್‌ ಮಳೆಗಾಲದೊಳಗೆ ಮನೆಯ ಪ್ರವೇಶೋತ್ಸವ ಕೂಡ ನೆರವೇರಲಿದೆ.

ದ.ಕ.ಜಿಲ್ಲಾ ಬಿಜೆಪಿಯ ಪದಾಧಿಕಾರಿಯಾಗಿದ್ದ ಪ್ರವೀಣ್‌ ನೆಟ್ಟಾರು(Praveen Nettaru) ಬೆಳ್ಳಾರೆ ಬಳಿ ಚಿಕನ್‌ ಸ್ಟಾಲ್‌ ಹೊಂದಿದ್ದರು. ಅವರನ್ನು ಜು.26ರಂದು ದುಷ್ಕರ್ಮಿಗಳು ಇರಿದು ಹತ್ಯೆ ಮಾಡಿದ್ದರು. ನಂತರದ ಬೆಳವಣಿಗೆಯಲ್ಲಿ ಪ್ರವೀಣ್‌ ನೆಟ್ಟಾರು ಪಾರ್ಥೀವ ಶರೀರ ಮೆರವಣಿಗೆ ವೇಳೆ ಬೆಳ್ಳಾರೆಯಲ್ಲಿ ಪಕ್ಷದ ನಾಯಕರ ವಿರುದ್ಧವೇ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತ ಬಿಜೆಪಿ, ಸರ್ಕಾರ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ತನಿಖೆಗೆ ಶಿಫಾರಸು ಮಾಡಿತ್ತು. ಅದರಂತೆ ಎನ್‌ಐಎ ತಂಡ ಕಾರ್ಯಾಚರಣೆ ನಡೆಸಿ ಇದರ ಹಿಂದೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಸಂಘಟನೆಯ ಕೈವಾಡವನ್ನು ಪತ್ತೆ ಮಾಡಿತ್ತಲ್ಲದೆ, ದ.ಕ. ಪೊಲೀಸರ ನೆರವಿನಲ್ಲಿ 15ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿದೆ. ತಲೆಮರೆಸಿರುವ ಆರು ಮಂದಿ ಆರೋಪಿಗಳ ಬಂಧನಕ್ಕೆ ವಾರಂಟ್‌ ಕೂಡ ಹೊರಡಿಸಿದೆ.

 

ಪ್ರವೀಣ್‌ ನೆಟ್ಟಾರು ಹತ್ಯೆ ಸಂಚಿಗೆ ಬಳಕೆಯಾಗಿದ್ದ ಚೌಲ್ಟ್ರಿ ಎನ್‌ಐಎ ಸ್ವಾಧೀನ

ಸ್ವಂತ ಸೂರು ಕನಸಾಗಿತ್ತು:

ಪ್ರವೀಣ್‌ ನೆಟ್ಟಾರು ಹೆತ್ತವರಿಗೆ ಏಕೈಕ ಪುತ್ರ, ಮನೆಯ ಆಧಾರಸ್ತಂಭವಾಗಿದ್ದರು. ಸ್ವಂತ ಮನೆ ಕನಸು ಹೊಂದಿದ್ದರು. ಮನೆ ನಿರ್ಮಾಣಕ್ಕೆ ಮುಹೂರ್ತವನ್ನೂ ನಿಗದಿಗೊಳಿಸಿದ್ದರೂ, ಅದಕ್ಕೂ ಮೊದಲೇ ಹತ್ಯೆಗೀಡಾದರು. ಪ್ರವೀಣ್‌ ಕನಸು ನನಸು ಮಾಡಲು ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ, ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಪಕ್ಷದ ವತಿಯಿಂದಲೇ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ನ.2ರಂದು ಮನೆಗೆ ಶಂಕುಸ್ಥಾಪನೆ ನೆರವೇರಿತ್ತು. ಸುಮಾರು 50 ಲಕ್ಷ ರು. ವೆಚ್ಚದ, 2,700 ಚದರ ಅಡಿ ವಿಸ್ತೀರ್ಣದ ಮನೆಯ ವಿನ್ಯಾಸ ಹಾಗೂ ಗುತ್ತಿಗೆಯನ್ನು ಮಂಗಳೂರಿನ ಮುಗೆರೋಡಿ ಕನ್‌ಸ್ಟ್ರಕ್ಷನ್‌ ವಹಿಸಿಕೊಂಡಿದೆ.

