ಪ್ರವೀಣ್‌ ನೆಟ್ಟಾರು ಹತ್ಯೆ ಸಂಚಿಗೆ ಬಳಕೆಯಾಗಿದ್ದ ಚೌಲ್ಟ್ರಿ ಎನ್‌ಐಎ ಸ್ವಾಧೀನ

ಇಡ್ಕಿದು ಗ್ರಾಮದಲ್ಲಿರುವ ಮಿತ್ತೂರು ಫ್ರೀಡಂ ಕಮ್ಯುನಿಟಿ ಹಾಲಲ್‌ನ 20 ಗುಂಟೆ ಜಾಗವನ್ನು ಎನ್‌ಐಎ ಸಂಪೂರ್ಣ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಎನ್‌ಐಎ ಮಹಾನಿರ್ದೇಶಕರ ಸೂಚನೆಯಂತೆ ಬೆಂಗಳೂರು ಕಚೇರಿಯ ಮುಖ್ಯ ತನಿಖಾಧಿಕಾರಿ ಷಣ್ಮುಗಂ ಅವರು ಗುರುವಾರ ಈ ಬಗ್ಗೆ ಆದೇಶ ಹೊರಡಿಸಿದ್ದು, ಆದೇಶದ ಪ್ರತಿಯನ್ನು ಹಾಲ್‌ನ ಮಾಲೀಕರಿಗೆ, ದ.ಕ.ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗೆ ರವಾನಿಸಿದೆ. 

NIA Seized Choultry Used for Praveen Nettaru Murder Case in Mangaluru grg

ಮಂಗಳೂರು(ಫೆ.24):  ಬಿಜೆಪಿ ಮುಖಂಡ ದಿ.ಪ್ರವೀಣ್‌ ನೆಟ್ಟಾರು ಹತ್ಯೆಗೆ ಸಂಚು ರೂಪಿಸಲು ಬಳಸಿದ ಆರೋಪಕ್ಕೆ ಗುರಿಯಾಗಿರುವ ಬಂಟ್ವಾಳ ತಾಲೂಕಿನ ಮಿತ್ತೂರು ಕಮ್ಯುನಿಟಿ ಹಾಲ್‌ನ್ನು ರಾಷ್ಟ್ರೀಯ ತನಿಖಾ ಏಜೆನ್ಸಿ (ಎನ್‌ಐಎ) ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. 

ಇಡ್ಕಿದು ಗ್ರಾಮದಲ್ಲಿರುವ ಮಿತ್ತೂರು ಫ್ರೀಡಂ ಕಮ್ಯುನಿಟಿ ಹಾಲಲ್‌ನ 20 ಗುಂಟೆ ಜಾಗವನ್ನು ಎನ್‌ಐಎ ಸಂಪೂರ್ಣ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಎನ್‌ಐಎ ಮಹಾನಿರ್ದೇಶಕರ ಸೂಚನೆಯಂತೆ ಬೆಂಗಳೂರು ಕಚೇರಿಯ ಮುಖ್ಯ ತನಿಖಾಧಿಕಾರಿ ಷಣ್ಮುಗಂ ಅವರು ಗುರುವಾರ ಈ ಬಗ್ಗೆ ಆದೇಶ ಹೊರಡಿಸಿದ್ದು, ಆದೇಶದ ಪ್ರತಿಯನ್ನು ಹಾಲ್‌ನ ಮಾಲೀಕರಿಗೆ, ದ.ಕ.ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗೆ ರವಾನಿಸಿದೆ. ಈ ಆದೇಶದ ಪ್ರಕಾರ, ಎನ್‌ಐಎ ವಶದಲ್ಲಿರುವ ಜಾಗವನ್ನು ಪರಭಾರೆ ಮಾಡುವಂತಿಲ್ಲ, ಬಾಡಿಗೆ, ಲೀಸ್‌ಗೆ ಕೊಡುವಂತಿಲ್ಲ. ಅಲ್ಲಿರುವ ಯಾವುದೇ ಸೊತ್ತುಗಳನ್ನು ಸಾಗಿಸುವುದು ಅಥವಾ ನವೀಕರಿಸುವುದು ಕೂಡ ನಿಷಿದ್ಧ. ಭಯೋತ್ಪಾದನಾ ಕೃತ್ಯಗಳಿಗೆ ಸಹಕಾರಿಯಾಗುವಂತೆ ಕಾನೂನು ಬಾಹಿರವಾಗಿ ಪಿಎಫ್‌ಐ ತನ್ನ ಕಾರ್ಯಪಡೆಗೆ ಇಲ್ಲಿ ಶಸ್ತ್ರ ತರಬೇತಿ ನೀಡುವುದು ಎನ್‌ಐಎ ತನಿಖೆ ವೇಳೆ ದೃಢಪಟ್ಟಿತ್ತು.

ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌: ಎಸ್‌ಡಿಪಿಐ ಮುಖಂಡ ಸೇರಿ ಮೂವರ ಬಂಧನ

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಿಷೇಧಕ್ಕೆ ಒಳಗಾದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಸಂಘಟನೆಯ ಅಸಲ್ಟ್‌/ಸರ್ವಿಸ್‌ ಗ್ರೂಪ್‌ಗೆ ಈ ಹಾಲ್‌ನಲ್ಲಿ ಭಯೋತ್ಪಾದಕ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಎನ್‌ಐಎ ಆರೋಪ ಪಟ್ಟಿಯಲ್ಲಿ ಹೇಳಿತ್ತು.

Latest Videos
Follow Us:
Download App:
  • android
  • ios