ಪಿಎಫ್‌ಐಗೆ ಮತ್ತೊಂದು ಶಾಕ್: ಉಗ್ರ ಚಟುವಟಿಕೆಗೆ ಬಳಸುತ್ತಿದ್ದ ಕಮ್ಯುನಿಟಿ ಹಾಲ್ ವಶ
ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪಿಎಫ್‌ಐ ಸಂಘಟನೆಗೆ ಮತ್ತೊಂದು ಶಾಕ್ ಎದುರಾಗಿದೆ.
ಪಿಎಫ್‌ಐ ಸಂಘಟನೆಗೆ ಎನ್.ಐ.ಎ ಶಾಕ್ ನೀಡಿದ್ದು, ಉಗ್ರ ಚಟುವಟಿಕೆಗೆ ಬಳಸುತ್ತಿದ್ದ ಕಮ್ಯುನಿಟಿ ಹಾಲ್ ವಶಕ್ಕೆ ಪಡೆಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಿತ್ತೂರು ಕಮ್ಯುನಿಟಿ ಹಾಲ್'ನ 0.20 ಎಕರೆ ಜಾಗವನ್ನು ಸಂಪೂರ್ಣ ವಶಕ್ಕೆ ಪಡೆದು NIA ಆದೇಶ ಹೊರಡಿಸಿದೆ. ಇಡುಕ್ಕಿ ಗ್ರಾಮದಲ್ಲಿರೋ ಪಿಎಫ್‌ಐ ಮಿತ್ತೂರು ಕಮ್ಯುನಿಟಿ ಹಾಲ್'ನಲ್ಲಿ ಅಸಲ್ಟ್\ಅರ್ವಿಸ್ ಗ್ರೂಪ್‌ಗೆ ತರಬೇತಿ ನೀಡಲಾಗುತ್ತಿತ್ತು. ಇನ್ನು ಮಾಲೀಕರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಆದೇಶ ಪ್ರತಿಯನ್ನು ರವಾನಿಸಲಾಗಿದೆ. ಬಾಡಿಗೆ ಲೀಜ್ ಕೊಡುವಂತಿಲ್ಲ, ಪ್ರಾಪರ್ಟಿ ಸಾಗಾಟ ಮಾಡುವುದು ಹಾಲ್ ನವೀಕರಣ ಮಾಡದಂತೆ NIA ನಿರ್ಬಂಧ ಹೇರಿದೆ.