ಶೇ.80 ಕಾಮಗಾರಿ ಪೂರ್ಣ: ಕಾಮಗಾರಿ ಈಗಾಗಲೇ ಶೇ.80ರಷ್ಟುಪೂರ್ಣಗೊಂಡಿದೆ. ಆರ್‌ಸಿಸಿ ಮನೆಯ ಒಳಗಿನ ಸಾರಣೆ ಪೂರ್ತಿಯಾಗಿದ್ದು, ಹೊರಭಾಗದ ಸಾರಣೆ 15 ದಿನದೊಳಗೆ ಪೂರ್ತಿಯಾಗಿ ಬಳಿಕ ಸುಣ್ಣಬಣ್ಣ ಕಾಣಲಿದೆ. ಎಲ್ಲವೂ ಏ.15ರೊಳಗೆ ಮುಕ್ತಾಯಗೊಳ್ಳಲಿದೆ ಎನ್ನುತ್ತಾರೆ ಕಾಮಗಾರಿ ನೋಡಿಕೊಳ್ಳುತ್ತಿರುವ ಆರ್‌.ಕೆ. ಭಟ್‌.

ಸುಮಾರು 60 ಸೆಂಟ್ಸ್‌ ಜಾಗ ಹೊಂದಿದ್ದು, ಅಲ್ಲಿದ್ದ ಹಳೆ ಮನೆಯನ್ನು ಪೂರ್ತಿಯಾಗಿ ಕೆಡವಿದ್ದು, ಹಿಂಬದಿಯಲ್ಲಿ ಗುಡ್ಡವನ್ನು ತೆಗೆದು ಸ್ಥಳವನ್ನು ವಿಸ್ತಾರಗೊಳಿಸಿ ಅಲ್ಲೇ ಪಂಚಾಂಗ ನಿರ್ಮಿಸಿ ಕನಸಿನ ಮನೆ ನಿರ್ಮಿಸಲಾಗುತ್ತಿದೆ. ಪ್ರಸಕ್ತ ಪ್ರವೀಣ್‌ನ ತಂದೆ, ತಾಯಿ ಸಮೀಪದಲ್ಲೇ ಬಂಧುಗಳ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಪತ್ನಿ ಮಂಗಳೂರಿನಲ್ಲಿ ಸರ್ಕಾರಿ ಉದ್ಯೋಗದಲ್ಲಿದ್ದಾರೆ.

ಪಿಎಫ್‌ಐಗೆ ಮತ್ತೊಂದು ಶಾಕ್‌: ಉಗ್ರ ಚಟುವಟಿಕೆಗೆ ಬಳಸುತ್ತಿದ್ದ ಕಮ್ಯುನಿಟಿ ಹಾಲ್‌ ವಶ

ದಿ.ಪ್ರವೀಣ್‌ ನೆಟ್ಟಾರು ಕುಟುಂಬದ ಆಶಯದಂತೆ ಮನೆ ನಿರ್ಮಾಣಗೊಳ್ಳುತ್ತಿದೆ. ಬಿಜೆಪಿ ಆರ್ಥಿಕ ನೆರವಿನಲ್ಲಿ ಮನೆ ನಿರ್ಮಿಸಲಾಗುತ್ತಿದ್ದು, ಏ.15ರೊಳಗೆ ಕಾಮಗಾರಿ ಪೂರ್ತಿಗೊಳಿಸಿ ಮನೆಯನ್ನು ಕುಟುಂಬಕ್ಕೆ ಬಿಟ್ಟುಕೊಡಲಿದ್ದೇವೆ. ಗೃಹ ಪ್ರವೇಶ ದಿನಾಂಕವನ್ನು ಕುಟುಂಬವೇ ನಿಶ್ಚಯಿಸಿ, ಮಳೆಗಾಲಕ್ಕೂ ಮುನ್ನ ಗೃಹ ಪ್ರವೇಶ ನೆರವೇರಿಸಲಿದೆ.

-ಆರ್‌.ಕೆ. ಭಟ್‌, ಮನೆ ಕಾಮಗಾರಿ ಮೇಲುಸ್ತುವಾರಿ

Latest Videos
Follow Us:
Download App:
  • android
  • ios